ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 04, 2017
`ಕನ್ನಡ ಗ್ರಾಮ' ಕಾಂಕ್ರೀಟ್ ರಸ್ತೆ ಉದ್ಘಾಟನೆ
ಕಾಸರಗೋಡು: ಕಾಸರಗೋಡು ನಗರಸಭಾ ವ್ಯಾಪ್ತಿಯಲ್ಲಿರುವ ಪಾರೆಕಟ್ಟೆಯ `ಕನ್ನಡ ಗ್ರಾಮ' ಕಾಂಕ್ರೀಟ್ ರಸ್ತೆಯನ್ನು ಮಧೂರು ಗ್ರಾಮ ಪಂಚಾಯತು ಅಧ್ಯಕ್ಷೆ ಮಾಲತಿ ಸುರೇಶ್ ಅವರು ಭಾನುವಾರ ದೀಪ ಬೆಳಗಿಸಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಧೂರು ಗ್ರಾಮ ಪಂಚಾಯತು ಉಪಾಧ್ಯಕ್ಷ ದಿವಾಕರ ಆಚಾರ್ಯ, ಮಾಜಿ ಅಧ್ಯಕ್ಷ ಮಾಧವ ಮಾಸ್ಟರ್, ಕಾಸರಗೋಡು ನಗರಸಭಾ ಸದಸ್ಯ ಶಂಕರ್ ಕೆ. ಮೊದಲಾದವರು ಮಾತನಾಡಿದರು. ಕಾಸರಗೋಡು ನರಗಸಭಾ ಮಾಜಿ ಸದಸ್ಯ ಪಿ.ಭಾಸ್ಕರ ಆರ್ಎಸ್ಎಸ್ ನಗರ ಕಾರ್ಯಕಾರಿ ಸಮಿತಿ ಸದಸ್ಯ ಗೋಪಾಲ್, ಬಿಜೆಪಿ ಬೂತ್ ಸಮಿತಿ ಕೋಶಾಧಿಕಾರಿ ದಾಮೋದರ್, ಬಾಲಗೋಕುಲ ತಾಲೂಕು ಸಮಿತಿ ಸದಸ್ಯ ಪವಿತ್ರ, ಸೇವಾ ಪ್ರಮುಖ್ ರವಿ ಕೇಸರಿ, ಬಿಜೆಪಿ ಬೂತ್ ಅಧ್ಯಕ್ಷ ಜ್ಯೋತಿಷ್, ಕೆಸಿಎನ್ ಚಾನೆಲ್ ನಿದರ್ೇಶಕ ಪುರುಷೋತ್ತಮ ನಾಕ್, ಕನ್ನಡ ಜಾಗೃತಿ ಸಮಿತಿ ಅಧ್ಯಕ್ಷ ಸತ್ಯನಾರಾಯಣ ಕಾಸರಗೋಡು, ಚಂದ್ರಶೇಖರ್ ಪಾರೆಕಟ್ಟೆ, ಕುಶಲ ಪಾರೆಕಟ್ಟೆ, ಮುರಳಿ ಪಾರೆಕಟ್ಟೆ, ಜಯರಾಮ ಪಾರೆಕಟ್ಟೆ, ಕಿಶೋರ್ ಪಾರೆಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.
ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಶಿವರಾಮ ಕಾಸರಗೋಡು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕನ್ನಡ ಗ್ರಾಮಕ್ಕೆ ಸಾಗುವ ಪಾರೆಕಟ್ಟೆ ರಸ್ತೆಯನ್ನು ಮಧೂರು ಗ್ರಾಮ ಪಂಚಾಯತು ಎರಡು ಹಂತದಲ್ಲಿ ಕಾಂಕ್ರೀಟೀಕರಣಗೊಳಿಸಿದ್ದು ಸುಮಾರು 5 ಲಕ್ಷ ರೂ. ವೆಚ್ಚ ಅಂದಾಜಿಸಲಾಗಿದೆ. ರಸ್ತೆ ನಿಮರ್ಾಣಕ್ಕೆ ಹಲವಾರು ಮಂದಿ ಸ್ಥಳ ಬಿಟ್ಟುಕೊಟ್ಟಿದ್ದು ಈ ಬಗ್ಗೆ ಮಧೂರು ಗ್ರಾಮ ಪಂಚಾಯತು ಆಡಳಿತ ಸಮಿತಿಯ ಪರವಾಗಿ ಕೃತಜ್ಞತೆಯನ್ನು ಸಲ್ಲಿಸಿದೆ.





