HEALTH TIPS

No title

ಕಲ್ಮಷವಿಲ್ಲದ ಭಕ್ತಿಯೇ ಕ್ಷೇತ್ರ ವೃದ್ಧಿಗೆ ಪ್ರಧಾನ : ಪದ್ಮನಾಭ ಶರ್ಮ ಮಧೂರು: ಭಕ್ತನಾದವ ಸಮರ್ಪಣಾಭಾವದಿಂದ ಭಗವಂತನನ್ನು ಆರಾಧಿಸಿದರೆ, ಸ್ತುತಿಸಿದರೆ ಆ ಸ್ಥಳದಲ್ಲಿ ಪರಮಾತ್ಮನ ಸಾನಿಧ್ಯ ನೆಲೆನಿಲ್ಲುತ್ತದೆ. ಕಲ್ಮಷವಿಲ್ಲದೆ ಭಕ್ತಿಯೇ ಕ್ಷೇತ್ರ ಸಾನಿಧ್ಯ ವೃದ್ಧಿಗೆ ಪ್ರಧಾನ. ಒಂದು ಕ್ಷೇತ್ರ ಅಭಿವೃದ್ಧಿಯಾಗಬೇಕಾದರೆ ಆಸ್ತಿಕ ಬಂಧುಗಳ ಆತ್ಮಸಮರ್ಪಣೆ ಅತ್ಯಗತ್ಯ ಎಂದು ಜ್ಯೋತಿಷ್ಯ ರತ್ನ ಬೇಳ ಪದ್ಮನಾಭ ಶರ್ಮರು ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಮಧೂರು ಸಮೀಪದ ಅರಂತೋಡು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀಣರ್ೋದ್ಧಾರದ ಅಂಗವಾಗಿ ಆಯೋಜಿಸಿದ ನಿಧಿ ಸಂಚಯನ ಕಾರ್ಯಕ್ರಮವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರು ಕ್ಷಯವಾದ ದೇವಾಲಯಗಳ ವೈಭವ ಮರುಕಳಿಸಬೇಕಿದ್ದರೆ ಭಕ್ತರ ಪೂರ್ಣ ಪ್ರಮಾಣದ ಪಾಲ್ಗೊಳ್ಳುವಿಕೆ ಅಗತ್ಯ. ಕ್ಷೇತ್ರಗಳ ಜೀಣರ್ೋದ್ಧಾರದಲ್ಲಿ ಎಲ್ಲರೂ ತಮ್ಮನ್ನು ತೊಡಗಿಸಿಕೊಳ್ಳುವುದರ ಮೂಲಕ ಕ್ಷೇತ್ರ ಗತವೈಭವದಿಂದ ಮೆರೆಯುವಂತಾಗಲಿ ಎಂದು ಆಶೀರ್ವಚನ ನೀಡಿದರು. ಜೀಣರ್ೋದ್ಧಾರ ಸಮಿತಿ ಅಧ್ಯಕ್ಷ ಹಿರಿಯ ಧಾಮರ್ಿಕ ಮುಂದಾಳು ವಸಂತ ಪೈ ಬದಿಯಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜನನ ಮರಣಗಳ ಮಧ್ಯದ ಜೀವನದಲ್ಲಿ ಭಗವಂತನ ಆರಾಧನೆ ಪ್ರಧಾನವಾಗಿರಬೇಕು. ಜೀವನದಲ್ಲಿ ಮಾಡಿದ ಸತ್ಕಾರ್ಯದ ಮೇಲೆ ಆತನ ಜೀವನದ ಏರಿಳಿತಗಳು ತೀಮರ್ಾನವಾಗುತ್ತದೆ. ಭಗವಂತನನ್ನೇ ನಂಬಿದವನನ್ನು ಯಾವತ್ತೂ ಭಗವಂತ ಕೈಬಿಡನು ಎಂದು ವಸಂತ ಪೈಗಳು ತಿಳಿಸಿದರು. ಕ್ಷೇತ್ರ ತಂತ್ರಿವರ್ಯರಾದ ಬ್ರಹ್ಮಶ್ರೀ ವಿಷ್ಣುಪ್ರಕಾಶ ಪಟ್ಟೇರಿ ಕಾವುಮಠ ಹಾಗೂ ಕ್ಷೇತ್ರ ಮೊಕ್ತೇಸರರಾದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರು ಜೊತೆಯಾಗಿ ಬೆಳಗಿದ ದೀಪ ಪ್ರಜ್ವಲನೆಯೊಂದಿಗೆ ನಿಧಿ ಸಂಚಯನ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಖ್ಯಾತ ಜ್ಯೋತಿಷಿ ಮಧೂರು ನಾರಾಯಣ ರಂಗಾ ಭಟ್ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿದರು. ಧಾಮರ್ಿಕ ಮುಂದಾಳು ರವೀಶ ತಂತ್ರಿ ಕುಂಟಾರು, ಮಧೂರು ಕ್ಷೇತ್ರದ ಪವಿತ್ರಪಾಣಿ ರತನ್ಕುಮಾರ್ ಕಾಮಡ ಬಾರಿಕ್ಕಾಡು, ಉದ್ಯಮಿ ಕೆ.ಸುರೇಶ್ ಕಾಸರಗೋಡು, ಖ್ಯಾತ ಉದ್ಯಮಿ ಧಾಮರ್ಿಕ ಮುಂದಾಳು ರಾಮಚಂದ್ರ ಪೆಜತ್ತಾಯ ಕುದ್ರೆಪ್ಪಾಡಿ, ವಾಸುದೇವ ಹೊಳ್ಳ ಎಲ್ಲಂಗಳ, ಲಕ್ಷ್ಮೀನಾರಾಯಣ ತುಂಗ ಭಟ್, ಮಹಾಲಿಂಗಯ್ಯ ಮಧೂರು, ಡಾ. ನಾರಾಯಣ ಆಸ್ರ ಶುಭಾಶಂಸನೆಗೈಯುವುದರ ಜೊತೆಯಲ್ಲಿ ಜೀಣರ್ೋದ್ಧಾರಕ್ಕೆ ತಮ್ಮ ಪೂರ್ಣ ಸಹಕಾರವನ್ನು ತಿಳಿಸಿದರು. ಜಯರಾಮ ಅರಂತೋಡು ಉದಾರವಾಗಿ ಜೀಣರ್ೋದ್ಧಾರ ಸಮಿತಿಗೆ ನೀಡಿದ ಕಬೋರ್ಡನ್ನು ಹಸ್ತಾಂತರಿಸಲಾಯಿತು. ಜೀಣರ್ೋದ್ಧಾರ ಸಮಿತಿ ಕಾರ್ಯದಶರ್ಿ ಕಕ್ಕೆಪ್ಪಾಡಿ ವಿಷ್ಣು ಭಟ್ ಸ್ವಾಗತಿಸಿ, ಕೋಶಾಧಿಕಾರಿ ಯಸ್.ಯನ್.ಮಯ್ಯ ಬದಿಯಡ್ಕ ವಂದಿಸಿದರು. ಕೃಷ್ಣ ಕಾರಂತ ಮಾಸ್ಟರ್ ಪ್ರಸ್ತಾವಿಕ ನುಡಿಗಳನ್ನಾಡಿದರು. ನಾರಾಯಣಯ್ಯ ಕೊಲ್ಯ ಕಾರ್ಯಕ್ರಮ ನಿರೂಪಿಸಿದರು. ನಿಧಿ ಸಂಚಯನ ಹಾಗೂ ವಿಜ್ಞಾಪನಾ ಪತ್ರ ಬಿಡುಗಡೆ ಕಾರ್ಯಕ್ರಮದ ಅಂಗವಾಗಿ ಕ್ಷೇತ್ರದಲ್ಲಿ ಗಣಪತಿ ಹವನ, ಏಕಾದಶ ರುದ್ರಾಭಿಷೇಕ, ಕಾತರ್ಿಕ ಪೂಜೆ ನಡೆಯಿತು. ರಾಮಕೃಷ್ಣ ಅಡಿಗ, ವಾಸುದೇವ ಆಸ್ರ, ಗೋಪಾಲಕೃಷ್ಣ ಅಡಿಗ, ಮಾಧವ ಆಸ್ರ ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries