ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 17, 2017
ವನಿತಾ ವಿಂಗ್ ಮಹಾಸಭೆ
ಬದಿಯಡ್ಕ : ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಬದಿಯಡ್ಕ ಘಟಕದ ವನಿತಾ ವಿಂಗ್ನ ಮಹಾಸಭೆಯು ಬದಿಯಡ್ಕ ವ್ಯಾಪಾರಿ ಭವನದಲ್ಲಿ ಗುರುವಾಶರ ಜರಗಿತು. ಘಟಕದ ಅಧ್ಯಕ್ಷೆ ನಿರುಪಮ ಶೆಣೈ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ವನಿತಾ ವಿಂಗ್ನ ಕಾಸರಗೋಡು ಜಿಲ್ಲಾ ಅಧ್ಯಕ್ಷೆಯಾದ ಶೆಲರ್ಿ ಸೆಬಾಸ್ಟಿಯನ್ ಉದ್ಘಾಟಿಸಿದರು.
ಘಟಕ ಪ್ರಧಾನ ಕಾರ್ಯದಶರ್ಿ ಮಂಜುಳಾ ಶೆಣೈ ವರದಿ, ಖಜಾಂಜಿ ಪುಷ್ಪ ಎನ್. ಲೆಕ್ಕಪತ್ರ ಮಂಡಿಸಿದರು. ಈ ಸಂದರ್ಭದಲ್ಲಿ 2018-2010ರ ಸಾಲಿನ ನೂತನ ಪದಾಧಿಕಾರಿಗಳನ್ನು ರಾಜ್ಯ ಪ್ರಧಾನ ಕಾರ್ಯದಶರ್ಿ ಹಾಗೂ ಜಿಲ್ಲಾ ಪ್ರಧಾನ ಕಾರ್ಯದಶರ್ಿಯಾದ ಶ್ರೀನಜ ಪ್ರದೀಪ್ ಅವರ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷೆಯಾಗಿ ನಿರುಪಮ ಶೆಣೈ, ಪ್ರಧಾನ ಕಾರ್ಯದಶರ್ಿಯಾಗಿ ಮಂಜುಳಾ ಶೆಣೈ ಪುನರಾಯ್ಕೆಗೊಂಡರು. ಉಪಾಧ್ಯಕ್ಷರಾಗಿ ಅನಿತ ಕುಮಾರಿ, ಮಾಲಿನಿ ಕಾಮತ್ ಹಾಗೂ ಜೊತೆ ಕಾರ್ಯದಶರ್ಿಯಾಗಿ ಸುನಿತ ಕುಮಾರಿ, ಕಮಲ ರೈ ಆಯ್ಕೆಯಾದರು. ಕಾರ್ಯಕಾರೀ ಸಮಿತಿ ಸದಸ್ಯರಾಗಿ ಪುಷ್ಪ ಎನ್, ನೀತ, ಜಯಲಕ್ಷ್ಮಿ, ಸಂಧ್ಯಾಪಾರ್ವತಿ, ಜಯಂತಿ ಚೆಟ್ಟಿಯಾರ್, ಆಶಾಕಿರಣ್, ಕವಿತ, ಪುಷ್ಪಲತ, ಲೀಲಾವತಿ, ಸೌಮ್ಯಗಣೇಶ್, ಸುಜಾತ ಶೆಟ್ಟಿಯವರನ್ನು ಆರಿಸಲಾಯಿತು. ವನಿತಾವಿಂಗ್ನ ಮುಖ್ಯ ರಕ್ಷಾಧಿಕಾರಿಯಾಗಿ ಬಿ. ಜ್ಞಾನದೇವ ಶೆಣೈಯವರನ್ನು ನೇಮಿಸಲಾಯಿತು.ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಬದಿಯಡ್ಕ ಘಟಕದ ಅಧ್ಯಕ್ಷ ಎಸ್.ಎನ್ ಮಯ್ಯ ಶುಭಾಶಂಸನೆಗೈದು ಮಾತನಾಡಿದರು. ಸತ್ಯವತಿ ಬಿ. ಸ್ವಾಗತಿಸಿ, ವಂದಿಸಿದರು.

