ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 16, 2017
ವಿದ್ಯಾಥರ್ಿಗಳು ಯಶಸ್ಸಿನ ಕನಸುಗಳೊಂದಿಗೆ ಸಾಧನೆಯ ಮೆಟ್ಟಲೇರಬೇಕು-ವಾರಿಜಾ ನೇರೋಳು
ಮುಳ್ಳೇರಿಯ: ಕಲಿಕೆಯ ಹಂತದ ವಿದ್ಯಾಥರ್ಿ ಜೀವನ ಭವಿಷ್ಯದ ಯಶಸ್ವೀ ಬದುಕಿಗೆ ಪಾಠವಾಗಿದ್ದು, ಸವಾಲುಗಳಿಗೆ ಅಂಜದೆ ಸಾಧನಾ ಪಥದಲ್ಲಿ ಮುಂದುವರಿಯಬೇಕು. ಸವಾಲುಗಳೆದುರಾದಾಗ ದಕ್ಷ ಮಾರ್ಗದರ್ಶಕರ ನಿದರ್ೇಶನಗಳನ್ನು ಪಡೆಯಬೇಕು ಎಂದು ಬೆಳ್ಳೂರು ಸರಕಾರಿ ಹೈಸ್ಕೂಲಿನ ಮುಖ್ಯೋಪಾಧ್ಯಾಯಿನಿ ವಾರಿಜಾ ನೇರೋಳು ಕರೆನೀಡಿದರು.
ಬೆಳ್ಳೂರು ಸರಕಾರಿ ಹೈಸ್ಕೂಲಿನಲ್ಲಿ ಮಂಗಳವಾರ ನಡೆದ ಮಕ್ಕಳ ದಿನಾಚರಣೆಯ ಸಂದರ್ಭ ಅವರು ಅಧ್ಯಕ್ಷತೆ ವಹಿಸಿ ಮಾತನಡಿದರು.
ಶಿಕ್ಷಣದ ಪ್ರತಿಯೊಂದು ಹಂತಗಳೂ ವಿದ್ಯಾಥರ್ಿಗಳಿಗೆ ಹೊಸತನವನ್ನು ಕಲಿಸುವ ವ್ಯತ್ಯಸ್ಥ ಅನುಭವಗಳಾಗಿದ್ದು, ತೆರೆದ ಕಣ್ಣು,ಮನಸ್ಸು, ಬುದ್ದಿಗಳೊಂದಿಗೆ ಗ್ರಹಿಸುವ, ಅಗತ್ಯವಿರುವಷ್ಟನ್ನು ಮನನಮಾಡುವ ಪ್ರವೃತ್ತಿ ಬೆಳೆಯಬೇಕು.ಇದರಿಂದ ಶ್ರೇಯಸ್ಸು ಪ್ರಾಪ್ತವಾಗುವುದೆಂದು ತಿಳಿಸಿದರು.
ಈ ಸಂದರ್ಭ ರಾಜ್ಯಮಟ್ಟದ ಥೈಕೊಂಡ ಸ್ಪಧರ್ೆಯಲ್ಲಿ ಕಂಚಿನ ಪದಕ ವಿಜೇತ ಶಾಲಾ ಕನ್ನಡ ವಿಭಾಗದ ವಿದ್ಯಾಥರ್ಿ ಜಯಂತ್ ರಾಜ್ನನ್ನು ಶಾಲಾ ಶಿಕ್ಷಕವೃಂದ, ಸಿಬ್ಬಂದಿ ವರ್ಗ ಹಾಗು ರಕ್ಷಕ ಶಿಕ್ಷಕ ಸಂಘದ ನೇತೃತ್ವದಲ್ಲಿ ಅಭಿನಂದಿಸಲಾಯಿತು.
ಶಾಲಾ ನೌಕರ ಸಂಘದ ಕಾರ್ಯದಶರ್ಿ ಪದ್ಮನಾಭ ಮಾಸ್ತರ್, ಹಿರಿಯ ಶಿಕ್ಷಕ ಕುಂಞಿರಾಮ ಮಣಿಯಾಣಿ ಬಿ. ಉಪಸ್ಥಿತರಿದ್ದು ಶುಭಹಾರೈಸಿದರು.ಕಿರಿಯ ಪ್ರಾಥಮಿಕ ಶಾಲಾ ಮಕ್ಕಳು ಪಂ.ನೆಹರೂರವರ ವೇಶಧಾರಿಗಳಾಗಿ ಕಾರ್ಯಕ್ರಮಕ್ಕೆ ಮೆರುಗುತಂದರು. ನೆಹರೂ ಘೋಷಣೆಯೊಂದಿಗೆ ಮೆರವಣಿಗೆ ನಡೆಸಲಾಯಿತು. ಬಳಿಕ ವಿದ್ಯಾಥರ್ಿಗಳಿಂದ ವಿವಿಧ ಪ್ರತಿಭಾ ಪ್ರದರ್ಶನ ನಡೆಯಿತು.



