HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಅಂಬಾರು : ನಿಧಿ ಸಮರ್ಪಣಾ ಕಾರ್ಯಕ್ರಮ ಉಪ್ಪಳ: ದೇವರು ಕೊಟ್ಟ ಸಂಪತ್ತನ್ನು ದೇವರ ಕಾರ್ಯಕ್ಕೆ ವಿನಿಯೋಗಿಸೋಣ ಎಂದು ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ತಿಳಿಸಿದರು. ಅಂಬಾರು ಸದಾಶಿವ ದೇವಸ್ಥಾನದಲ್ಲಿ 2018 ರ ಮಾಚರ್್ 1 ರಿಂದ 5 ರ ತನಕ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಅಂಬಾರು ಸದಾಶಿವ ದೇವಸ್ಥಾನದ ಶಿವಗಂಗಾ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ನಡೆದ ನಿಧಿ ಸಮರ್ಪಣಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ದೇವರ ಕಾರ್ಯ ಅತ್ಯಂತ ಪುಣ್ಯದ ಕಾರ್ಯ. ಅಂತಹ ಕಾರ್ಯಕ್ಕೆ ಮನಸ್ಸು, ಬುದ್ಧಿಯನ್ನು ಸಮಪರ್ಿಸಬೇಕು. ಪ್ರತಿಯೊಬ್ಬರು ದೇವತಾ ಕಾರ್ಯವನ್ನು ಮಾಡಿದಾಗ ಜೀವನದಲ್ಲಿ ಧನ್ಯತೆಯನ್ನು ಕಾಣಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ಗೋಪಾಲಕ್ರಷ್ಣ ತಂತ್ರಿಗಳವರ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನರ್ಾಟಕದ ಮಾಜಿ ವಿಧಾನಪರಿಷತ್ ಸದಸ್ಯ ಮೋನಪ್ಪ ಭಂಡಾರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮುದಾಯ ಅಭಿವೃದ್ಧಿ ನಿದರ್ೆಶಕ ಜಯರಾಮ ನೆಲ್ಲಿತ್ತಾಯ, ಐಲ ಶ್ರೀ ದುಗರ್ಾಪರಮೇಶ್ವರಿ ಕ್ಷೇತ್ರದ ಆಡಳಿತ ಮೊಕ್ತೇಸರ ನಾರಾಯಣ ಹೆಗ್ಡೆ ಕೋಡಿಬೈಲು, ಅಡ್ಕ ಭಗವತೀ ಕ್ಷೇತ್ರದ ಅಧ್ಯಕ್ಷ ಎಂ. ಗೋಪಾಲ ಬಂದ್ಯೋಡು, ಬಂಟರ ಸಂಘ ಮಂಗಲ್ಪಾಡಿ ಘಟಕದ ಅಧ್ಯಕ್ಷ ಶ್ರೀಧರ ಶೆಟ್ಟಿ ಯಾಮಿನಿ ಎಸ್ಟೇಟ್ ಮುಟ್ಟ, ವಿಶ್ವಕರ್ಮ ಗಾಯತ್ರಿ ಮಂದಿರ ಪ್ರತಾಪನಗರ ಇದರ ಅಧ್ಯಕ್ಷ ಶಿವಾನಂದ ಆಚಾರ್ಯ ಪ್ರತಾಪನಗರ, ಅನಂತಪದ್ಮನಾಭ ದೇವಸ್ಥಾನ ಅನಂತಪುರ ಇದರ ಸೇವಾ ಸಮಿತಿ ಉಪಾಧ್ಯಕ್ಷ ಶಂಕರ ಪ್ರಸಾದ್, ವಿಜಯಾ ಬ್ಯಾಂಕ್ ನಿವೃತ್ತ ಹಿರಿಯ ಪ್ರಬಂಧಕ ಎನ್. ಬಾಲಕೃಷ್ಣ ರೈ ದೆಯ್ಯಂತೋಡಿ ಹೊಸಮನೆ, ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷ ರಾಮಣ್ಣ ಶೆಟ್ಟಿ ಪಂಜ ಮುಂಬಯಿ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಉದ್ಯಮಿ ಶಿವರಾಮ ಪಕಳ, ಶಶಿಧರ ಶೆಟ್ಟಿ ಮುಟ್ಟ, ಸುಶೀಲಾ ಪಿ. ಶೆಟ್ಟಿ, ಕ್ಷೇತ್ರದ ಆಡಳಿತ ಮೊಕ್ತೇಸರ ಕೊರಗಪ್ಪ ಶೆಟ್ಟಿ ಸಣ್ಣ ಹಿತ್ತಿಲು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ದೇರಂಬಳ, ಪಿ.ಟಿ.ಸುಬ್ಬಣ್ಣ ಶೆಟ್ಟಿ, ಡಾ.ಶ್ರೀಧರ ಭಟ್ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವದ ಅಂಗವಾಗಿ ನಿಧಿ ಸಮರ್ಪಣೆ ಮತ್ತು ನಿಧಿ ಘೋಷಣೆ ಕಾರ್ಯಕ್ರಮ ನಡೆಯಿತು. ವಾಸುದೇವ ಹೊಳ್ಳ ಪ್ರಾರ್ಥನೆ ಹಾಡಿದರು. ಪ್ರಧಾನ ಕಾರ್ಯದಶರ್ಿ ರಾಮಚಂದ್ರ ಸಿ. ಸ್ವಾಗತಿಸಿ, ಕೆ.ಕೆ.ಶೆಟ್ಟಿ ವಂದಿಸಿದರು. ಬಾಸ್ಕರ ಕೊಂಡೆವೂರು ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries