ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 16, 2017
ನ.22 - 23 : ಭಗವಾನ್ ಸತ್ಯಸಾಯಿ ಬಾಬಾರವರ 92 ನೇ ಹುಟ್ಟುಹಬ್ಬ ಸಂಭ್ರಮಾಚರಣೆ
ಕಾಸರಗೋಡು: ತಾಳಿಪಡ್ಪುನಲ್ಲಿರುವ ಭಗವಾನ್ ಶ್ರೀ ಸತ್ಯಸಾಯಿ ಅಭಯನಿಕೇತನ್ನಲ್ಲಿ ನ.22 ಮತ್ತು 23 ರಂದು ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ 92 ನೇ ಹುಟ್ಟು ಹಬ್ಬ ಸಂಭ್ರಮಾಚರಣೆ ನಡೆಯಲಿದೆ.
ನ.22 ರಂದು ಬೆಳಗ್ಗೆ 5 ಕ್ಕೆ ಓಂಕಾರ, ಸುಪ್ರಭಾತ, 7 ಕ್ಕೆ ಗಣಪತಿ ಹವನ, 8 ಕ್ಕೆ ಪತಾಕಾರೋಹಣ, 9.30 ಕ್ಕೆ ಸಾಯಿ ಸಹಸ್ರ ನಾಮಾರ್ಚನೆ, 11 ಕ್ಕೆ ಎಸ್.ಪಿ.ರವಿಕುಮಾರ್ದಾಸ್ ಬೆಂಗಳೂರು ಅವರಿಂದ ಹರಿಕಥಾ ಸಂಕೀರ್ತನೆ, ಮಧ್ಯಾಹ್ನ 1 ಕ್ಕೆ ಮಂಗಳಾರತಿ, ಸಂಜೆ 4 ಕ್ಕೆ ಲಲಿತಾ ಸಹಸ್ರ ನಾಮಾರ್ಚನೆ, ಮಂಗಳಾರತಿ, 6.30 ಕ್ಕೆ ರಂಗಚಿನ್ನಾರಿ ಕಾಸರಗೋಡು ಸಹಕಾರದೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ರವೀಂದ್ರ ಪ್ರಭು ಮತ್ತು ಬಳಗದಿಂದ ದಾಸ ಸಂಕೀರ್ತನೆ ಹಾಗೂ ಭಕ್ತಿಗಾನಸುಧಾ ನಡೆಯುವುದು.
ನ.23 ರಂದು ಬೆಳಗ್ಗೆ 5 ಕ್ಕೆ ಓಂಕಾರ, ಸುಪ್ರಭಾತ, ನಗರ ಸಂಕೀರ್ತನೆ, 7.30 ಕ್ಕೆ ಗಣಪತಿ ಹವನ, 10 ಕ್ಕೆ ಧಾಮರ್ಿಕ ಸಭೆ ನಡೆಯುವುದು. ಸಭೆಯಲ್ಲಿ ಸಂಸ್ಥೆಯ ಅಧ್ಯಕ್ಷ ಡಾ.ಎಸ್.ಬಿ.ಖಂಡಿಗೆ ಅಧ್ಯಕ್ಷತೆ ವಹಿಸುವರು. ಮಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷ ಶ್ವೀ ಸ್ವಾಮಿ ಜಿತಕಾಮನಂದಜೀ ವೆಬ್ಸೈಟ್ ಬಿಡುಗಡೆ ಮತ್ತು ಆಶೀರ್ವಚನ ನೀಡುವರು. ನೇತ್ರ ತಜ್ಞೆ ಡಾ.ಸುಮತಿ ನಾಯಕ್ ಮತ್ತು ಪುನರ್ನವ ಟ್ರಸ್ಟ್ನ ನವೀನ್ ಎಲ್ಲಂಗಳ ಅವರನ್ನು ಸಮ್ಮಾನಿಸಲಾಗುವುದು.ಎಸ್.ಪಿ.ರವಿಕುಮಾರ್ ದಾಸ್ ಬೆಂಗಳೂರು ಅವರು ಉಚಿತ ಕನ್ನಡಕ ವಿತರಣೆಯ ಬಳಿಕ ಧಾಮರ್ಿಕ ಭಾಷಣ ಮಾಡುವರು.
ಜೊತೆಕಾರ್ಯದಶರ್ಿ ರಾಮಕೃಷ್ಣ ಸಿ.ಎನ್, ವಿಭಾ ಕೆ, ಜೊತೆ ಕಾರ್ರ್ಯದಶರ್ಿ ಬಿ.ಪ್ರೇಂ ಪ್ರಕಾಶ್ ಉಪಸ್ಥಿತರಿರುವರು.
11.45 ಕ್ಕೆ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 2 ಕ್ಕೆ ಮಂಗಳಾರತಿ, ಪ್ರಸಾದ ಭೋಜನ, ಸಂಜೆ 6.30 ಕ್ಕೆ ನೃತ್ಯ ವೈವಿಧ್ಯ `ನೃತ್ಯ ಮೋಹನಂ' ಕಾರ್ಯಕ್ರಮದ ಬಳಿಕ ರಾತ್ರಿ 8.45 ಕ್ಕೆ ಸಿಡಿಮದ್ದು, ಹುಟ್ಟು ಹಬ್ಬದ ದೀಪ ಬೆಳಗಿಸುವುದು, ಉಯ್ಯಾಲೋತ್ಸವ, ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.


