ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 17, 2017
ಇದು ನಮ್ಮೂರ ಯುವಕರ ಸಾಧನೆ- ಮಗುವಿನ ಪ್ರಾಣ ಉಳಿಸಲು ಕೇವಲ 6 ಗಂಟೆಯಲ್ಲಿ 508 ಕಿ.ಮೀ ಕ್ರಮಿಸಿದ ಆಂಬುಲೆನ್ಸ್ ಡ್ರೈವರ್!
ಕಾಸರಗೋಡು ಮೂಲದ ತಮೀಮ್ ನ ಮಾನವೀಯತೆ, ಕಣ್ಣೂರಿನಿಂದ ತಿರುವನಂತಪುರಕ್ಕೆ ಮಗು ರವಾನೆ
ಸಾಧನೆಯ ಹಿಂದೆ ಪತ್ರಕರ್ತನೋರ್ವನ ಶ್ರಮ ಗೆದ್ದ ಪರಿ ಅಪೂರ್ವ.
ಕಾಸರಗೋಡು: ಇತ್ತ ಕನರ್ಾಟಕದಲ್ಲಿ ರೋಗಿಗಳ ಪರದಾಟದ ಹೊರತಾಗಿಯೂ ಖಾಸಗಿ ವೈದ್ಯರು ಹಠಮಾರಿತನ ಮುಂದುವರೆಸಿದ್ದರೆ, ಅತ್ತ ಕೇರಳದಲ್ಲಿ ಆಂಬುಲೆನ್ಸ್ ಚಾಲಕನೋರ್ವ ಪ್ರಾಣಾಪಾಯದಲ್ಲಿದ್ದ ಮಗುವಿನ ಪ್ರಾಣ ಉಳಿಸುವ ಸಲುವಾಗಿ ಕೇವಲ 6 ಗಂಟೆಯಲ್ಲಿ 508 ಕಿ.ಮೀ ಕ್ರಮಿಸಿ ಸುದ್ದಿಯಾಗಿದ್ದಾನೆ.
ಕೇರಳದ ಕಾಸರಗೋಡು ಮೂಲದ ತಮೀಮ್ ಎಂಬಾತ ಪುಟ್ಟಮಗುವಿನ ಪ್ರಾಣ ಉಳಿಸುವುದಕ್ಕಾಗಿ ತನ್ನ ಪ್ರಾಣವನ್ನೂ ಲೆಕ್ಕಿಸದೆ ರಾತ್ರೋರಾತ್ರಿ ಕೇವಲ 6 ಗಂಟೆಯಲ್ಲಿ ಬರೊಬ್ಬರಿ 508 ಕಿ.ಮೀ ದೂರಕ್ಕೆ ಆಂಬುಲೆನ್ಸ್ ಚಲಾಯಿಸಿಕೊಂಡು ಬಂದು ಮಗುವನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಹೀರೋ ಆಗಿ ಮಿಂಚುತ್ತಿದ್ದಾನೆ.
ಮಾಹಿತಿ ಪ್ರಕಾರ ಫಾತಿಮಾ ಲೈಬಾ ಎಂಬ 31 ದಿನದ ಮಗುವನ್ನು ಕಣ್ಣೂರಿನ ಪೆರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಮಗುವನ್ನು ಪರೀಕ್ಷಿಸಿದ್ದ ವೈದ್ಯರು ಮಗುವಿಗೆ ತುತರ್ು ಹೃದಯ ಶಸ್ತ್ರಚಿಕಿತ್ಸೆ ಅನಿವಾರ್ಯ ಎಂದು ಹೇಳಿದ್ದರು. ಅಂತೆಯೇ ಕೂಡಲೇ ಮಗುವನ್ನು ತಿರುವನಂತಪುರಂಗೆ ಸಾಗಿಸುವಂತೆ ಸೂಚಿಸಿದರು. ಮಗುವಿನ ಪೋಷಕರು ಮರುದಿನ ಮುಂಜಾನೆ ತಿರುವನಂತಪುರದ ಶ್ರೀ ಚಿತ್ರ ತಿರುನಲ್ ವೈದ್ಯಕೀಯ ಮಹಾವಿಜ್ಞಾನ ಸಂಸ್ಥೆಯಲ್ಲಿ ವೈದ್ಯರ ಭೇಟಿಗೆ ಅವಕಾಶ ಪಡೆದರು. 500 ಕಿಲೋಮೀಟರ್ಗೂ ಅಧಿಕ ದೂರವನ್ನು ಕಡಿಮೆ ಅವಧಿಯಲ್ಲಿ ಕ್ರಮಿಸುವುದು ಸವಾಲಾಗಿತ್ತು.
ಅದರಂತೆ ಕಾಸರಗೋಡಿನಿಂದ ಆಂಬ್ಯುಲೆನ್ಸ್ ಕರೆಸಲಾಗಿತ್ತು. ಕಾಸರಗೋಡು ಮೂಲದ ಆಂಬುಲೆನ್ಸ್ ಚಾಲಕ ತಮೀಮ್ ರಿಗೆ ಈ ವಿಚಾರವನ್ನು ಕೂಡ ತಿಳಿಸಲಾಗಿತ್ತು. ಮಗುವಿನ ಪರಿಸ್ಥಿತಿ ತಿಳಿದ ತಮೀಮ್ ಆಂಬುಲೆನ್ಸ್ ಚಾಲನೆಗೆ ಒಪ್ಪಿಕೊಂಡ. ಅದರಂತೆ ರಾತ್ರಿ 8.23ಕ್ಕೆ ಪ್ರಯಾಣ ಆರಂಭಿಸಲಾಯಿತು. ಇನ್ನು ಈ ಸೂಕ್ಷ್ಮ ಕಾಯರ್ಾಚರಣೆಗೆ ಕೇರಳ ಪೊಲೀಸರು ಹಾಗು ಸಾರ್ವಜನಿಕರ ಬೆಂಬಲವೂ ಸಿಕ್ಕಿತು. ಅದರಂತೆ ಆಂಬುಲೆನ್ಸ್ ಸಾಗುವ ಮಾರ್ಗದಲ್ಲಿ ಗ್ರೀನ್ ಕಾರಿಡಾರ್ ಘೋಷಿಸಿ ಆಂಬುಲೆನ್ಸ್ ವೇಗವಾಗಿ ಚಲಿಸಲು ಅನುವು ಮಾಡಿಕೊಡಲಾಯಿತು.
ನೆರವಾದ ಚೈಲ್ಡ್ ಲೈನ್ :
ಚೈಲ್ಡ್ ಪ್ರೊಟೆಕ್ಷನ್ ಟೀಮ್ ಎಂಬ ತಂಡವೂ ಈ ಮಹತ್ತರ ಸಾಧನೆಗೆ ಸಂಪೂರ್ಣ ಸಹಾಯಹಸ್ತ ಚಾಚಿತು. ಅಗಲ ಕಿರಿದಾದ ರಸ್ತೆಯನ್ನು ಈ ಮಗುವಿನ ಪ್ರಾಣ ಉಳಿಸುವ ಸಲುವಾಗಿ ತೆರವುಗೊಳಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಮನವಿಗಳನ್ನು ಪಸರಿಸಿತು. ಪೊಲೀಸ್ ಪೈಲಟ್ ವಾಹನ, ಐಸಿಯು ಆಂಬ್ಯುಲೆನ್ಸ್ ಹಾಗೂ ಎರಡು ಕಾರುಗಳು ಇದಕ್ಕೆ ಬೆಂಗಾವಲಾಗಿ ಸಂಚರಿಸಿದವು. ಕೋಝಿಕೋಡ್ನಲ್ಲಿ ಆಹಾರ ಮತ್ತು ಇಂಧನಕ್ಕಾಗಿ ಕೇವಲ 20 ನಿಮಿಷ ನಿಲುಗಡೆ ನೀಡಲಾಯಿತು. ಅಂತಿಮವಾಗಿ ಆಂಬುಲೆನ್ಸ್ ಚಾಲಕ ತಮೀಮ್ 6 ಗಂಟೆ 45 ನಿಮಿಷದಲ್ಲಿ 508 ಕಿ.ಮೀ ದೂರವನ್ನು ಯಶಸ್ವಿಯಾಗಿ ಕ್ರಮಿಸಿ, ಮಗುವನ್ನು ಆಸ್ಪತ್ರೆಗೆ ದಾಖಲಿಸಿದನು.
ಕಳೆದ ಒಂದೂವರೆ ವರ್ಷಗಳಿಂದ ಕಾಯರ್ಾಚರಿಸುತ್ತಿರುವ ಚೈಲ್ಡ್ ಪ್ರೊಟೆಕ್ಷನ್ ಟೀಂ ನ ಜನಕ ಕಾಸರಗೋಡು ಕಾಂಞಿಂಗಾಡಿನ ಪತ್ರಕರ್ತ ಸಿ.ಕೆ. ನಾಝರ್ ಎಂಬವರು. ಅವರ ಶ್ರಮದ ಫಲವಾಗಿ ಇಂದು ಕೇರಳದ 14 ಜಿಲ್ಲೆಗಳಲ್ಲೂ ಸಕ್ರೀಯವಾಗಿ ವ್ಯಾಪಿಸಿರುವ ಈ ತಂಡ ಈ ಮಗುವಿನ ಪ್ರಾಣ ರಕ್ಷಣೆಯನ್ನು ಪಣವಾಗಿ ಸ್ವೀಕರಿಸಿ ಗೆದ್ದಿರುವುದು ಸಂಘಟನೆಯ ಸ್ತುತ್ಯರ್ಹ ಸೇವೆಗೆ ಸಾಕ್ಷಿ.
ಯಾವುದೇ ತೊಂದರೆ ಇಲ್ಲದೆ ಮುಂಜಾನೆ 3.23ಕ್ಕೆ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಮಗು ಇನ್ನೂ ಜೀವನ್ಮರಣ ಸ್ಥಿತಿಯಲ್ಲಿದ್ದು, ಚಿಕಿತ್ಸೆ ಮುಂದುವರೆದಿದೆ. ಆಂಬುಲೆನ್ಸ್ ಚಾಲಕನ ಸಾಹಸಕ್ಕೆ ಇದೀಗ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದ್ದು, ಮಗುವಿನ ಜೀವ ಉಳಿಸುವಂತೆ ಕೇರಳ ಜನತೆ ದೇವರ ಮೊರೆ ಹೋಗಿದ್ದಾರೆ.
ಇನ್ನು ಸಾಮಾನ್ಯ ದಿನಗಳಲ್ಲಿ ಸಂಚಾರ ದಟ್ಟಣೆಯನ್ನು ಹೊಂದಿಕೊಂಡು ಇದೇ ದೂರ ಕ್ರಮಿಸಲು 10 ರಿಂದ 14 ಗಂಟೆ ಬೇಕಾಗುತ್ತದೆ. ಆದರೆ ತುತರ್ು ಶಸ್ತ್ರಚಿಕಿತ್ಸೆ ಅನಿವಾರ್ಯವಾಗಿದ್ದ ಮಗುವಿನ ಜೀವ ಉಳಿಸಲು ಈ ಚಾಲಕ ತನ್ನ ಜೀವವನ್ನು ಪಣಕ್ಕಿಟ್ಟು ಆಂಬ್ಯುಲೆನ್ಸ್ ಚಾಲನೆ ಮಾಡಿದ್ದು, ಸಾರ್ವತ್ರಿಕ ಮೆಚ್ಚುಗೆಗೆ ಪಾತ್ರವಾಗಿದೆ. ಈತನ ಸಮಯ ಪ್ರಜ್ಞೆ ಹಾಗೂ ಚಾಲನಾ ಕೌಶಲಕ್ಕೆ ಪೊಲೀಸರೂ ಬೆರಗಾದರು.
ಎಣಮತಾರೆ ನಾಝರ್:
ಚೈಲ್ಡ್ ಪ್ರೊಟೆಕ್ಷನ್ ನಮ್ಮೀ ತಂಡದ ಹಲವು ಕಾರ್ಯಯೋಜನೆಗಳಲ್ಲಿ ಮಗುವಿನ ಪ್ರಾಣವನ್ನು ಉಳಿಸಲು ನಮ್ಮ ತಂಡ ನಿರ್ವಹಿಸಿದ ಪಾತ್ರ ಅಪೂರ್ವವಾಗಿ ನನ್ನಲ್ಲಿ ಇನ್ನಷ್ಟು ಕೆಲಸ ನಿರ್ವಹಿಸಲು ಪ್ರೇರಣೆ ನೀಡಿದೆ. ಸಾರ್ವಜನಿಕವಾಗಿ ಇಂದು ಸೇವೆಗಳ ಬಗ್ಗೆ ಯಾವ ಮಾತುಗಳಿದ್ದರೂ ಜನಪ್ರೀತಿಯ, ಹೃದಯವಂತಿಕೆಯ ಸೇವೆ, ಕಾರ್ಯತತ್ಪರತೆ ನಮ್ಮ ಮಣ್ಣಿನ ಪರಂಪರೆಯಾಗಿ ಮುಂದುವರಿಯುತ್ತಿದ್ದು ಮಾನವೀಯತೆಗೆ ಎಂದೂ ಕೊರತೆ ಬಾರದು.
ಸಿ.ಕೆ.ನಾಝರ್ ಕಾಂಞಿಂಗಾಡ್.
ನಾಝರ್ ಕಟ್ಟಿಬೆಳೆಸಿದ ಈ ಚೈಲ್ಡ್ ಲೈನ್ ಬಗ್ಗೆ ಮುಂದಿನ ದಿನಗಳಲ್ಲಿ ಸಮರಸ ಸುದ್ದಿ ಬೆಳಕುಚೆಲ್ಲಲಿದೆ...ಗಮನಿಸಿ..





