ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 17, 2017
ಗ್ರಾಮೀಣ ಕ್ರೀಡೆಗಳಿಗೂ ಪ್ರೋತ್ಸಾಹ ಬೇಕು-ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ.
ಬದಿಯಡ್ಕ :ಪಾರಂಪರಿಕ ಗ್ರಾಮೀಣ ಕ್ರೀಡೆಗಳಿಗೆ ಒತ್ತು ನೀಡಿ ವಿವಿಧ ಪಂದ್ಯಾಟಗಳನ್ನು ಆಯೋಜಿಸುವ ಮೂಲಕ ಸಂಘಟಿತರಾಗುವ ಯುವಕರು ಭಾರತದ ಭವಿಷ್ಯವಾಗಿದ್ದಾರೆ. ಇಂತಹ ಕ್ರೀಡಾಕೂಟಗಳಿಂದ ಗ್ರಾಮೀಣಮಟ್ಟದ ಪ್ರತಿಭೆಗಳು ಅಂತಾರಾಷ್ಟ್ರೀಯ ಮಟ್ಟಕ್ಕೂ ಬೆಳೆಯುವಲ್ಲಿ ಸಹಕಾರಿಯಾಗುತ್ತದೆ ಎಂದು ಬಿಜೆಪಿ ರಾಜ್ಯ ಸಮಿತಿ ಸದಸ್ಯ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ನುಡಿದರು.
ಅವರು ಇತ್ತೀಚೆಗೆ ಬದಿಯಡ್ಕ ಕಿನ್ನಿಮಾಣಿ-ಪೂಮಾಣಿ ಪರಿಸರದಲ್ಲಿ ಕಬಡ್ಡಿ ಫ್ರೆಂಡ್ಸ್ ಬದಿಯಡ್ಕದ ನೇತೃತ್ವದಲ್ಲಿ ನಡೆದ `ಅಟಲ್ಜಿ ಟ್ರೋಫಿ-2017' ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಬಾಲಪ್ರತಿಭೆ ಉಪಾಸನಾ ಪಂಜರಿಕೆ, ಅಂತರಾಷ್ಟ್ರೀಯ ಕ್ರೀಡಾ ಪಟುಗಳಾದ ಯಶ್ಮಿತಾ ಹಾಗೂ ದೀಪಿಕಾ, ಸಿ.ಎ.ಪರೀಕ್ಷೆ ತೇರ್ಗಡೆಯಾದ ಬದಿಯಡ್ಕದ ನರಸಿಂಹ ಕಾಮತ್ ಮತ್ತು ಉತ್ತಮ ಕಾರ್ಯಕ್ರಮ ನಿರೂಪಕ ದಿವಾಕರ ಉಪ್ಪಳ ಇವರನ್ನು ಬದಿಯಡ್ಕ ಪೋಲಿಸ್ ಠಾಣಾಧಿಕಾರಿ ಪ್ರಶಾಂತ್ ಸನ್ಮಾನಿಸಿ ಮಾತನಾಡುತ್ತಾ ಕ್ರೀಡಾಪಟುಗಳನ್ನು, ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದರಿಂದ ಇನ್ನಷ್ಟು ಪ್ರತಿಭಾನ್ವಿತರು ಹೊರಹೊಮ್ಮಲು ಸಾಧ್ಯವಿದೆ. ಇಂತಹ ಸಂಘಟನೆಗಳು ಈ ನಿಟ್ಟಿನಲ್ಲಿ ನಡೆಸುವ ಶ್ರಮ ಶ್ಲಾಘನೀಯವಾಗಿದೆ. ಪ್ರತಿಭಾನ್ವಿತನೋರ್ವ ಸಮಾಜದಲ್ಲಿ ಗುರುತಿಸಿಕೊಳ್ಳಬೇಕಾದರೆ ಊರವರ ಬೆಂಬಲವಿರಬೇಕು ಎಂದರು.
ಹರೀಶ್ ನಾರಂಪಾಡಿ, ಹರೀಶ್ ಗೋಸಾಡ, ಸುನಿಲ್ ಪಿ.ಆರ್., ಸುಧಾಮ ಗೋಸಾಡ, ಅವಿನಾಶ್ ರೈ ವಳಮಲೆ, ಎಂ.ನಾರಾಯಣ ಭಟ್, ಸುಕುಮಾರ ಕುದ್ರೆಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.


