HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ತ್ಯಾಜ್ಯ ಸಮಸ್ಯೆ : ಕ್ರಿಯಾ ಸಮಿತಿ ರಚನೆ ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯತು ವ್ಯಾಪ್ತಿಯ ವಿವಿಧೆಡೆಗಳಿಂದ ಸಂಗ್ರಹಿಸುವ ತ್ಯಾಜ್ಯವನ್ನು ನೀಚರ್ಾಲು ಸಮೀಪದ ಮಾನ್ಯ ಪರಿಸರದಲ್ಲಿ ಸ್ಮಶಾನಕ್ಕೆ ಮೀಸಲಿಟ್ಟ ಸಾರ್ವಜನಿಕ ಸ್ಥಳದಲ್ಲಿ ತಂದು ಹಾಕಲಾಗುತ್ತಿರುವುದನ್ನು ಪ್ರತಿಭಟಿಸಲು ಸ್ಥಳೀಯರು ಕ್ರಿಯಾ ಸಮಿತಿ ರೂಪೀಕರಿಸಿದ್ದಾರೆ. ಬದಿಯಡ್ಕ ಪಂಚಾಯತು 17ನೇ ವಾಡರ್್ನ ಕೊರಂಗಿತೊಟ್ಟಿ ಎಂಬಲ್ಲಿನ ಸಾರ್ವಜನಿಕ ಸ್ಮಶಾನ ಪರಿಸರದ ಜನರು ಮಾನ್ಯ ವಿಷ್ಣುಮೂತರ್ಿ ನಗರದಲ್ಲಿ ಇತ್ತೀಚೆಗೆ ಸಭೆ ಸೇರಿ ಕ್ರಿಯಾ ಸಮಿತಿಗೆ ರೂಪು ನೀಡಿದ್ದಾರೆ. ಈ ಪರಿಸರದಲ್ಲಿ ಹಲವು ಕುಟುಂಬಗಳು ವಾಸಿಸುವ ಮನೆಗಳಿದ್ದರೂ ಅವನ್ನು ಪರಿಗಣಿಸದೆ ಪಂಚಾಯತು ವ್ಯಾಪ್ತಿಯ ತ್ಯಾಜ್ಯಗಳನ್ನು ತಂದು ಹಾಕುವ ಮೂಲಕ ಹಲವು ರೋಗಗಳು ಹರಡುವ ಸಾಧ್ಯತೆಯನ್ನು ಅಧಿರ್ಕರತರು, ಜನನಾಯಕರು ಪರಿಗಣಿಸದಿರುವುದರ ಬಗ್ಗೆ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು. ಈ ಹಿನ್ನಲೆಯಲ್ಲಿ ಕ್ರಿಯಾ ಸಮಿತಿ ರಚಿಸಿ ಪಂಚಾಯತಿಗೆ ಮನವಿ ನೀಡಲಾಗುವುದು ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ. ಪದಾಧಿಕಾರಿಗಳಾಗಿ ಮಂಜುನಾಥ ಡಿ.(ಅಧ್ಯಕ್ಷರು), ಶ್ರೀಕುಮಾರ್(ಉಪಾಧ್ಯಕ್ಷ), ಮಣಿಕಂಠ ಮಾನ್ಯ(ಕಾರ್ಯದಶರ್ಿ),ಗೀರಿಶ್ ಗೊಲ್ಲ(ಜತೆ ಕಾರ್ಯದಶರ್ಿ),ಮಂಜುನಾಥ(ಕೋಶಾಧಿಕಾರಿ), ಹರಿಕೃಷ್ಣ ಮಾನ್ಯ(ಸಲಹೆಗಾರರು), ಉದಯ ಕಂಬಾರು, ಸೀತಾರಾಮ ಕೊಡಗಿ, ರಾಧಾಕೃಷ್ಣ ಚೆಟ್ಟಿಯಾರ್, ಜಯರಾಮ ಸಿ.ಎಚ್, ಶ್ರೀನಿವಾಸ ಎಂ, ನಳಿನಾಕ್ಷ, ಸುರೇಶ್ ನಾಯ್ಕ, ಬಾಬು ನಾಯರ್(ಸದಸ್ಯರು) ಅವರನ್ನು ಆರಿಸಲಾಯಿತು. ಹರಿಕೃಷ್ಣ ಮಾನ್ಯ ಅಧ್ಯಕ್ಷತೆ ವಹಿಸಿದರು. ತ್ಯಾಜ್ಯ ಎಸೆಯುವ ಘಟನೆಯ ಬಗ್ಗೆ ಪತ್ರಿಕೆ ಗ್ರಾ.ಪಂ. ಅಧಿಕೃತರನ್ನು ಕೇಳಿಕೊಂಡಾಗ ಈ ಬಗ್ಗೆ ಯಾವುದೇ ನಿಧರ್ಾರ ಕೈಗೊಂಡಿಲ್ಲವೆಂದು ಪಂಚಾಯತು ಮೂಲಗಳು ತಿಳಿಸಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries