ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 04, 2017
ಸ್ವಾಮಿ ವಿವೇಕಾನಂದ ಕೇರಳ ಸಂದರ್ಶನಕ್ಕೆ 125 ವರ್ಷ: ಸಾಕ್ಷ್ಯಚಿತ್ರ ಕ್ಕೆ ಸಜ್ಜಾಗುತ್ತಿರುವ ಮಂಜೇಶ್ವರ:
ಮಂಜೇಶ್ವರ: ಸ್ವಾಮಿ ವಿವೇಕಾನಂದರು ಕೇರಳ ಸಂದರ್ಶನ ನಡೆಸಿ 125 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಕೇರಳ ಸರಕಾರ 14 ಜಿಲ್ಲೆಗಳಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತೀಮರ್ಾನಿಸಿದೆ.
ಇದರ ಭಾಗವಾಗಿ ಕಾಸರಗೋಡು ಜಿಲ್ಲೆಯಲ್ಲಿ ನಡೆಸಬೇಕಾದ ಕಾರ್ಯಕ್ರಮಕ್ಕೆ ಗಡಿನಾಡ ಪ್ರದೇಶವಾದ ಕನ್ನಡಿಗರು ಅಧಿಕವಿರುವ ಮಂಜೇಶ್ವರವನ್ನು ಆಯ್ಕೆ ಮಾಡಲಾಗಿದೆ.
ಆ ಪ್ರಯುಕ್ತ ಡಿ.7 ರಂದು ಮಧ್ಯಾಹ್ನ 3 ಗಂಟೆಗೆ ಮಂಜೇಶ್ವರದಲ್ಲಿ ಆಯೋಜಿಸುವಂತೆ ವಿವಿಧ ರಾಜಕೀಯ ಸಾಮಾಜಿಕ ಹಾಗೂ ಸಾಂಸ್ಕೃತಿಕ ವಲಯದಲ್ಲಿರುವ ನೇತಾರರು ಸಭೆಯಲ್ಲಿ ಒಮ್ಮತದ ತೀಮರ್ಾನ ಮಾಡಲಾಗಿದೆ.
ಈ ಬಗ್ಗೆ ಹೊಸಂಗಡಿಯ ಹಿಲ್ ಸೈಡ್ ಸಭಾಂಗಣದಲ್ಲಿ ಭಾನುವಾರ ಮಂಜೇಶ್ವರ ಗ್ರಾ. ಪಂ. ಅಧ್ಯಕ್ಷ ಅಝೀಝ್ ಹಾಜಿಯವರ ನೇತೃತ್ವದಲ್ಲಿ ನಡೆದ ಸ್ವಾಗತ ಸಮಿತಿ ಸಭೆಯನ್ನು ಮಂಜೇಶ್ವರ ಬ್ಲಾಕ್ ಪಂ. ಅಧ್ಯಕ್ಷ ಎ ಕೆ ಎಂ ಅಶ್ರಫ್ ಉದ್ಘಾಟಿಸಿದರು. ಶಾಸಕ ಪಿ ಬಿ ಅಬ್ದುಲ್ ರಜಾಕ್, ಜಿಲ್ಲಾಧಿಕಾರಿ ಜೀವನ್ ಬಾಬು, ಮುಖಂಡರುಗಳಾದ ಎ.ಕೆ.ಎಂ ಅಶ್ರಫ್, ಕೆ ಆರ್ ಜಯಾನಂದ, ಹರೀಶ್ಚಂದ್ರ ಮಂಜೇಶ್ವರ, ವಿಶ್ವನಾಥ ಕುದುರು, ಬಾಲಕೃಷ್ಣ ಶೆಟ್ಟಿಗಾರ್, ಅಬ್ದುಲ್ ರಹ್ಮಾನ್ ಉದ್ಯಾವರ, ಗೋಪಾಲ ಶೆಟ್ಟಿ ಅರಿಬೈಲು ಸಹಿತ ವಿವಿಧ ರಾಜಕೀಯ ಸಾಮಾಜಿಕ ವಲಯಗಳಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಗಳನ್ನು ಸಮಿತಿಗೆ ಸೇರ್ಪಡಿಸಿ ಸ್ವಾಗತ ಸಮಿತಿಯನ್ನು ರೂಪೀಕರಿಸಲಾಯಿತು.
ನಾಟಕ, ಸಿನಿಮಾ, ನೃತ್ಯ ಸಹಿತ ಹತ್ತು ಹಲವಾರು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಸುಮಾರ 60 ಮಿಕ್ಕ ಕಲಾವಿದರನ್ನು ಪಾಲ್ಗೊಳ್ಳಿಸಿ ವಿವಿಧ ಕಾರ್ಯಕ್ರಮಗಳೊಂದಿಗೆ ಕಾರ್ಯಕ್ರಮ ನಡೆಯಲಿದೆ.





