ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 14, 2017
ಅವಿಸ್ಮರಣೀಯಗೊಳಿಸಿದ ಚಿತ್ರಕಲಾ ಪ್ರದರ್ಶನ
ಉಪ್ಪಳ: ಮಂಜೇಶ್ವರ ಉಪಜಿಲ್ಲಾ ಕಲೋತ್ಸವದಲ್ಲಿ ಚಿತ್ರ ಕಲಾ ಪ್ರದರ್ಶನವನ್ನು ಏರ್ಪಡಿಸಿದ ಚಿತ್ರ ಕಲಾ ಅಧ್ಯಾಪಕರೋರ್ವರು ಸ್ವತ: ತಾನು ರಚಿಸಿದ ಕಲಾಕೃತಿಯೊಂದನ್ನು ಕಲೋತ್ಸವದ ಸಂಘಟಿಸಿದ ಶಾಲೆಗೆ ನೀಡುವ ಮೂಲಕ ಕಲೋತ್ಸವದ ಕಳೆಯನ್ನು ಅವಿಸ್ಮರಣೀಯವನ್ನಾಗಿಸಿದ್ದಾರೆ.
ಉಪ್ಪಳ ಸರಕಾರಿ ಶಾಲೆಯಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾ ಕಲೋತ್ಸವದಲ್ಲಿ ಮಂಜೇಶ್ವರ ಎಸ್ಎಟಿಎಚ್ಎಸ್ಎಸ್ ಶಾಲೆಯ ಚಿತ್ರ ಕಲಾ ಅಧ್ಯಾಪಕ ಜಯಪ್ರಕಾಶ್ ಶೆಟ್ಟಿ ನೇತೃತ್ವದಲ್ಲಿ ಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಅದೇ ದಿನ ಸಂಜೆ ವೇಳೆಗೆ ಕಲೋತ್ಸವದ ಸಮಾರೋಪದಲ್ಲಿ ಅವರು ರಚಿಸಿದ ಮೌಲ್ಯಯುತ ಚಿತ್ರ ಕಲೆಯೊಂದನ್ನು ಉಪ್ಪಳ ಶಾಲಾ ಮುಖ್ಯೋಪಾಧ್ಯಾಯರಿಗೆ ಸಭೆಯಲ್ಲಿ ನೆರೆದ ಗಣ್ಯರ ಉಪಸ್ಥಿತಿಯಲ್ಲಿ ಹಸ್ತಾಂತರಿಸಿದರು.
ಚಿತ್ರಕಲಾ ಪ್ರದರ್ಶನದ ರೂವಾರಿ ಮೂಲತ: ಬೇಳ ನಿವಾಸಿಯಾದ ಜಯಪ್ರಕಾಶ್ ಶೆಟ್ಟಿ ವೃತ್ತಿ ಪ್ರವೃತ್ತಿ ಎರಡನ್ನು ಚಿತ್ರಕಲೆಗೆ ಸಮಪರ್ಿಸಿದವರು. ಮಂಜೇಶ್ವರ ಎಸ್ಎಟಿ ಎಚ್ಎಸ್ಎಸ್ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಅವರು ಮಕ್ಕಳೊಳಗೆ ಸುಪ್ತವಾಗಿರುವ ಚಿತ್ರ ರಚನಾ ಅಭಿರುಚಿಯನ್ನು ಸದಾ ಪ್ರೋತ್ಸಾಹಿಸಲು ವೇದಿಕೆ ಒದಗಿಸುವ ಕ್ರಿಯಾಶೀಲ ಶಿಕ್ಷಕ. ಈಗಾಗಲೇ ಹಲವಾರು ಸಾಹಿತ್ಯ ಸಮ್ಮೇಳನ, ತುಳು ಸಮ್ಮೇಳನ, ಚಿತ್ರಕಲಾ ಶಿಬಿರ ಮೊದಲಾದೆಡೆ ಚಿತ್ರ ಪ್ರದರ್ಶನವನ್ನು ಏರ್ಪಡಿಸಿ ಜನ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಜೆ.ಪಿ.ಶೆಟ್ಟಿ ಎಂಬ ನಾಮಧೇಯದ ಇವರ ಕಲಾಕೃತಿಗಳು ಕಲಾಭಿಮಾನಿಗಳ ಕಣ್ಮನ ಸೆಳೆಯುತ್ತದೆ. ಕೆಲವಾರು ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ಚಿತ್ರ ಪ್ರದರ್ಶನವನ್ನು ಏರ್ಪಡಿಸುವ ಇವರು ಹೆಚ್ಚಿನ ಕಡೆ ತಾನೇ ಸ್ವತ: ಕೈಯಿಂದ ಖಚರ್ು ವೆಚ್ಚ ಭರಿಸಿ ಚಿತ್ರಕಲೆಯನ್ನು ನೋಡುಗರ ಮುಂದೆ ತೆರೆದಿಡುತ್ತಾರೆ. ಇಂತಹ ಕಾರ್ಯವನ್ನು ಮಾಡಿದಾಗ ಎಳೆಯ ಕಲಾವಿದರಿಗೆ ಇನ್ನಷ್ಟು ಸೂತರ್ಿ ಹಾಗೂ ಪ್ರೋತ್ಸಾಹ ದೊರಕಿದಂತಾಗಬಹುದೆಂಬುದು ಇವರ ಅಭಿಪ್ರಾಯವಾಗಿದೆ. ಚಿತ್ರಕಲಾ ಪ್ರದರ್ಶನ ಅಥವಾ ಕಲೆಯ ಬಗ್ಗೆ ಸಂಪನ್ಮೂಲತೆಯನ್ನು ತಿಳಿಸಬೇಕಿದ್ದರೆ 9495534751 ನಂಬ್ರದಲ್ಲಿ ಸಂಪಕರ್ಿಸಬಹುದು.



