ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 14, 2017
ಶ್ರದ್ಧಾ ಕಾರ್ಯಕ್ರಮ ಉದ್ಘಾಟನೆ
ಕುಂಬಳೆ: ಸಾರ್ವಜನಿಕ ಶಿಕ್ಷಣ ಸಂರಕ್ಷಣೆ ಯಜ್ಞದ ಅಂಗವಾಗಿ ಕೇರಳ ಶಿಕ್ಷಣ ಇಲಾಖೆ ಪ್ರಾಥಮಿಕ ಶಾಲೆಗಳಲ್ಲಿ ಸರ್ವಶಿಕ್ಷಾ ಅಭಿಯಾನದ ಉಪಜಿಲ್ಲಾ ಕೇಂದ್ರವಾದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಮಾರ್ಗದರ್ಶನದಲ್ಲಿ ಶಾಲೆಗಳಲ್ಲಿ ನಡೆಸುವ ಶ್ರದ್ಧಾ ಕಾರ್ಯಕ್ರಮ ಪೇರಾಲು ಸರಕಾರಿ ಕಿರಿಯ ಬುನಾದಿ ಶಾಲೆಯಲ್ಲಿ ಸೋಮವಾರ ಉದ್ಘಾಟನೆಗೊಂಡಿತು.
ತರಗತಿಯಲ್ಲಿ ಭಾಷೆ, ಗಣಿತ, ಪರಿಸರ ಅಧ್ಯಯನ ವಿಷಯಗಳಲ್ಲಿ ಮಕ್ಕಳು ಈಗ ಇರುವ ಮಟ್ಟವನ್ನು ಪ್ರತ್ಯೇಕ ಪ್ರಶ್ನಾವಳಿಯ ಮೂಲಕ ಅವಲೋಕನ ನಡೆಸಿ ಅಗತ್ಯ ವಿರುವವರಿಗಾಗಿ ವಿಶೇಷ ಓದುವ ಸಾಮಗ್ರಿಗಳನ್ನು ನೀಡಿ ಹೆಚ್ಚಿನ ಸಾಧನೆಗೈಯುವಂತೆ ತರಬೇತಿ ನೀಡುವುದೇ ಶ್ರದ್ಧಾ ಕಾರ್ಯಕ್ರಮದ ಉದ್ದೇಶ. ಊರವರ ಸಹಕಾರದೊಂದಿಗೆ ಜಾರಿಗೊಳಿಸಲಾದ ಕಾರ್ಯಕ್ರಮವನ್ನು ಕುಂಬಳೆ ಗ್ರಾಮ ಪಂಚಾಯತು ಸದಸ್ಯ ವಿ.ಪಿ.ಅಬ್ದುಲ್ ಖಾದರ್ ಹಾಜಿ ಮೂರನೇ ತರಗತಿ ಅಧ್ಯಾಪಕ ಮೊಹಮ್ಮದ್ ನೌಫಲ್ ಅವರಿಗೆ ಪ್ರಶ್ನಾವಳಿಯನ್ನು ಹಸ್ತಾಂತರಿಸಿ ಉದ್ಘಾಟಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮುಹಮ್ಮದ್ ಬಿ.ಎ. ಪೇರಾಲು, ಶಾಲಾ ಮುಖ್ಯೋಪಾಧ್ಯಾಯ ಗುರುಮೂತರ್ಿ ಶುಭಹಾರೈಸಿದರು. ಶಾಲಾ ಶಿಕ್ಷಕಿ ರಮ್ಲತ್ ಟೀಚರ್ ಸ್ವಾಗತಿಸಿ, ಅಧ್ಯಾಪಕ ಸಜಯನ್ ಮಾಸ್ಟರ್ ವಂದಿಸಿದರು.


