ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 16, 2017
ಮವ್ವಾರು ಷಡಾನನ ಗ್ರಂಥಾಲಯದಲ್ಲಿ ಹೊಸ ಪುಸ್ತಕ ಹೊಸ ವಾಚನ
ಮುಳ್ಳೇರಿಯ : ವಾಚನ ಮನುಷ್ಯನಲ್ಲಿ ಗುಣಾತ್ಮಕ ಬದಲಾವಣೆಯನ್ನುಂಟುಮಾಡುತ್ತದೆ. ಗ್ರಂಥಕಾರರ ಜ್ಞಾನ ಸೌರಭ ನಮ್ಮೊಳಗಿಳಿಯಬೇಕಾದರೆ ಗ್ರಂಥಾಧ್ಯಯನ ಮಾಡುವುದು ಅಗತ್ಯ. ಓದು ಮನುಷ್ಯನಲ್ಲಿ ಒಳ್ಳೆಯ ಚಿಂತನೆ ಹಾಗೂ ಉತ್ತಮ ಪ್ರವೃತ್ತಿಯನ್ನು ಬೆಳೆಸುತ್ತದೆ ಎಂಬುದಾಗಿ ನಿವೃತ್ತ ಪ್ರಧಾನ ಅಧ್ಯಾಪಕ ಸೀತಾರಾಮ ಕುಂಜತ್ತಾಯ ಅಭಿಪ್ರಾಯ ಪಟ್ಟರು.
ಅವರು ಮವ್ವಾರು ಶ್ರೀ ಷಡಾನನ ಯುವಕ ಸಂಘ ಮತ್ತು ಗ್ರಂಥಾಲಯದ ಆಶ್ರಯದಲ್ಲಿ ನಡೆದ ಕಾಸರಗೋಡು ಜಿಲ್ಲಾ ಲೈಬ್ರರಿ ಕೌನ್ಸಿಲ್ನ 2017-18ನೇ ಯೋಜಿತ ಕಾರ್ಯಕ್ರಮ"ಹೊಸ ಪುಸ್ತಕ-ಹೊಸ ವಾಚನ" ಎಂಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ನಿವೃತ್ತ ಅಧ್ಯಾಪಕರಾದ ಅಳಿಕೆ ಸುಬ್ರಹ್ಮಣ್ಯ ಭಟ್ ಮಾತನಾಡಿ, ಗ್ರಂಥಾಲಯ ನಮ್ಮ ಸಂಪತ್ತು. ಪ್ರತಿಯೊಬ್ಬ ವಾಚಕರೂ ಗ್ರಂಥಾಲಯದ ಸುಪಯೋಗ ಪಡೆದುಕೊಳ್ಳಬೇಕೆಂದು ಕರೆನೀಡಿದರು.
ನಿವೃತ್ತ ಪ್ರಾಂಶುಪಾಲರಾದ ಡಾ. ಬೇಸಿ ಗೋಪಾಲಕೃಷ್ಣ ಇವರು ಟಿ.ಎ ಯನ್ ಖಂಡಿಗೆಯವರು ಬರೆದ "ನಾಭಿಮೂಲದಿಂದ" ಎಂಬ ಪುಸ್ತಕವನ್ನು ಪರಿಚಯಪಡಿಸುತ್ತಾ ಪ್ರತಿಯೊಂದು ಅಧ್ಯಾಯದ ಸಾರಾಂಶವನ್ನು ಬಹಳ ರಸಕರವಾಗಿ ವಿವರಿಸಿ, ಓದು ಓದಿಗೆ ಮಾತ್ರ ಸೀಮಿತವಾಗದೇ ಬದುಕು ರೂಪುಗೊಳ್ಳುವಲ್ಲಿ ಪರಿಣಾಮ ಬೀರಬೇಕು. ಕವಿಯ ಅಭಿಪ್ರಾಯದಂತೆ ಓದುಗರು ಓಳ್ಳೆಯವರಾಗಬೇಕು ಎಂದರು. ನವಜೀವನ ಶಾಲೆ ಪೆರಡಾಲದ ಅಧ್ಯಾಪಿಕೆ ಜ್ಯೋತ್ಸ್ನಾ ಮಾತನಾಡಿ ಸತ್ಯನಾರಾಯಣಯವರು ಬರೆದ "ನಗೆಯ ಸೊಬಗು" ಹಾಗೂ ಎಂ ವ್ಯಾಸ ಅವರ ಅರ್ಧ ಕಥಾನಕ ಎಂಬ ಪುಸ್ತಕವನ್ನು ಪರಿಚಯಿಸಿದರು. ಬಳಿಕ ಮರಿಕ್ಕಾನ ಶಾಲಾ ಅಧ್ಯಾಪಿಕೆ ವಾಣೀಶ್ರೀಯವರು ಎ.ಆರ್ ಮಣಿಕಾಂತ್ಯವರ "ಮನಸ್ಸು ಮಾತಾಡಿತು" ಎಂಬ ಪುಸ್ತಕವನ್ನು ಪರಿಚಯಿಸುತ್ತಾ ಇವರ ಕೃತಿಗಳು ಜೀವನ ಜಿಗುಪ್ಸೆಗೊಳಗಾದವರನ್ನು ಬದುಕಿನೆಡೆಗೆ ಎಳೆದು ತರುವಷ್ಟು ಪ್ರಭಾವಶಾಲಿಯಾಗಿದೆ ಎಂದರು.
ಚಾತುಕುಟ್ಟಿ ಮಾಸ್ತರ್ ಮವ್ವಾರು ಮಲೆಯಾಳ ಭಾಷಾ ಬರಹಗಾರರಾದ ಜೋಜರ್್ ಪುಲಿಕ್ಕನ್ಯವರು ಬರೆದ "ವಿರತಾಂಙಿಕ್ಕ್ಚುಟ್ಟು" ಎಂಬ ಪುಸ್ತಕವನ್ನು ಪರಿಚಯಿಸುತ್ತಾ ಭಾಷಣ ಕಲೆ, ಭಾಷಣಕಾರರು ಎದುರಿಸುವ ಸಮಸ್ಯೆಗಳು, ಸಿದ್ಧ ಭಾಷಣಗಳನ್ನು ಮಾಡುವ ಪ್ರಮಾದಗಳ ಬಗ್ಗೆ ಕೃತಿಕಾರರ ಆಶಯಗಳನ್ನು ವಿವರಿಸಿದರು.
ನಿವೃತ್ತ ಬ್ಯಾಂಕ್ ಪ್ರಬಂಧಕ ಎ ಕೃಷ್ಣಮೂತರ್ಿಯವರು ಖ್ಯಾತ ಲೇಖಕ ಡಾ. ಯಸ್.ಯಲ್ ಬೈರಪ್ಪರವರ ಕೃತಿ " ಉತ್ತರ ಕಾಂಡ" ಎಂಬ ಹೊಸ ಪುಸ್ತಕ ಕುರಿತು ಬಹಳ ರಸವತ್ತಾದ ಭಾಗಗಳನ್ನು ಉಲ್ಲೇಖಿಸಿ ವಿಚಾರ ಮಂಡಿಸಿ ಲೇಖಕರ ಪರಿಚಯ ಬದುಕಿನ ಬಗ್ಗೆ ವಿವರಿಸಿದರು. ಬಳಿಕ ಅಕ್ಟೋಬರ್ 29ರಂದು ಗ್ರಂಥಾಲಯವು ನಡೆಸಿದ ಸ್ಪಧರ್ೆಗಳ ವಿಜೇತರಿಗೆ ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಸಂಘದ ಉಪಾಧ್ಯಕ್ಷ ಗಂಗಾಧರ ಮಾಸ್ತರ್ ಮವ್ವಾರು ಸ್ವಾಗತಿಸಿದರು. ಕು. ಕೃತಿಕಾ ಪ್ರಾರ್ಥನೆ ಹಾಡಿದರು. ಸಂಘದ ಕಾರ್ಯದಶರ್ಿ ಕೆ ಸದಾಶಿವ ವಂದಿಸಿದರು.


