ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 12, 2017
ಬಾಕ್ಸೈಟ್ ಗಣಿಗಾರಿಕೆಗೆ ಯೋಜನೆ
ಕುಂಬಳೆ: ಕುಂಬಳೆ ಸನಿಹದ ಅನಂತಪುರದಲ್ಲಿರುವ ಕೈಗಾರಿಕಾ ಇಲಾಖೆಗೆ ಸೇರಿದ ಜಮೀನಿನಲ್ಲಿ ಭಾರೀ ಪ್ರಮಾಣದ ಬಾಕ್ಸೈಟ್(ಅಲ್ಯುನಿನಿಯಂ ಅದಿರು) ಖನಿಜ ಪತ್ತೆಯಾಗಿದ್ದು, ಬಾಕ್ಸೈಟ್ ಗನಿಗಾರಿಕೆಗೆ ಸರಕಾರವು ರೂಪು ನೀಡಲು ಉದ್ದೇಶಿಸಿ ಮುಂದೆಬರುತ್ತಿದೆ.
ಗನಿಗಾರಿಕೆ ನಡೆಸಲು ಮಲಬಾರ್ ಕ್ಲೇ ಆಂಡ್ ಸಿರಾಮಿಕ್ಸ್ ಸಂಸ್ಥೆಗೆ ಈ ಪ್ರದೇಶದ 12 ಎಕ್ರೆ ಭೂಮಿ ಮಂಜೂರುಗೊಳಿಸಲು ಸರಕಾರ ಚಾಲನೆ ನೀಡಿದೆ. ಅನಂತಪುರದ ವಿಶ್ವಪ್ರಸಿದ್ದ ಶ್ರೀಅನಂತಪದ್ಮನಾಭ ದೇವಸ್ಥಾನದ ಪೂರ್ವಭಾಗದಲ್ಲಿರುವ ಈ ನಿವೇಶನದಲ್ಲಿ ಮೊದಲ ಗನಿಗಾರಿಕೆಗೆ ಎರಡೂವರೆ ಎಕ್ರೆ ಸ್ಥಳ ಮಲಬಾರ್ ಕ್ಲೇ ಆಂಡ್ ಸಿರಾಮಿಕ್ಸ್ ಸಂಸ್ಥೆ ಆವಶ್ಯಪಟ್ಟಿತ್ತು. ಈ ನಿಟ್ಟಿನಲ್ಲಿ ಈ ಸಂಸ್ಥೆಯ ಅಧಿಕಾರಿಗಳು ಗ್ರಾಮಾಧಿಕಾರಿ ಒಂದೂವರೆ ತಿಂಗಳ ಹಿಂದೆ ಸ್ಥಳದ ಸಮೀಕ್ಷೆ ನಡೆಸಿದ್ದರು. ಬಳಿಕ ವರದಿಯನ್ವಯ ಕಂದಾಯ ಇಲಾಖೆ ಎರಡೂವರೆ ಎಕ್ರೆಗಳನ್ನು ಮೊದಲ ಹಮತದಲ್ಲಿ ಸಮಸ್ಥೆಗೆ ಹಸ್ತಾಂತರಿಸುತ್ತಿದೆ. ಇಲ್ಲಿ ಶೇ. 65 ಬೋಕ್ಸೈಟ್ ಖನಿಜಾಂಶ ಇರುವ ಬಗ್ಗೆ ಸಂಶೋಧನೆಯಿಂದ ದೃಢಪಡಿಸಲಾಗಿದೆ. ಖನಿಜ ತೆಗೆಯಲು ಉದ್ದೇಶಿಸಿದ ಪರಿಸರದಲ್ಲೇ ಕೇಂದ್ರ ರಕ್ಷಣಾ ವಿಭಾಗದ ಹಿಂದೂಸ್ಥಾನ್ ಏರೋನಾಟಿಕಲ್ ನ ಸಮಸ್ಥೆ ಕಾರ್ಯವೆಸಗುತ್ತಿದೆ.

