ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 12, 2017
ಪ್ರಾದೇಶಿಕ ಪ್ರತಿಭಾ ಕೇಂದ್ರ ಆರಂಭ
ಮುಳ್ಳೇರಿಯ: ಗ್ರಾಮೀಣ ಪ್ರದೇಶಗಳ ಹಿಂದುಳಿದ ವಿದ್ಯಾಥರ್ಿಗಳ ಸಮಗ್ರ ಅಭಿವೃದ್ದಿ, ಅವರ ಪ್ರತಿಭೆಯನ್ನು ಬೆಳೆಸುವ ನಿಟ್ಟಿನಲ್ಲಿ ರಾಜ್ಯ ವಿದ್ಯಾಭ್ಯಾಸ ಕ್ಷೇತ್ರ ವ್ಯಾಪಕ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದು ಸದ್ಬಳಕೆ ಅಗತ್ಯ ಎಂದು ಕುಂಬಳೆ ಉಪಜಿಲ್ಲಾ ಬ್ಲಾಕ್ ಶಿಕ್ಷಣ ಯೋಜನಾಧಿಕಾರಿ ಕುಂಞಿಕೃಷ್ಣನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸರ್ವಶಿಕ್ಷಾ ಅಭಿಯಾನ್ ಮತ್ತು ಬ್ಲಾಕ್ ಸಂಪನ್ಮೂಲ ಕೇಂದ್ರಗಳ ಸಹಕಾರದೊಂದಿಗೆ ಬೆಳ್ಳೂರು ಗ್ರಾ.ಪಂ. ವ್ಯಾಪ್ತಿಯ ಹಿಂದುಳಿದ ವಿದ್ಯಾಥರ್ಿಗಳ ಸಮಗ್ರ ವಿಕಾಸಕ್ಕಾಗಿ ಹಮ್ಮಿಕೊಳ್ಳಲಾದ ಪ್ರಾದೇಶಿಕ ಪ್ರತಿಭಾ ಕೇಂದ್ರವನ್ನು ಶನಿವಾರ ಬೆಳ್ಳೂರು ಸರಕಾರಿ ಹೈಸ್ಕೂಲಿನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಎನ್.ಶಶಿಧರ ಗೋಳಿಕಟ್ಟೆ ಮಾತನಾಡಿ, ಗ್ರಾಮೀಣ ಪ್ರತಿಭೆಗಳಿಗೆ ವಿವಿಧ ಯೋಜನೆಗಳನ್ನು ರೂಪೀಕರಿಸಲಾಗುವುದಾದರೂ ಅನುಷ್ಠಾನದ ಹಂತಗಳಲ್ಲಿ ಲೋಪಗಳಾಗುವುದು ಕಂಡುಬರುತ್ತಿದೆ. ಆದರೆ ಮುಂದಿನ ಭಾವೀ ಜನಾಂಗವಾದ ವಿದ್ಯಾಥರ್ಿಗಳನ್ನು ದೃಷ್ಟಿಯಲ್ಲಿರಿಸಿ ಪ್ರಾದೇಶಿಕ ಪ್ರತಿಭಾ ಕೇಂದ್ರವನ್ನು ಯಶಸ್ವಿಯಾಗಿ ಮುನ್ನಡೆಸುವ ಹೊಣೆ ಎಲ್ಲರ ಮೇಲಿದೆ ಎಂದು ತಿಳಿಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ವಾರಿಜಾ ನೇರೋಳು ಪ್ರಾಸ್ತಾವಿಕವಾಗಿ ಮಾತನಾಡಿ,ಸ್ವಾಗತಿಸಿ, ಶಿಕ್ಷಕ ಅಕ್ಬರಲಿ ವಂದಿಸಿದರು.


