ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 10, 2017
ಸರಕಾರಿ ಸೌಲಭ್ಯಗಳ ಬಗ್ಗೆ ಮಾಹಿತಿ
ಪೆರ್ಲ : ಕೆನರ ಅಭಿವೃದ್ದಿ ಮತ್ತು ಶಾಂತಿ ಸಂಸ್ಥೆ(ಸಿ.ಒ.ಡಿ.ಪಿ )ಮಂಗಳೂರು ಮತ್ತು ಕಾರಿತಾಸ್ ಇಂಡಿಯಾ ಸಂಸ್ಧೆ ನ್ಯೂಡೆಲ್ಲಿ ಇದರ ಜಂಟಿ ಆಶ್ರಯದಲ್ಲಿ ವಿವಿಧ ಸರಕಾರಿ ಸೌಲಭ್ಯಗಳ ಬಗ್ಗೆ ಮಾಹಿತಿ ಕಾರ್ಯಕ್ರಮವು ಇತ್ತೀಚೆಗೆ ಸಾಯ ಶಾಲಾ ಪರಿಸರದಲ್ಲಿ ಜರಗಿತು.
ತರಬೇತಿಯನ್ನು ಸಿ.ಒ.ಡಿ.ಪಿ ಸಂಸ್ಧೆಯ ಸಂಯೋಜಕ ಪೀಟರ್ ಪೌಲ್ ಉದ್ಘಾಟಿಸಿ ರಾಜ್ಯ ಮತ್ತು ಕೇಂದ್ರ ಸರಕಾರದ ಹಲವು ಸೌಲಭ್ಯಗಳು ನಿಜವಾದ ಫಲಾನುಭವಿಗೆ ಲಭಿಸದೆ ಇರಲು ಮಾಹಿತಿ ಕೊರತೆಯಿದೆ. ಸಂಘ ಸಂಸ್ಧೆಗಳು ಸ್ಪಷ್ಟ ಮಾಹಿತಿ ಪಡೆದು ಗ್ರಾಮೀಣ ಪ್ರದೇಶದಲ್ಲಿ ನೈಜ ಫಲಾನುಭವಿಗೆ ಲಭಿಸುವಂತೆ ಮಾಡಬೇಕೆಂದು ಕರೆನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಬೇಳ ಶಾಲೆಯ ಅಧ್ಯಾಪಕ ಜೋನಿ ಕ್ರಾಸ್ತರವರು ವಿವಿಧ ಸರಕಾರಿ ಯೋಜನೆ ಪಡೆಯಲು ಇರುವ ಅರ್ಹತೆ ಅಜರ್ಿ ನೀಡಬೇಕಾದ ವಿಧಾನ ಅರ್ಹರಿಗೆ ಲಭಿಸದಿದ್ದಲ್ಲಿ ಏನು ಮಾಡಬಹುದೆಂಬ ವಿಸ್ಕೃತ ಮಾಹಿತಿ ನೀಡಿದರು.ನಿಸರ್ಗ ಮಹಾಸಂಘದ ಬೇಬಿ ಸ್ವಾಗತಿಸಿ, ಕೆನೆಟ್ ವಂದಿಸಿದರು.

