ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 14, 2017
ಛಾಯಾಗ್ರಾಹಕ ಸಮಾಜದ ಆಸ್ತಿ : ಸಿ.ಐ. ಮ್ಯಾಥ್ಯೂ ಎಂ.ಎ.
ಮುಳ್ಳೇರಿಯ: ಸಾರ್ವಜನಿಕ ರಂಗದಲ್ಲಿ ಇತರರ ಮುಗ್ದ ನಗುವನ್ನು ಸುಂದರವಾಗಿ ಸೆರೆಹಿಡಿಯುವ ಮೂಲಕ ತನ್ನ ಅಂತರಂಗದ ನೋವನ್ನು ಮರೆಮಾಚಿ ಇತರರನ್ನು ನಗಿಸುವ ಛಾಯಾಗ್ರಾಹಕ ಸಮಾಜದ ಆಸ್ತಿ ಎಂದು ಆದೂರು ಸಿ.ಐ.ಮ್ಯಾಥ್ಯೂ ಎಂ.ಎ. ಹೇಳಿದರು.
ಅವರು ಮಂಗಳವಾರ ಮುಳ್ಳೇರಿಯ ವ್ಯಾಪಾರ ಭವನದಲ್ಲಿ ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ಎಕೆಪಿಎ) ಕಾಸರಗೋಡು ವಲಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಒಂದು ಚಿತ್ರವನ್ನು ಯಾರೂ ಸೆರೆಹಿಡಿಯಬಹುದು. ಆದರೆ ಓರ್ವ ವೃತ್ತಿಪರ ಛಾಯಾಗ್ರಾಹಕ ತೆಗೆದ ಚಿತ್ರದಲ್ಲಿ ಆತನ ಕೌಶಲ್ಯತೆ, ಸಮಯಪ್ರಜ್ಞೆ, ನೈಪುಣ್ಯತೆ ಹಾಗೂ ಗುಣಮಟ್ಟದಿಂದ ಕೂಡಿರುತ್ತದೆ. ಸಮಾಜದಲ್ಲಿ ಉನ್ನತ ಸ್ಥಾನ ನಿಮಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಲಯ ಅಧ್ಯಕ್ಷ ವಾಸು ಎ. ವಹಿಸಿದರು. ಎ.ಕೆ.ಪಿ.ಎ. ರಾಜ್ಯ ಕಾರ್ಯಕಾರಿಣಿ ಸಮಿತಿಯ ಸದಸ್ಯರಾದ ಕೆ.ಸಿ.ಅಬ್ರಾಹಂ ಮಾತನಾಡಿ ಜಾತಿಮತ ಬೇದವಿಲ್ಲದೇ ಕಳೆದ 33 ವರ್ಷಗಳಿಂದ ಉತ್ತಮ ಸಾಮಾಜಿಕ ಹಾಗೂ ಪರಸ್ಪರ ಸಹಾಯ ಸಹಕಾರದೊಂದಿಗೆ ಉತ್ತಮ ಕಾರ್ಯಗಳಿಂದ ಸಮಾಜದಲ್ಲಿ ಗುರುತಿಸಲ್ಪಟ್ಟ ಸಂಘಟನೆಯಾಗಿದೆ. ನಿಮ್ಮೆಲ್ಲರ ಸಹಕಾರದಿಂದ ಸಂಘಟನೆಯು ಇನ್ನೂ ಹೆಚ್ಚಿನ ಸಮಾಜಮುಖಿ ಕಾರ್ಯಗಳನ್ನು ನಡೆಸುವಂತಾಗಲಿ ಎಂದರು.
ಮುಖ್ಯ ಅತಿಥಿಗಳಾಗಿ ಮೋಹನನ್, ವಾರಿಜಾಕ್ಷನ್, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಮುಳ್ಳೇರಿಯ ಘಟಕದ ಅಧ್ಯಕ್ಷ ಬಾಲಕೃಷ್ಣ ರೈ ಉಪಸ್ಥಿತರಿದ್ದು, ಶುಭಹಾರೈಸಿದರು. ಎ.ಕೆ.ಪಿ.ಎ. ಜಿಲ್ಲಾಧ್ಯಕ್ಷ ಹರೀಶ್ ಪಾಲಕ್ಕುನ್ನು, ಜಿಲ್ಲಾ ಕಾರ್ಯದಶರ್ಿ ಪ್ರಶಾಂತ ತೈಕಡಪ್ಪುರಂ, ರಾಜ್ಯ ಸಮಿತಿಯ ಸದಸ್ಯ ಸುದರ್ಶನನ್ ಟಿ.ಕೆ, ಜಿಲ್ಲಾ ಕೋಶಾಧಿಕಾರಿ ಕಲಾಧರನ್ ಪೆರಿಯ, ಎನ್.ಎ.ಭರತನ್, ಶರೀಫ್, ಸಹದೇವನ್ ಮಾಣಿಯೋಟ್, ನಿರ್ಮಲಾಕ್ಷನ್ ಟಿ, ವಿಜಯನ್ ಕೆ.ನಾಯರ್, ದಿನೇಶ್ ಇನ್ಸೈಟ್, ಸಂಜೀವ ರೆ, ಸಿಯಾದ್ ಅಬ್ದುಲ್ಲ ಮೊದಲಾದವರು ಉಪಸ್ಥಿತರಿದ್ದರು.
ಸಮ್ಮೇಳನದ ಅಂಗವಾಗಿ ಧ್ವಜಾರೋಹಣವನ್ನು ವಲಯ ಅಧ್ಯಕ್ಷ ವಾಸು ನೆರವೇರಿಸಿದರು. ಎ.ಕೆ.ಪಿ.ಎ. ವಲಯ ಕಾರ್ಯದಶರ್ಿ ಸುಕು ಸ್ಮಾಟರ್್ ಸ್ವಾಗತಿಸಿ, ಜೊತೆ ಕಾರ್ಯದಶರ್ಿ ಮೈಂದಪ್ಪ ವಂದಿಸಿದರು.
ರಾಷ್ಟ್ರೀಯ ಮಟ್ಟದ ಫೋಟೋ ಸ್ಪಧರ್ೆಯಲ್ಲಿ 2ನೇ ಸ್ಥಾನವನ್ನು ಗಳಿಸಿದ ದಿನೇಶ್ಇನ್ಸೈಟ್, ಪ್ರೆಸ್ಕ್ಲಬ್ ಅಧ್ಯಕ್ಷ ಮಹಮ್ಮದ್ ಶಾಫಿ, ಹಿರಿಯ ಸದಸ್ಯರಾದ ಗೋವಿಂದನ್ ಚೆಂಗರನ್ಕಾಡ್ ಅವರನ್ನು ಗೌರವಿಸಿ ಸ್ಮರಣಿಕೆ ನೀಡಿ ಸಮ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಪೆನ್ಸಿಲ್ ಡ್ರಾಯಿಂಗ್ ಸ್ಪಧರ್ೆಯನ್ನು ಹಮ್ಮಿಕೊಳ್ಳಲಾಗಿತ್ತು. ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.


