ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 16, 2017
ನ.18 : ಉಚಿತ ಸ್ಪೆಶಾಲಿಟಿ ವೈದ್ಯಕೀಯ ಶಿಬಿರ
ಕಾಸರಗೋಡು: ಶ್ರೀ ಸತ್ಯಸಾಯಿ ಸೇವಾ ಸಮಿತಿ ಮತ್ತು ಸರ್ವಧರ್ಮ ಸಮನ್ವಯ ಟ್ರಸ್ಟ್ ಇದರ ಆಶ್ರಯದಲ್ಲಿ ಶಾಂತದುಗರ್ಾಂಬೆ ರಸ್ತೆಯ ಶ್ರೀ ಸತ್ಯಸಾಯಿ ಸೇವಾ ಕ್ಷೇತ್ರದಲ್ಲಿ ನ.18 ರಂದು ಬೆಳಗ್ಗೆ 9.30 ರಿಂದ ಮಧ್ಯಾಹ್ನ 12.30 ರ ವರೆಗೆ ಶ್ರೀ ಸತ್ಯಸಾಯಿ ಬಾಬಾರವರ 92 ನೇ ಹುಟ್ಟುಹಬ್ಬದ ಅಂಗವಾಗಿ ಮಂಗಳೂರು ಕೆಎಂಸಿ ಆಸ್ಪತ್ರೆಯ ನುರಿತ ವೈದ್ಯರ ಸಹಯೋಗದಲ್ಲಿ ಉಚಿತ ಸ್ಪೆಶಾಲಿಟಿ ವೈದ್ಯಕೀಯ ಶಿಬಿರ ನಡೆಯಲಿದೆ.
ಎಲುಬು, ಕಿವಿ, ಮೂಗು, ಸ್ತ್ರೀರೋಗ ಚಿಕಿತ್ಸೆ, ಫಸೀಶಿಯನ್, ಇ.ಸಿ.ಜಿ. ಮತ್ತು ಸಕ್ಕರೆ ಕಾಯಿಲೆಗೆ ರಕ್ತ ಪರೀಕ್ಷೆ ಉಚಿತವಾಗಿ ಮಾಡಲಾಗುವುದು.
ಶಿಬಿರದ ನಂತರ ಹೆಚ್ಚಿನ ಚಿಕಿತ್ಸೆ ಬೇಕಾಗಿದ್ದಲ್ಲಿ ಅಂತಹವರಿಗೆ ಹಸಿರು ಕಾಡರ್್ ನೀಡಲಾಗುವುದು ಹಾಗೂ ಕೆಎಂಸಿ ಆಸ್ಪತ್ರೆಯ ಜನರಲ್ ವಾಡರ್್ನಲ್ಲಿದಾಖಲಾಗುವುದಾದರೆ ರೂ.5000 ದಿಂದ ರೂ. 10,000 ರೂ. ವರೆಗೆ ವಿನಾಯಿತಿ ನೀಡಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ಕೇಳಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9995560927, 9895582142 ನಂಬ್ರದಲ್ಲಿ ಸಂಪಕರ್ಿಸಬಹುದು.


