ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 12, 2017
ಬಂದವರು ಬಂದು ಹೋದರು= ಆಶ್ವಾಸನೆಗಳು ಪೊಳ್ಳು, ನಿಲ್ದಾಣ ಹೆಸರಿಗೆ ಮಾತ್ರ=ಯುವ ಜನರು ಆಂದೋಲನದತ್ತ
ಉಪ್ಪಳ: ಜಿಲ್ಲೆಯ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳಲ್ಲಿ ಉಪ್ಪಳ ಪೇಟೆಯೂ ಒಂದು. ವಾಣಿಜ್ಯಕೇಂದ್ರವಾಗಿ ಪ್ರಗತಿಯಲ್ಲಿರುವ ಉಪ್ಪಳದಲ್ಲಿ ಮೂಲಭೂತ ಸೌಕರ್ಯ ಕೊಡಮಾಡುವ ಮೂಲಕ ಪ್ರಯಾಣಿಕರ ಸುಖಿ ಪ್ರಯಾಣಕ್ಕೆ ಸಹಕಾರಿಯಾಗಬಲ್ಲ ರೈಲು ನಿಲ್ದಾಣ ಅತ್ಯವಶ್ಯ.ಇದಕ್ಕಾಗಿ ರೈಲು ನಿಲ್ದಾಣದ ಮೇಲ್ದಜರ್ೆ ಮಾಡಬೇಕೆಂಬುದು ಇಲ್ಲಿನ ರೈಲು ಪ್ರಯಾಣಿಕರ ಬಹು ಕಾಲದ ಬೇಡಿಕೆಯಾಗಿದೆ. ಪಾಲಕ್ಕಾಡ್ ರೈಲ್ವೇ ವಿಭಾಗಕ್ಕೆ ಒಳಪಟ್ಟಿರುವ ಉಪ್ಪಳ ರೈಲು ನಿಲ್ದಾಣವು ಆಡಳಿತಾತ್ಮಕವಾಗಿ ಹಾಗೂ ಕಾರ್ಯ ವೈಖರಿಯ ಮೂಲಕ ಅಬಿವೃದ್ಧಿ ಹೊಂದಿದೆ ಎನ್ನುತ್ತಾರೆ ಪಾಲಕ್ಕಾಡ್ ರೈಲ್ವೇ ವಿಭಾಗದ ಮುಖ್ಯಸ್ಥರು. ಆದರೆ ನಿಲ್ದಾಣದಲ್ಲಿ ಯಾವುದೇ ಗುರುತರ ಬದಲಾವಣೆಗಳಾಗಲಿ ಮೇಲ್ದಜರ್ೆ ಕಾರ್ಯವಾಗಲಿ ನಡೆಯದೇ ಇರುವುದು ವ್ಯಾಪಕ ಜನಾಕ್ರೋಶಕ್ಕೂ ಕಾರಣವಾಗಿದೆ.
ಈ ನಡುವೆ ನ. 7 ರಂದು ಪಾಲಕ್ಕಾಡ್ ರೈಲ್ವೇ ಡಿವಿಜನಲ್ ಮುಖ್ಯಾಧಿಕಾರಿ ಭೇಟಿ ನೀಡಿ ನಿಲ್ದಾಣದಲ್ಲಿ ನೂತನವಾಗಿ ನಿಮರ್ಿಸಲಾದ ಕಾಲ್ನಡಿಗೆ ಪ್ರಯಾಣಿಕರ ಮೇಲ್ಸೇತುವೆ ಉದ್ಘಾಟಿಸಿ ಬಳಿಕ ನಡೆದ ಸಾರ್ವಜನಿಕ ಸಭೆಯಲ್ಲಿ ಭರವಸೆ ಮತ್ತು ಸಂಶಯಗಳ ಮಾತುಗಳಿಂದ ಮನತಣಿಸಿ ತೆರಳಿದ್ದರು. ಜೊತೆಗೆ ಸಂಸದರು, ಶಾಸಕರು, ಜನಪ್ರತಿನಿಧಿಗಳು ಇದ್ದರು.
ಆದರೆ ಇದೀಗ ಬಂದ ಮಾಹಿತಿಯ ಪ್ರಕಾರ ಉಪ್ಪಳದಲ್ಲಿ ನಿಮರ್ಿಸಲಾದ ಕಾಲ್ನಡಿಗೆ ಸೇತುವೆ ರೈಲ್ವೇ ಇಲಾಖೆಯ ಸಾಮಾನ್ಯ ನಿಧಿಯಿಂದ ನಿಮರ್ಿಸಲಾಗಿದ್ದು, ಹಾಗೆಮದು ಈ ಕರಣಕ್ಕೆ ಉಪ್ಪಳ ರೈಲು ನಿಲ್ದಾಣ ಮೇಲ್ದಜರ್ೆಗೇರಿಸಲು ಸಾಧ್ಯವಿಲ್ಲ. ಈಗಿನ ಲೆಕ್ಕಾಚಾರದಂತೆ ಇರುವ ಸ್ಟೇಶನ್ ಮಾಸ್ತರ್ ಹುದ್ದೆ ರದ್ದುಗೊಳಿಸಿ ಜೊತೆಗೆ ಇತರ 7 ಹುದ್ದೆಗಳನ್ನೂ ರದ್ದುಗೊಳಿಸಿ ಕೇವಲ ಓರ್ವ ಟಿಕೆಟ್ ಕಲೆಕ್ಟರ್ನನ್ನು ಮಾತ್ರ ನೇಮಕಗೊಳಿಸಲು ಉದ್ದೇಶಿಸಿರುವುದಾಗಿ ತಿಳಿದುಬಂದಿದೆ.
ಈ ವಿಷಯ ಗುರುವಾರ ತಿಳಿದುಬರುತ್ತಿದ್ದಂತೆ ಉಪ್ಪಳ ರ್ರೈಲು ನಿಲ್ದಾಣ ಕ್ರಿಯಾ ಸಮಿತಿಯವರು ರೊಚ್ಚಿಗೆದ್ದಿದ್ದು ಈವರೆಗಿನ ಶಾಂತಿಯುತ ಹೋರಾಟ ಕೈಬಿಟ್ಟು ಉಗ್ರ ಸ್ವರೂಪದ ಚಳವಳಿಗೆ ಧುಮುಕಲು ನಿರ್ಧರಿಸಿದ್ದಾರೆ. ಈಗಾದಲ್ಲಿ ಮುಂದಿನ ಪರಿಸ್ಥಿತಿಗಳಿಗೆ ರೈಲು ಇಲಾಖೆ, ಸಂಸದರು ಜವಾಬ್ದಾರರಾಗಿರಬೇಕಾದ ಪರಿಸ್ಥಿತಿ ನಿಮರ್ಾಣವಾಗಲಿದೆ.
ವಿದ್ಯಾಥರ್ಿಗಳು ರಂಗಕ್ಕೆ:
ಉಪ್ಪಳ ರೈಲು ನಿಲ್ದಾಣ ಅಧಿಕೃತರಿಂದ ಈರೀತಿ ಮೂಲೆಗುಂಪಾಗುವುದರಿಂದ ಅತೀ ಹೆಚ್ಚು ತೊಂದರೆಗೊಳಗಾಗುವುದು ಸಾವಿರಕ್ಕಿಂತಲೂ ಮೇಲ್ಪಟ್ಟು ನಿತ್ಯ ಪ್ರಯಾಣಿಕರಾದ ಈ ಪರಿಸರ ವ್ಯಾಪ್ತಿಯ ವಿದ್ಯಾಥರ್ಿಗಳು. ಉಪ್ಪಳ ರೈಲು ನಿಲ್ದಾಣ ಕೊನೆಗೂ ಅಧಿಕೃತರಿಂದ ಅವಗಣನೆಗೆಗೊಳಗಾಗುತ್ತಿದೆ ಎಂಬ ವಿವರ ಗುರುವಾರ ತಿಳಿಯುತ್ತಿದ್ದಂತೆ 40 ಕ್ಕಿಂತಲೂ ಹೆಚ್ಚು ವಿದ್ಯಾಥರ್ಿಗಳೇ ಇರುವ ವಾಟ್ಸ್ಅಫ್ ಗುಂಪುಗಳಲ್ಲಿ ಚಚರ್ೆಗಳು, ಹೋರಾಟದ ಮಾತುಗಳು ಹರಿಯತೊಡಗಿದ್ದು, ಆತಂಕದ ವಾತಾವರಣ ನಿಮರ್ಾಣವಾಗುವ ಸೂಚನೆ ಲಭಿಸಿದೆ.


