ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 16, 2017
ನ.18 : ವಿಶೇಷ ಕಾತರ್ಿಕ ದೀಪೋತ್ಸವ
ಕಾಸರಗೋಡು: ಕಾವುಗೋಳಿ ಶ್ರೀ ಮಹಾವಿಷ್ಣು ದೇವಾಲಯದಲ್ಲಿ ಕಾತರ್ಿಕ ಮಾಸದ ವಿಶೇಷ ದೀಪೋತ್ಸವ ನ.18 ರಂದು ಶನಿವಾರ ಸಂಜೆ ಜರಗಲಿದೆ.
ಕಾರ್ಯಕ್ರಮದ ಯಶಸ್ಸಿಗೆ ಶ್ರೀ ಕ್ಷೇತ್ರದ ಸೇವಾ ಸಮಿತಿ ಸಭೆಯಲ್ಲಿ ತೀಮರ್ಾನಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ಕೆ.ಶ್ರೀನಿವಾಸ ಪಟ್ಟೇರಿ ಕಾವುಮಠ ವಹಿಸಿದ್ದರು. ಸಭೆಯಲ್ಲಿ ಬಿ.ಬಾಲಕೃಷ್ಣ ಅಗ್ಗಿತ್ತಾಯ, ಎಂ.ವಾಸುದೇವ ಕಲ್ಲೂರಾಯ, ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಎಂ.ಉದಯ ಕುಮಾರ್ ಕಲ್ಲೂರಾಯ, ನಾರಾಯಣ ಗಟ್ಟಿ, ಕೆ.ಕುಶ, ಕೃಷ್ಣಪ್ಪ, ಕೆ.ನಳಿನಾಕ್ಷನ್ ಮೊದಲಾದವರು ಮಾತನಾಡಿದರು.
ನ.18 ರಂದು ಸಂಜೆ 6.15 ಕ್ಕೆ ದೀಪಾರಾಧನೆ, 6.30 ರಿಂದ ಶ್ರೀ ಕ್ಷೇತ್ರದ ಭಜನಾ ಸಂಘದವರಿಂದ ಭಜನೆ, ರಾತ್ರಿ 7.30 ರಿಂದ ವಿಶೇಷ ದೀಪೋತ್ಸವ, 8 ಕ್ಕೆ ವಿಶೇಷ ಕಾತರ್ಿಕ ಪೂಜೆ, ಮಂಗಳಾರತಿ, ಸಾಮೂಹಿಕ ಪ್ರಾರ್ಥನೆ, ಪ್ರಸಾದ ವಿತರಣೆ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸುವಂತೆ ಕೇಳಿಕೊಳ್ಳಲಾಗಿದೆ. ಸಮಿತಿ ಪ್ರಧಾನ ಕಾರ್ಯದಶರ್ಿ ಕಕ್ಕೆಪ್ಪಾಡಿ ವಿಷ್ಣು ಭಟ್ ಸ್ವಾಗತಿಸಿ, ವಂದಿಸಿದರು.

