ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 12, 2017
ಕಾನೂನು ಸಲಹಾ ಕಾಯರ್ಾಗಾರ
ಮಂಜೇಶ್ವರ: ಜಿಲ್ಲಾ ಕಾನೂನು ಪ್ರಾಧಿಕಾರ, ಮಂಜೇಶ್ವರ ಅಭಿವೃದ್ಧಿ ಸಮಿತಿ ಹಾಗೂ ಕಲ್ಲುರು ವಿದ್ಯಾ ವಿಶ್ವಸ್ಥ ಮಂಡಳಿ ಕಾರವಾರ ಇದರ ಜಂಟಿ ಆಶ್ರಯದಲ್ಲಿ ಕಾನೂನು ಸಲಹಾ ಸಭೆ ಹೊಸಂಗಡಿಯ ಹಿಲ್ಸೈಡ್ ಸಭಾಂಗಣದಲ್ಲಿ ಗುರುವಾರ ನಡೆಯಿತು.
ಕಾರ್ಯಕ್ರಮದಲ್ಲಿ ಅಭಿವೃದ್ಧಿ ಕ್ರಿಯಾ ಸಮಿತಿ ಅಧ್ಯಕ್ಷ ಯಾಕೂಬ್ ಮೊಯ್ದಿನ್ ಅಧ್ಯಕ್ಷತೆ ವಹಿಸಿದ್ದರು.ಹಿರಿಯ ಸಾಹಿತಿ ರಮಾನಂದ ಬನಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕಾನೂನು ಸಲಹಾ ಕಾರ್ಯಕ್ರಮಗಳಿಂದ ಜನಸಾಮಾನ್ಯರ ಸಮಸ್ಯೆಗಳಿಗೆ ಸೂಕ್ತ ಸ್ಪಂದನೆ ದೊರೆಯುತ್ತದೆ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ನ್ಯಾಯಾಧೀಶ ಫಿಲಿಪ್ ಥಾಮಸ್ ಮಾತನಾಡಿ ಕಳೆದ ಎರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ ಸುಮಾರು ಏಳು ಸಾವಿರದಷ್ಟು ದೂರುಗಳು ದಾಖಲಾಗಿದ್ದು, ಸುಮಾರು 5 ಸಾವಿರ ದೂರುಗಳಿಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗಿದೆ. ಕಾನೂನು ಸಲಹಾ ಕಾಯರ್ಾಗಾರಗಳಿಂದ ಹೆಚ್ಚಿನ ಮಂದಿ ಪ್ರಯೋಜನ ಪಡೆದುಕೊಳ್ಳುವಂತಾಗಬೇಕಿದೆ ಎಂದರು.
ವೇದಿಕೆಯಲ್ಲಿ ಪ್ರೊ.ಭಾಟಿಯಾ, ರವಿಚಂದ್ರ, ಚಂದಪ್ಪ ಮಾಸ್ತರ್, ತಾರಾನಾಥ ಹೊಸಂಗಡಿ, ಸತೀಶ ಅಡಪ ಸಂಕಬೈಲು, ಅಶೋಕ, ಎಂ.ಕೆ.ಇ ಅಬ್ಬಾಸ್, ಇಸ್ಮಾಯಿಲ್, ಎಂ.ಕೆ ಮಜೀದ್ ಉಪಸ್ಥಿತರಿದ್ದರು.ಸಾಂಸ್ಕೃತಿಕ ಕಾರ್ಯಕ್ರಮಗಳು ಸಹಿತ ಆರೋಗ್ಯ ಕಾಳಜಿ, ಕಾನೂನು ಮಾಹಿತಿ ಬಗ್ಗೆ ತರಗತಿಗಳು ನಡೆದವು.


