HEALTH TIPS

No title

`ರಾಮ ಮಂದಿರ ನಿಮರ್ಿಸುವವರೆಗೆ ವಿರಮಿಸುವುದಿಲ್ಲ' `ಅಯೋಧ್ಯೆಯಲ್ಲಿ ರಾಮ ಮಂದಿರ ನಿಮರ್ಿಸುವವರೆಗೆ ವಿರಮಿಸುವುದಿಲ್ಲ. ಸಂಧಾನದ ಮಾತಿಲ್ಲ, ತೋಳಿನ ಶಕ್ತಿಯ ಮೇಲೆ ಮಂದಿರ ಕಟ್ಟುತ್ತೇವೆ' ಎಂದು ಧರ್ಮ ಸಂಸತ್ನಲ್ಲಿ ಭಾಗವಹಿಸಿದ್ದ ಮಠಾಧೀಶರು ಮತ್ತು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಮುಖಂಡರು ಘೋಷಿಸಿದರು. ಉಡುಪಿ: `ಅಯೋಧ್ಯೆಯಲ್ಲಿ ರಾಮ ಮಂದಿರ ನಿಮರ್ಿಸುವವರೆಗೆ ವಿರಮಿಸುವುದಿಲ್ಲ. ಸಂಧಾನದ ಮಾತಿಲ್ಲ, ತೋಳಿನ ಶಕ್ತಿಯ ಮೇಲೆ ಮಂದಿರ ಕಟ್ಟುತ್ತೇವೆ' ಎಂದು ಧರ್ಮ ಸಂಸತ್ನಲ್ಲಿ ಭಾಗವಹಿಸಿದ್ದ ಮಠಾಧೀಶರು ಮತ್ತು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಮುಖಂಡರು ಘೋಷಿಸಿದರು. ಧರ್ಮ ಸಂಸತ್ ಸಮಾರೋಪದ ಪ್ರಯುಕ್ತ ಇಲ್ಲಿನ ಮಹಾತ್ಮ ಗಾಂಧಿ ಸ್ಮಾರಕ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಹಿಂದೂ ಸಮಾಜೋತ್ಸವದಲ್ಲಿ ಮಾತನಾಡಿದ ಬಹುತೇಕರು ರಾಮ ಮಂದಿರ ನಿಮರ್ಾಣವನ್ನೇ ಪ್ರಧಾನವಾಗಿ ಪ್ರಸ್ತಾಪಿಸಿದರು. `ಮಂದಿರ ನಿಮರ್ಾಣ ಆಗುವವರೆಗೆ ವಿರಮಿಸಬೇಡಿ' ಎಂದು ಸಮಾವೇಶದಲ್ಲಿ ಭಾಗವಹಿಸಿದ್ದ ಯುವ ಸಮೂಹಕ್ಕೆ ಕರೆ ನೀಡಿದರು. ಧರ್ಮ ಸಂಸತ್ನ ನೇತೃತ್ವ ವಹಿಸಿದ್ದ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಮಾತನಾಡಿ, `ಇಡೀ ಹಿಂದೂ ಸಮಾಜ ತಲೆತಗ್ಗಿಸುವ ರೀತಿಯಲ್ಲಿ ಅಯೋಧ್ಯೆಯ ರಾಮ ಮಂದಿರ ಇದೆ. ಅದನ್ನು ನೋಡಿದರೆ ನಾವೆಲ್ಲ ನಾಚಿಕೆಪಟ್ಟುಕೊಳ್ಳುವಂತಹ ಪರಿಸ್ಥಿತಿ ಇದೆ. ಭವ್ಯವಾದ ರಾಮ ಮಂದಿರ ನಿಮರ್ಾಣ ಆಗುವವರೆಗೆ ಯುವಕರೂ ವಿಶ್ರಾಂತಿ ಪಡೆಯಬೇಡಿ' ಎಂದರು. ವಿಎಚ್ಪಿ ಅಂತರರಾಷ್ಟ್ರೀಯ ಕಾಯರ್ಾಧ್ಯಕ್ಷ ಪ್ರವೀಣ್ ತೊಗಾಡಿಯಾ ಮಾತನಾಡಿ, `ನಾವು ಈ ಹೋರಾಟದಿಂದ ಶಾಸಕ, ಸಂಸದ, ಮಂತ್ರಿ ಆಗಬೇಕಿಲ್ಲ. ಟಾಟಾ, ಬಿಲರ್ಾ ಅವರಂತಹ ಶ್ರೀಮಂತರೂ ಆಗಬೇಕಿಲ್ಲ. ನಮ್ಮ ರಾಮ ಜೋಪಡಿಯಲ್ಲಿದ್ದಾನೆ. ಅದರಿಂದಾಗಿಯೇ ದೇಶ ಸಂಕಷ್ಟದಲ್ಲಿ ನರಳುತ್ತಿದೆ. ಭವ್ಯವಾದ ರಾಮ ಮಂದಿರೆ ತಲೆ ಎತ್ತಿದರೆ ದೇಶದ ಸಂಕಷ್ಟಗಳೆಲ್ಲವೂ ಪರಿಹಾರವಾಗುತ್ತದೆ' ಎಂದರು. `ಸಂಧಾನದ ಮೂಲಕ ವಿವಾದ ಇತ್ಯರ್ಥ ಮಾಡಿಕೊಳ್ಳಿ ಎಂದು ಹಲವರು ಸಲಹೆ ನೀಡುತ್ತಾರೆ. ಆದರೆ, ಯಾವಾಗಲೂ ಸಂಧಾನಕ್ಕೆ ಹೋದರೆ ಟೋಪಿಧಾರಿಗಳು ಬರುವುದೇ ಇಲ್ಲ. ಇನ್ನು ನಿಶ್ಚಿತವಾಗಿ ಅದೇ ಸ್ಥಳದಲ್ಲಿ ಮಂದಿರ ಕಟ್ಟುತ್ತೇವೆ. ಹಿಂದೂಗಳ ಭುಜಬಲದ ಮೇಲೆ ಮಂದಿರ ನಿಮರ್ಿಸುತ್ತೇವೆ' ಎಂದು ಹೇಳಿದರು. `ಹಳ್ಳಿಗಳಿಗೆ ಹಿಂತಿರುಗಿದ ಬಳಿಕ ರಾಮ ಮಂದಿರ ನಿಮರ್ಾಣಕ್ಕಾಗಿ ವ್ರತ ಕೈಗೊಳ್ಳಿ. ಎಲ್ಲ ಹಿಂದೂಗಳನ್ನು ಸಂಘಟಿಸಿ. ಹಿಂದೂಗಳ ಸಂಕಷ್ಟಗಳಿಗೆ ಸ್ಪಂದಿಸಿ. ಆಚರಣೆಯಲ್ಲಿ ಹಿಂದೂಗಳಾಗಿ. ಸಕ್ರಿಯ ಮತ್ತು ಜಾಗೃತ ಹಿಂದೂಗಳಾಗಿ ಇರಿ. ಹಿಂದೂ ರೈತರು, ಬಡವರು, ಕಾಮರ್ಿಕರಿಗೆ ನೆರವಾಗಿ' ಎಂದು ಕರೆ ನೀಢಿದರು. ವಿಎಚ್ಪಿ ರಾಷ್ಟ್ರೀಯ ಪ್ರಧಾನ ಕಾರ್ಯದಶರ್ಿ ಚಂಪತ್ ರಾಜ್ ಮಾತನಾಡಿ, `ಧರ್ಮ ಸಂಸತ್ನಲ್ಲಿ 4,100 ಸ್ವಾಮೀಜಿಗಳು, ಸಂತರು, ಸಾಧುಗಳು ಪಾಲ್ಗೊಂಡಿದ್ದಾರೆ. ದೇಶದ ಬಹುತೇಕ ಎಲ್ಲ ರಾಜ್ಯಗಳ ಸಾಧು, ಸಂತರು ಭಾಗಿಯಾಗಿದ್ದಾರೆ. ಅಯೋಧ್ಯೆಯಲ್ಲಿ ರಾಮನ 5 ಸಾವಿರ ಮಂದಿರಗಳಿವೆ. ಆದರೆ, ಅಲ್ಲಿ ಭವ್ಯವಾದ ರಾಮ ಮಂದಿರ ಬೇಕು ಎಂಬುದು ಎಲ್ಲ ಸಾಧು ಸಂತರ ಆಶಯ' ಎಂದರು. ಮುಸ್ಲಿಂ ಸಮುದಾಯ ರಾಮ ಮಂದಿರ ವ್ಯಾಜ್ಯದಿಂದ ಸ್ವಯಂಪ್ರೇರಿತವಾಗಿ ಹಿಂದಕ್ಕೆ ಸರಿಯಬೇಕು. ಮಂದಿರ ನಿಮರ್ಾಣಕ್ಕೆ ಜಮೀನು ಬಿಟ್ಟುಕೊಡಬೇಕು. ಆಗ ಮುಸ್ಲಿಮರನ್ನು ದೇಶದ ಎಲ್ಲ ಜನರೂ ಗೌರವಿಸುತ್ತಾರೆ. ನೀವೆಲ್ಲರೂ ರಾಮ ಮಂದಿರ ನಿಮರ್ಾಣದ ಕನಸಿನೊಂದಿಗೆ ಇಲ್ಲಿಂದ ಮುನ್ನಡೆಯಿರಿ' ಎಂದು ಹೇಳಿದರು. ಧರ್ಮ ಸಂಸತ್ ಸ್ವಾಗತ ಸಮಿತಿ ಕಾಯರ್ಾಧ್ಯಕ್ಷ ಡಿ.ವೀರೇಂದ್ರ ಹೆಗ್ಗಡೆ ಸ್ವಾಗತ ಭಾಷಣ ಮಾಡಿ, ಧರ್ಮ ಸಂಸತ್ತಿನ ನಿರ್ಣಯಗಳ ಕುರಿತು ವಿವರಿಸಿದರು. ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠದ ಮಾದಾರ ಚೆನ್ನಯ್ಯ ಸ್ವಾಮೀಜಿ, ಸುಬ್ರಹ್ಮಣ್ಯದ ವಿದ್ಯಾಪ್ರಸನ್ನ ಸ್ವಾಮೀಜಿ, ಆನೆಗೊಂದಿಯ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ, ಉತ್ತರ ಭಾರತದ ವಿವಿಧೆಡೆಯಿಂದ ಬಂದಿದ್ದ ಸ್ವಾಮೀಜಿಗಳು ಸೇರಿದಂತೆ 50ಕ್ಕೂ ಹೆಚ್ಚು ಸಾಧು ಸಂತರು ವೇದಿಕೆಯಲ್ಲಿದ್ದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries