HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಕನ್ನಡ ಮಾಧ್ಯಮ ಅಧ್ಯಾಪಕ ಸಂಘ ಕುಂಬಳೆ ಉಪಜಿಲ್ಲಾ ಘಟಕದ ಸಭೆ ಬದಿಯಡ್ಕ: ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಕುಂಬಳೆ ಉಪಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಸಭೆ ಪೆರಡಾಲದ ನವಜೀವನ ಪ್ರೌಢಶಾಲೆಯಲ್ಲಿ ಘಟಕಾಧ್ಯಕ್ಷೆ ಪ್ರಭಾವತಿ ಕೆದಿಲಾಯ ಪುಂಡೂರು ಅವರ ಅಧ್ಯಕ್ಷತೆಯಲ್ಲಿ ಜರಗಿತು. ಈ ಸಂದರ್ಭದಲ್ಲಿ ನೀಚರ್ಾಲಿನಲ್ಲಿ ನಡೆದ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದ ವಿವಿಧ ಸಮಿತಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಿದ ಮತ್ತು ಕನ್ನಡದ ಕಂಪನ್ನು ಪಸರಿಸಿದ ಅಧ್ಯಾಪಕ ಸಂಘದ ಸದಸ್ಯರನ್ನು ಅಭಿನಂದಿಸಲಾಯಿತು. ಇತ್ತೀಚಿಗೆ ನಿಧನರಾದ ಕರುಣಾಕರ ಅನಂತಪುರ ಅವರ ಸ್ಮರಣೆಗಾಗಿ ಕಾರ್ಯಕ್ರಮವನ್ನು ಆಯೋಜಿಸುವ ಬಗ್ಗೆ, ಶಿಕ್ಷಣ ಇಲಾಖೆ ನಡೆಸುವ ಕೆ-ಟೆಟ್ ಪರೀಕ್ಷೆಯನ್ನು ಕನ್ನಡ ಭಾಷೆಯಲ್ಲಿ ನಡೆಸುವಂತೆ ಈಗಾಗಲೇ ನೀಡಿರುವ ಮನವಿಯ ಪ್ರಗತಿ, ಕೆ-ಟೆಟ್ ಪರೀಕ್ಷೆಗೆ ಹಾಜರಾಗುವ ಅಧ್ಯಾಪಕರಿಗೆ ಮತ್ತು ಆಧ್ಯಾಪಕ ವಿದ್ಯಾಥರ್ಿಗಳಿಗೆ ಅನುಭವಿಗಳಿಂದ ತರಬೇತಿ ನೀಡುವ ಬಗ್ಗೆ, ಎಲ್.ಎಸ್.ಎಸ್, ಯು.ಎಸ್.ಎಸ್ ಬರೆಯುವ ವಿದ್ಯಾಥರ್ಿಗಳಿಗೆ ತರಬೇತಿ ನೀಡುವ ಬಗ್ಗೆ, ಶಾಲೆಗೆ ಸಂಬಂಧಿಸಿದ ಕಚೇರಿಗಳಲ್ಲಿ ಅಧಿಕಾರಿಗಳು ಕೇಳುತ್ತಿರುವ ಕನ್ನಡ ಮೈನಾರಿಟಿ ಪ್ರಮಾಣಪತ್ರದ ಬಗ್ಗೆ ಅಗತ್ಯ ನಿರ್ಣಯ ಕೈಗೊಳ್ಳಲಾಯಿತು. ಜೊತೆಗೆ ಕೆಲವು ಕನ್ನಡ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರು ತಮ್ಮ ಕಚೇರಿ ಪತ್ರ ವ್ಯವಹಾರಗಳನ್ನು ಕನ್ನಡದಲ್ಲೇ ಮಾಡುತ್ತಿದ್ದು, ಅವರನ್ನು ಅಭಿನಂದಿಸಿ, ಉಳಿದವರು ಕೂಡ ಇದೇ ರೀತಿಯಲ್ಲಿ ತಮ್ಮ ಕನ್ನಡಾಭಿಮಾನವನ್ನು ಪ್ರಕಟಿಸಬೇಕೆಂದು ಮನವಿ ಮಾಡಲಾಯಿತು ಹಾಗೂ ಇನ್ನಿತರ ಸಂಘಟನಾ ಪರವಾದ ಕಾರ್ಯಗಳ ಬಗ್ಗೆ ಚಚರ್ಿಸಿ ತೀಮರ್ಾನಿಸಲಾಯಿತು. ಸಭೆಯಲ್ಲಿ ಕೇಂದ್ರ ಸಮಿತಿ ಪದಾಧಿಕಾರಿಗಳಾದ ಕುಮಾರ ಸುಬ್ರಹ್ಮಣ್ಯ, ನವೀನ್ ಕುಮಾರ್, ಜ್ಯೋತಿ ಕೆ, ಗೋಪಾಲಕೃಷ್ಣ ಭಟ್, ಉಪಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಸದಸ್ಯರು ಭಾಗವಹಿಸಿದ್ದರು. ಉಪಜಿಲ್ಲಾ ಕಾರ್ಯದಶರ್ಿ ಪ್ರಶಾಂತ್ ಕುಮಾರ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಕಮಲಾಕ್ಷ ನಾಯಕ್ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries