HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಎಡನೀರು ಶ್ರೀ ಭಾರತೀ ಬಾಲಗೋಕುಲ: ನ.19ರಂದು ಉದ್ಘಾಟನಾ ಸಮಾರಂಭ ಬದಿಯಡ್ಕ : ಎಡನೀರು ಶ್ರೀ ವಿಷ್ಣುಮಂಗಲ ಕ್ಷೇತ್ರ ಪರಿಸರದಲ್ಲಿ ನ. 19 ಭಾನುವಾರ ಎಡನೀರು ಶ್ರೀ ಭಾರತೀ ಬಾಲಗೋಕುಲದ ಉದ್ಘಾಟನೆಯು ಜರಗಲಿರುವುದು. ಬೆಳಿಗ್ಗೆ 10 ಘಂಟೆಗೆ ಜರಗುವ ಕಾರ್ಯಕ್ರಮವನ್ನು ಶ್ರೀಮದ್ ಎಡನೀರು ಮಠಾಧೀಶ ಪರಮಪೂಜ್ಯ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರು ದೀಪ ಬೆಳಗಿಸಿ ಉದ್ಘಾಟನೆ ಮತ್ತು ಆಶೀರ್ವಚನ ನೀಡಲಿರುವರು. ಬಾಲಗೋಕುಲ ಕಾಸರಗೋಡು ತಾಲೂಕು ಅಧ್ಯಕ್ಷರಾದ ಜಯರಾಮ ಶೆಟ್ಟಿ ಮುಖ್ಯಭಾಷಣ ಮಾಡಲಿರುವರು ಎಂದು ಪ್ರಕಟನೆಯು ತಿಳಿಸಿದೆ. ಸಾಂಸ್ಕೃತಿಕ ಕೇರಳದ ಅಂಗವಾದ ಬಾಲಗೋಕುಲವು 40ವರ್ಷಗಳನ್ನು ಪೂರ್ಣಗೊಳಿಸುತ್ತಿದೆ. ಸನಾತನ ಮೌಲ್ಯಗಳನ್ನು ತಿಳಿದುಕೊಂಡು ಬೆಳೆಯುವ ಬಾಲ್ಯಕಾಲವು ರಾಷ್ಟ್ರದ ವೈಭವಕ್ಕೆ ಭದ್ರಬುನಾದಿಯನ್ನು ಒದಗಿಸುತ್ತದೆ. ಯಾವ ಸನ್ನಿವೇಶದಲ್ಲೂ ಸಂತೋಷದೊಂದಿಗೆ ಜೀವನವನ್ನು ಮುನ್ನಡೆಸಲು ಸಾಧ್ಯವಿರುವ ರೀತಿಯಲ್ಲಿ ಮಕ್ಕಳನ್ನು ಬೆಳೆಸಬೇಕಾದುದು ವರ್ತಮಾನ ಕಾಲಘಟ್ಟದ ಅನಿವಾರ್ಯತೆಯಾಗಿದೆ. ಧರ್ಮದ ಸಾರವನ್ನು, ಮೌಲ್ಯಗಳನ್ನು ತಿಳಿಯಲಿರುವ ಅವಕಾಶವು ಇಂದು ಮಕ್ಕಳಿಗೆ ಲಭಿಸುವುದಿಲ್ಲ. ಕೌಟುಂಬಿಕ ವಾತಾವರಣದಿಂದ ಧಾಮರ್ಿಕ ಮೌಲ್ಯಗಳನ್ನು ತಿಳಿಯುವ ಸಂದರ್ಭಗಳೂ ಈಗ ಲಭಿಸುವುದಿಲ್ಲ. ಶಿಥಿಲಗೊಳ್ಳುತ್ತಿರುವ ಬಾಂಧವ್ಯಗಳು ಧಾಮರ್ಿಕ ಮೌಲ್ಯಗಳನ್ನು ಗಳಿಸುವ ಅವಕಾಶಗಳನ್ನು ಮತ್ತಷ್ಟು ಪರಿಮಿತಗೊಳಿಸುತ್ತಿದೆ. ವೇದಪುರಾಣ, ಇತಿಹಾಸ ಹಾಗೂ ಉಪನಿಷತ್ತುಗಳು ಭಾರತೀಯ ಸಂಸ್ಕೃತಿಯ ಅನಘ್ರ್ಯ ಸಂಪತ್ತುಗಳಾಗಿವೆ. ಇವುಗಳ ಆಧಾರದಲ್ಲಿ ಬೆಳೆದು ಬಂದ ಸನಾತನ ಧರ್ಮವೇ ಭಾರತೀಯ ಸಂಸ್ಕೃತಿಯಾಗಿದೆ. ಇದನ್ನು ನಮ್ಮ ಮುಂದಿನ ಪೀಳಿಗೆಗೆ ವಗರ್ಾಯಿಸುವ ಅವಕಾಶವನ್ನು ಬಾಲಗೋಕುಲವು ಒದಗಿಸಿಕೊಡುತ್ತದೆ. ಪ್ರತಿವಾರದಲ್ಲಿ ನಡೆಯುವ ತರಗತಿಗಳಲ್ಲಿ ಅನೌಪಚಾರಿಕ ಶಿಕ್ಷಣ ಪದ್ದತಿಯ ಮೂಲಕ ಚಿಣ್ಣರ ಮನಸ್ಸುಗಳಲ್ಲಿ ಮಾನವೀಯತೆಯೊಂದೊಡಗೂಡಿದ ಸಾಂಸ್ಕೃತಿಕ ಪ್ರಜ್ಞೆಯನ್ನು ಬೆಳೆಸಲೂ ಪ್ರಾದೇಶಿಕ ಹಿರಿಮೆಗಳನ್ನು ಎತ್ತಿಹಿಡಿಯಲೂ ಬಾಲಗೋಕುಲವು ಕಾರ್ಯವೆಸಗುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries