HEALTH TIPS

No title

ಪ್ರತಿಭೆ ಮೆರೆದ ಕನ್ನಡಿಗರು ಕುಂಬಳೆ: ಕಾಸರಗೋಡು ಕಂದಾಯ ಜಿಲ್ಲಾ 58ನೇ ಶಾಲಾ ಕಲೋತ್ಸವದಲ್ಲಿ ಹಲವು ಕನ್ನಡ ವಿದ್ಯಾಥರ್ಿಗಳು ಅಪಾರ ಪ್ರತಿಭೆಯನ್ನು ಮೆರೆದಿದ್ದಾರೆ. ಕನ್ನಡ ಭಾಷಣ, ಪ್ರಬಂಧ ರಚನೆಯಲ್ಲಿ ಕಾಯರ್ಕಟ್ಟೆ ಸರಕಾರಿ ಶಾಲೆಯ ಹಿರಿಯ ಪ್ರೌಢಶಾಲೆಯ ವಿಭಾಗದ ವಿದ್ಯಾಥರ್ಿನಿ ತೇಜಸ್ವಿನಿ ಕಡೆಂಕೋಡಿ ಪ್ರಥಮ ಸ್ಥಾನ ಪಡೆದಿದ್ದಾಳೆ. ಈಕೆ ಇಂದ್ರಜಾಲ ಕೈಚಳಕ ತೋರಿಸಿದ್ದು, ಪ್ರೇಕ್ಷಕರ ಮನ ಸೆಳೆದಿದ್ದಾಳೆ. ಜಾದುಗಾರ ಬಾಲಸುಬ್ರಹ್ಮಣ್ಯ-ಶೈಲಜಾ ದಂಪತಿಯ ಪುತ್ರಿಯಾದ ಈಕೆ ಕೇರಳ, ಕನರ್ಾಟಕ, ಮಹಾರಾಷ್ಟ್ರಗಳಲ್ಲಾಗಿ ಈಗಾಗಲೇ 302 ವೇದಿಕೆಗಳಲ್ಲಿ ಜಾದೂ ಪ್ರದರ್ಶನ ನೀಡಿದ್ದಾಳೆ. ಹೈಯರ್ ಸೆಕೆಂಡರಿ ವಿಭಾಗದ ವಿದ್ಯಾಥರ್ಿನಿಯರ ಏಕಪಾತ್ರಾಭಿನಯದಲ್ಲಿ ಮಲೆಯಾಳಿ ಸ್ಪಧರ್ಾಥರ್ಿಗಳನ್ನು ಹಿಂದಿಕ್ಕಿ ಅಶ್ವಿನಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾಳೆ. ಪೈವಳಿಕೆ ನಗರ ಹೈಯರ್ ಸೆಕೆಂಡರಿ ಶಾಲೆಯ ಈ ಪ್ರತಿಭೆಯು ಇತರ ಐದು ಮಂದಿ ಸ್ಪಧರ್ಾಳುಗಳನ್ನು ಹಿಂದಿಕ್ಕಿ ಪ್ರಥಮ ಸ್ಥಾನಕ್ಕೆ ಲಗ್ಗೆ ಹಾಕಿದ್ದಾಳೆ. ಜನರಲ್ ವಿಭಾಗದಲ್ಲಿ ಕನ್ನಡಿಗರೂ ಕೂಡಾ ಮಲೆಯಾಳಂ ಕಲಿತು ಸ್ಪಧರ್ಿಸುವುದು ರೂಢಿಸಿಕೊಂಡಿರುವಾಗ ಅಶ್ವಿನಿ ಸತ್ಯ ಹರಿಶ್ಚಂದ್ರ ಎಂಬ ಕಥೆಯನ್ನು ಏಕಪಾತ್ರಾಭಿನಯದ ಮೂಲಕ ಸಾದರಪಡಿಸಿ ತೀಪರ್ುಗಾರರಿಂದ ಮೆಚ್ಚುಗೆ ಪಡೆದಿದ್ದಾಳೆ. ಹೈಸ್ಕೂಲ್ ವಿಭಾಗದ ಕವಿತಾ ರಚನೆಯಲ್ಲಿ ಪೈವಳಿಕೆ ನಗರಶಾಲೆಯ ಹತ್ತನೇ ತರಗತಿಯ ವಿದ್ಯಾಥರ್ಿ ಕೆ.ಎ.ಕಾತರ್ಿಕ್ ಎ ಶ್ರೇಣಿಯೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಸಂಸ್ಕೃತ ಪದ್ಯ ಹೇಳುವುದರಲ್ಲಿ ಎಯುಪಿಎಸ್ ಮವ್ವಾರು ಶಾಲೆಯ ನಂದಕಿಶೋರ್ ಪ್ರಥಮ ಸ್ಥಾನ ಪಡೆದಿದ್ದಾನೆ. ಭಾಷಣ ಹಿರಿಯ ಪ್ರಾಥಮಿಕ ವಿಭಾಗ-ಕೆ.ಪೂಜಾ(ಎಡನೀರು ಸ್ವಾಮೀಜಿಸ್), ಸಂಸ್ಕೃತ ಪ್ರಶ್ನೋತ್ತರಿ(ಹೈಸ್ಕೂಲ್)-ಸಿ.ಎಸ್.ಕ್ಷಿತಿಷ್(ಶೇಣಿ ಎಸ್ಎಸ್ಎಚ್ಎಸ್), ಕನ್ನಡ ಕಂಠಪಾಠ (ಹೈಯರ್ಸೆಕೆಂಡರಿ)-ಐ.ಬಿ.ಶಿವರಂಜಿನಿ(ಎಡನೀರು ಸ್ವಾಮೀಜಿಸ್), ಕನ್ನಡ ಕಂಠಪಾಠ(ಹೈಸ್ಕೂಲ್)-ಸಂದೇಶ್ ಎಚ್.ಭಟ್(ಹೋಲಿ ಫ್ಯಾಮಿಲಿ ರಾಜಪುರಂ) ಇತರ ವಿಜೇತ ವಿದ್ಯಾಥರ್ಿಗಳಾಗಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries