ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 17, 2017
ಪೆರಡಾಲ ಸರಕಾರಿ ಪ್ರೌಢ ಶಾಲೆಯಲ್ಲಿ ನವಪ್ರಭಾ ತರಗತಿಗಳ ಉದ್ಘಾಟನೆ
ಬದಿಯಡ್ಕ: ಆಟೋಟ ಸ್ಪಧರ್ೆಗಳಲ್ಲಿ ನಾವು ಮೊದಲ ಸ್ಥಾನದಲ್ಲಿರಲು ಬಯಸುತ್ತೇವೆ. ಅದೇ ರೀತಿಯಲ್ಲಿ ತರಗತಿಯ ಕಲಿಕಾ ಚಟುವಟಿಕೆಗಳಲ್ಲೂ ಪ್ರಥಮ ಸ್ಥಾನವನ್ನು ಗಳಿಸಲು ಶ್ರಮ ಪಡಬೇಕು. ಆ ಮೂಲಕ ಶಾಲೆ ಮತ್ತು ಸಮಾಜದ ಕೀತರ್ಿ ಹೆಚ್ಚಿಸಲು ಸಾಧ್ಯವಾಗಬೇಕು ಎಂದು ಜಿಲ್ಲಾ ಪಂಚಾಯತು ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್ ವಿದ್ಯಾಥರ್ಿಗಳಿಗೆ ಕರೆಕೊಟ್ಟರು.
ಪೆರಡಾಲ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆಯುತ್ತಿರುವ ನವಪ್ರಭಾ ತರಗತಿಗಳನ್ನು ವಿದ್ಯಾಥರ್ಿಗಳಿಗೆ ಪುಸ್ತಕಗಳನ್ನು ವಿತರಿಸುವ ಮೂಲಕ ಔಪಚಾರಿಕವಾಗಿ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲೆಯ ರಕ್ಷಕ ಶಿಕ್ಷಕ ಸಮಿತಿಯ ಅಧ್ಯಕ್ಷ ಅಬ್ದುಲ್ ರಹಮಾನ್ ಹಾಜಿ ಅನ್ನಡ್ಕ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಸದಸ್ಯೆ ಶಾಂತಾ, ನಿವೃತ್ತ ಮುಖ್ಯೋಪಾಧ್ಯಾಯ ರಾಮಚಂದ್ರ, ಶಾಲೆಯ ಮಾತೃಸಂಘದ ಅಧ್ಯಕ್ಷೆ ಅನ್ನತ್ ಹಸನ್, ಅಧ್ಯಾಪಕರಾದ ಶಶಿ ಕುಮಾರ್ ಹಾಗೂ ಚಂದ್ರಹಾಸ ನಂಬಿಯಾರ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಮುಖ್ಯೋಪಾಧ್ಯಾಯ ರಾಜಗೋಪಾಲ ಕೆ. ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ನವಪ್ರಭಾದ ಸಂಚಾಲಕ ಅಬ್ದುಲ್ ಅಜೀಜ್ ವಂದಿಸಿದರು. ವಿದ್ಯಾಥರ್ಿನಿಯರು ಪ್ರಾರ್ಥನೆ ಹಾಡಿದರು.


