ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 16, 2017
ವಿಶ್ವಕರ್ಮ ಫೆಡರೇಶನ್ ಸಭೆ
ಉಪ್ಪಳ: ನ್ಯಾಷನಲ್ ವಿಶ್ವಕರ್ಮ ಫೆಡರೇಶನ್ನ ಪೈವಳಿಕೆ ಪಂಚಾಯತು ಸಮಿತಿ ಸಭೆ ಬಾಯಾರು ವಿಶ್ವಕರ್ಮ ಸಮಾಜ ಸೇವಾ ಸಂಘದ ಕಚೇರಿಯಲ್ಲಿ ವೆಂಕಟರಮಣ ಆಚಾರ್ಯರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರಗಿತು. ಅಧ್ಯಕ್ಷ ಸೀತಾರಾಮ ಆಚಾರ್ಯ ಮುಖ್ಯ ಭಾಷಣ ಮಾಡಿದರು. ಸಂಘಟನೆಯ ಕಾರ್ಯಚಟುವಟಿಕೆಗಳನ್ನು ಅಭಿವೃದ್ಧಿಗೊಳಿಸಲು ಮತ್ತು ಪಂಚಾಯತು ಸಮ್ಮೇಳನ ನಡೆಸಲು ತೀಮರ್ಾನಿಸಲಾಯಿತು.
ಜಿಲ್ಲಾಧ್ಯಕ್ಷ ರಾಜನ್ ಮನ್ನಿಪ್ಪಾಡಿ, ಜೊತೆ ಕಾರ್ಯದಶರ್ಿ ರಾಧಾಕೃಷ್ಣನ್, ಜಿಲ್ಲಾ ಸಮಿತಿ ಸದಸ್ಯರಾದ ಅನಿಲ್ಕುಮಾರ್ ಮಣಿಯಂಪಾರೆ, ಉಮೇಶ್ ಆಚಾರ್ಯ ಪೈವಳಿಕೆ, ವಾಸುದೇವ ಆಚಾರ್ಯ, ಉದಯ ಆಚಾರ್ಯ, ಸುಭಾಷ್ ಆಚಾರ್ಯ, ಗಿರೀಶ್ ಆಚಾರ್ಯ, ಭರತ್ಕುಮಾರ್, ಭಾರತಿ ಆವಳ, ನೇತ್ರಾವತಿ ಮೊದಲಾದವರು ಭಾಗವಹಿಸಿದ್ದರು. ಕಾರ್ಯದಶರ್ಿ ವಿಷ್ಣು ಆಚಾರ್ಯ ಸಕರ್ುತ್ತಿ ಸ್ವಾಗತಿಸಿ, ಕೋಶಾಧಿಕಾರಿ ವಿಷ್ಣು ಆಚಾರ್ಯ ಮುಳಿಗದ್ದೆ ವಂದಿಸಿದರು.


