ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 16, 2017
ಇಂದು(ಶುಕ್ರವಾರ) ಮಜಿಬೈಲು ಸಹಕಾರಿ ಬ್ಯಾಂಕ್ ಹಾಲ್ನಲ್ಲಿ ವಿಚಾರಸಂಕಿರಣ
ಮಂಜೇಶ್ವರ: 64 ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ಅಂಗವಾಗಿ ನ.17 ರಂದು ಮಜಿಬೈಲು ಸಹಕಾರಿ ಬ್ಯಾಂಕ್ ಹಾಲ್ನಲ್ಲಿ `ಸಾರ್ವಜನಿಕ ಖಾಸಗಿ ಸಹಕಾರಿ ಸಹಭಾಗಿತ್ವ' ಎಂಬ ವಿಷಯದಲ್ಲಿ ವಿಚಾರಸಂಕಿರಣ ನಡೆಯಲಿದೆ.
ಬೆಳಗ್ಗೆ 10 ಗಂಟೆಗೆ ಭಾಗವಹಿಸುವವರ ದಾಖಲೀಕರಣ, 10.30 ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಬಿ.ಎಂ.ಅನಂತ ಅಧ್ಯಕ್ಷತೆ ವಹಿಸುವರು. ಮಂಜೇಶ್ವರ ಬ್ಲಾಕ್ ಪಂಚಾಯತು ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಉದ್ಘಾಟಿಸುವರು. ಸಹಾಯಕ ರಿಜಿಸ್ಟ್ರಾರ್(ಜನರಲ್) ಕೆ.ಜಯಚಂದ್ರನ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಬ್ಲಾಕ್ ಪಂಚಾಯತು ಸದಸ್ಯ ಕೆ.ಆರ್.ಜಯಾನಂದ, ಸಹಕಾರಿ ಸಂಘ ಇನ್ಸ್ಪೆಕ್ಟರ್ ಸತೀಶ್ ಕೆ.ಸಿ, ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ ಸದಸ್ಯ ಬಿ.ವಿ.ರಾಜನ್, ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಗೋಪಾಲ ಬಂದ್ಯೋಡು, ಬಾಯಾರು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ನಾರಾಯಣ ಭಟ್ ಟಿ, ವಕರ್ಾಡಿ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಸ್.ಅಬ್ದುಲ್ ಖಾದರ್, ಮಂಗಲ್ಪಾಡಿ-ಪೈವಳಿಕೆ ಅರ್ಬನ್ ಸಹಕಾರಿ ಸಂಘ ಅಧ್ಯಕ್ಷ ಅಂದುಂಞಿ ಹಾಜಿ, ವಕರ್ಾಡಿ ಅಗ್ರಿಕಲ್ಚರಿಸ್ಟ್ ವೆಲ್ಪೇರ್ ಸೊಸೈಟಿ ಅಧ್ಯಕ್ಷ ವಿಶ್ವನಾಥ ಕುದುರು, ಕೆ.ಸಿ.ಇ.ಯು.ವಿನ ದಯಾಕರ ಕೆ, ಕೆ.ಸಿ.ಇ.ಸಿ.ಯ ಉದಯ ಕುಮಾರ್ ಶೆಟ್ಟಿ ಕೆ. ಶುಭಹಾರೈಸುವರು.
11.30 ರಿಂದ ನಡೆಯುವ ವಿಚಾರಗೋಷ್ಠಿಯಲ್ಲಿ ಮಜಿಬೈಲ್ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಸಂಜೀವ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಕಾಸರಗೋಡು ಜಿಲ್ಲಾ ಸಹಕಾರಿ ಸಂಘದ ನಿವೃತ್ತ ಹಿರಿಯ ಪ್ರಬಂಧಕ ನ್ಯಾಯವಾದಿ ಕೆ.ನಾರಾಯಣ ಉಪನ್ಯಾಸ ನೀಡುವರು.

