ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 17, 2017
ನ.26ರಂದು ವಿನಂತಿಪತ್ರ ಬಿಡುಗಡೆ
ಮಧೂರು: ಮಧೂರು ಸಮೀಪದ ಅರಂತೋಡು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜೀಣರ್ೋದ್ಧಾರದ ವಿನಂತಿಪತ್ರ ಬಿಡುಗಡೆ ಹಾಗೂ ನಿಧಿ ಸಂಚಯನ ಕಾರ್ಯಕ್ರಮ ನ.26ರಂದು ನಡೆಯಲಿದೆ.
ಬೆಳಿಗ್ಗೆ ಶ್ರೀ ಕ್ಷೇತ್ರದಲ್ಲಿ ಗಣಪತಿ ಹೋಮ, ಏಕಾದಶ ರುದ್ರಾಭಿಷೇಕ, ಕಾತರ್ಿಕಪೂಜೆ, ಅಪರಾಹ್ನ 3ಗಂಟೆಗೆ ಸಭಾ ಕಾರ್ಯಕ್ರಮ ಜರಗಲಿದೆ. ದೇಗುಲದ ತಂತ್ರಿವರ್ಯ ಬ್ರಹ್ಮಶ್ರೀ ವಿಷ್ಣುಪ್ರಕಾಶ್ ಪಟ್ಟೇರಿ ಕಾವುಮಠ ಮತ್ತು ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರು ಆಶೀರ್ವಚನ ನೀಡಲಿದ್ದಾರೆ.
ದೇವಾಲಯದ ಜೀಣರ್ೋದ್ಧಾರ ಸಮಿತಿಯ ಅಧ್ಯಕ್ಷ ಬಿ.ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸುವರು. ವಿಜ್ಞಾಪನಾ ಪತ್ರವನ್ನು ಜ್ಯೋತಿಷಿ ಮಧೂರು ನಾರಾಯಣ ರಂಗ ಭಟ್ ಬಿಡುಗಡೆಗೊಳಿಸುವರು. ಜ್ಯೋತಿಷಿ ಬೇಳ ಪದ್ಮನಾಭ ಶಮರ್ಾ ಇರಿಞ್ಞಾಲಕುಡ ನಿಧಿ ಸಂಚಯನವನ್ನು ಉದ್ಘಾಟಿಸುವರು.
ಈ ಸಂದರ್ಭ ರತನ್ಕುಮಾರ್ ಕಾಮಡ ಬಾರಿಕ್ಕಾಡು, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಕಾಸರಗೋಡು ಶ್ರೀ ಮಲ್ಲಿಕಾಜರ್ುನ ಕ್ಷೇತ್ರ ಜೀಣರ್ೋದ್ಧಾರ ಸಮಿತಿಯ ಅಧ್ಯಕ್ಷ ರಾಮ್ಪ್ರಸಾದ್, ಶ್ಯಾಮ್ಪ್ರಸಾದ್ ಮಾನ್ಯ ಉಪಸ್ಥಿತರಿರುವರು.


