ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 14, 2017
ಅಂತೂ ತಿರುಗಾಟ ಹೊರಟ ಕಟೀಲು ಮೇಳ
ಮಂಗಳೂರು: ವರ್ತಮಾನದ ಸಾಮಾಜಿಕ, ಮಾನಸಿಕ ಸ್ಥತ್ಯಂತರಗಳಿಂದ ಕಲೆ, ಕಲಾವಿದ ಹೊರತಲ್ಲ ಎಂಬುದಕ್ಕೆ ಸಾಕ್ಷಿಯಾಗಿ ಕರಾವಳಿಯ ಪ್ರಸಿದ್ದ ಯಕ್ಷಗಾನ ಮೇಳವಾದ ಕಟೀಲು ಶ್ರೀದುಗರ್ಾಪರಮೇಶ್ವರಿ ಯಕ್ಷಗಾನ ಮೇಳ ಹಲವು ವಿವಾದಗಳ ಮಧ್ಯೆ ಸೋಮವಾರ ಪ್ರಸ್ತುತ ವರ್ಷದ ಸೇವಾ ತಿರುಗಾಟಕ್ಕೆ ಚಾಲನೆ ನೀಡಲಾಯಿತು.
ಆರು ತಂಡಗಳಾಗಿ ವಿಸ್ತರಿಸಿರುವ ಕಟೀಲು ಮೇಳ ಈ ವರ್ಷ ಐದು ಹಾಗೂ ನಾಲ್ಕನೇ ಮೇಳಗಳಲ್ಲಿ ಬದಲಾವಣೆಗೆ ಕೈಹಾಕಿರುವುದೇ ವಿವಾದಕ್ಕೆ ಕಾರಣ. ತತ್ಪಲವಾಗಿ ಐದನೇ ತಂಡದ ಹಲವು ಕಲಾವಿದರು ಸಾಮೂಹಿಕ ರಾಜೀನಾಮೆ ನೀಡಿದ್ದರು. ಈ ಪೈಕಿ ಮತ್ತೆ ಕೆಲವರು ಸೋಮವಾರ ರಾತ್ರಿ ಕಟೀಲಿಗೆ ಆಗಮಿಸಿ ಮತ್ತೆ ಮೇಳ ಸೇರಿಕೊಂಡರೆ ಕೆಲವರನ್ನು ಮೇಳದ ವ್ಯವಸ್ಥಾಪನಾ ಸಮಿತಿ ಮೇಳದಿಂದ ಶಾಶ್ವತವಾಗಿ ಹೊರಕಟ್ಟಿದೆ.
ಯಾರು ಹೊರಗೆ: ವಿವಾದಕ್ಕೆ ಸಂಬಂಧಿಸಿ ಅಮ್ಮುಂಜೆ ಮೋಹನ, ದಿವಾಣ ಶಿವಶಂಕರ ಭಟ್, ರಾಕೇಶ್ ರೈ ಅಡ್ಕ, ನಗ್ರಿ ಮಹಾಬಲ, ವಗೆನಾಡು, ಬೊಳಿಂಜಡ್ಕ, ಕೊಳ್ತಮಜಲು ರವರನ್ನು ಕಟೀಲು ಮೇಳದಿಂದ ಕೈಬಿಡಲಾಗಿದೆ.
ಮಾನ್ಯ 6ಕ್ಕೆ:
ಕಾಸರಗೋಡಿನ ಪ್ರಸಿದ್ದ ವೇಶಧಾರಿ ಮಾನ್ಯ ಸಂತೋಷ್ ಕುಮಾರ್ ರವರನ್ನು ಈ ಬಾರಿ ಹೊಸತಾಗಿ 6ನೇ ತಂಡಕ್ಕೆ ಸೇರಿಸಲಾಗಿದೆ. ಈ ಹಿಂದೆ ಅವರು ಎಡನೀರು ಶ್ರೀಗೋಪಾಲಕೃಷ್ಣ ಕೃಪಾಪೋಶಿತ ಯಕ್ಷಗಾನ ತಂಡದಲ್ಲಿ ಕಲಾವಿದರಾಗಿ ಸೇವೆಸಲ್ಲಿಸಿದ್ದರು.
ಶುಭಾರಂಭ:
ಸೋಮವಾರ ಸಂಜೆ ಕಟೀಲು ಶ್ರೀದೇವಿಯ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಆಸ್ರಣ್ಣರು ಪ್ರಸಾದ ನೀಡಿ ಪ್ರಾಥರ್ಿಸುವುದರೊಂದಿಗೆ ಪ್ರಸ್ತುತ ವರ್ಷದ ಮೇಳಗಳ ತಿರುಗಾಟಕ್ಕೆ ಚಾಲನೆ ದೊರಕಿತು. ಕಟೀಲು ಮೇಳಗಳ ಆರೂ ತಂಡಗಳ ಕಲಾವಿದರು ಗೆಜ್ಜೆಕಟ್ಟಿ ತಿರುಗಾಟಕ್ಕೆ ಪ್ರಾರಂಭ ನೀಡಿದರು. ಕರಾವಳಿಯಾದ್ಯಂತದ ಸಹಸ್ರ ಮಿಕ್ಕಿದ ಸಂಖ್ಯೆಯ ಕಲಾಪ್ರೇಮಿಗಳು ಸಾಕ್ಷಿಯಾದರು.





