ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 12, 2017
ಮಂಜೇಶ್ವರ ಪೇಟೆಗೆ ವಾಹನ ಸಂಚಾರ ಆರಂಭ
ಮಂಜೇಶ್ವರ: ಮಂಜೇಶ್ವರ ಶ್ರೀಮತ್ ಅನಂತೇಶ್ವರ ದೇವಸ್ಥಾನದಲ್ಲಿ ನ.19ರಿಂದ 25ರ ವರೆಗೆ ನಡೆಯಲಿರುವ ಷಷ್ಠಿ ಮಹೋತ್ಸವದ ಪ್ರಯುಕ್ತ ನ.10ರಿಂದ ಹೊಸಂಗಡಿ ರೈಲ್ವೇ ಗೇಟ್ನಿಂದ ಉದ್ಯಾವರ ರೈಲ್ವೇ ಗೇಟ್ನ ವರೆಗೆ ಅಳವಡಿಸಿದ್ದ ವಾಹನ ಸಂಚಾರ ನಿಷೇಧವನ್ನು ಹಿಂತೆಗೆಯಲಾಗಿದೆ. ಅದರಂತೆ ಬಸ್ ಸಹಿತ ವಾಹನ ಸಂಚಾರ ಎಂದಿನಂತೆ ಸಾಗುತ್ತಿದೆ.
ಇದೀಗ ನೂತನವಾಗಿ ಮೇಲಂಗಡಿ ದಿನೇಶ್ ಬೀಡಿ ಹಾಗೂ ಕಟ್ಟೆಬಜಾರ್ನಲ್ಲಿ ನಿಮರ್ಿಸಿದ ಚರಂಡಿಯನ್ನು ರಸ್ತೆಗೆ ಹೊಂದಿಕೊಂಡು ಇಳಿಜಾರಾಗಿ ಜಲ್ಲಿ ಹುಡಿ, ಕಲ್ಲು ಹಾಕಿ ಸಮತಟ್ಟುಗೊಳಿಸಲಾಗಿದೆ. ಷಷ್ಠಿ ಮಹೋತ್ಸವ ಕಳೆದ ಬಳಿಕ ನ.27ರಿಂದ ಮತ್ತೆ ರಸ್ತೆ ಸಂಚಾರವನ್ನು ಮುಚ್ಚಿ 3 ಕಡೆಗಳಿಗೆ 100 ಮೀಟರ್ನಂತೆ 350 ಮೀಟರ್ ಕಾಂಕ್ರೀಟೀಕರಣ, ಬಳಿಕ ಹಗಲು - ರಾತ್ರಿ ಒಟ್ಟು 4 ಕಿಲೋ ಮೀಟರ್ ರಸ್ತೆಗೆ ಮೆಕ್ಕಡಾಂ ಡಾಮರೀಕರಣ ನಡೆಸಿ ಡಿಸೆಂಬರ್ನೊಳಗೆ ಕಾಮಗಾರಿ ಪೂತರ್ಿಗೊಳಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಹಾರಿಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



