ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 03, 2017
ಸೈನ್ಯದ ಮುಂದೆ ವಿವಿಧ ಆಯ್ಕೆಗಳಿವೆ: ಸೇನಾ ಮುಖ್ಯಸ್ಥ ಬಿಪಿನ್ ರಾವತ್
ನವದೆಹಲಿ: "2016 ರ ಸಜರ್ಿಕಲ್ ಸ್ಟ್ರೈಕ್ ಕಾಯರ್ಾಚರಣೆ ಅಂತಹಾ ಇನ್ನೂ ಅನೇಕ ಕಾಯರ್ಾಚರಣೆ ಕೈಗೊಳ್ಳಲು ಭಾರತೀಯ ಸೈನ್ಯವು ಹಲವಾರು ಆಯ್ಕೆಗಳನ್ನು ಹೊಂದಿದೆ" ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಇಂದು ಹೇಳಿದರು. ಅವರು ಪತ್ರಕರ್ತ ಮತ್ತು ಭದ್ರತಾ ವಿಶ್ಲೇಷಕ ನಿತಿನ್ ಗೋಖಲೆ ಬರೆದಿರುವ "ಸೆಕ್ಯೂರಿಂಗ್ ಇಂಡಿಯಾ ದಿ ಮೋದಿ ವೇ" ಎಂಬ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದರು.
2015 ರ ಮ್ಯಾನ್ಮಾರ್ ಕಾಯರ್ಾಚರಣೆ ಮತ್ತು 2016 ರಲ್ಲಿ ಪಾಕಿಸ್ತಾನದ ಆಕ್ರಮಿತ ಕಾಶ್ಮೀರದಲ್ಲಿನ ಸಜರ್ಿಕಲ್ ಸ್ಟ್ರೈಕ್ ಕಾಯರ್ಾಚರಣೆ ಅಂತಹ ಮತ್ತಷ್ಟು ಕಾಯರ್ಾಚರಣೆಗಳನ್ನು ಸೈನ್ಯವು ಕೈಗೆತ್ತಿಕೊಳ್ಳುವ ಸಾಮಥ್ರ್ಯ ಹೊಂದಿದೆಯೆ ಎಂದು ಗೋಖಲೆ ರಾವತ್ ಅವರನ್ನು ಪ್ರಶ್ನಿಸಿದಾಗ ರಾವತ್ ಉತ್ತರಿಸಿದರು.
"ಗಡಿರೇಖೆಯಲ್ಲಿ ಕಾಯರ್ಾಚರಣೆಯನ್ನು ನಡೆಸುವ ಹಲವಾರು ವಿಧಾನಗಳಿವೆ. ಅದೇ ರೀತಿಯ ಕಾಯರ್ಾಚರಣೆಯನ್ನು ನಾವು ಪುನರಾವತರ್ಿಸುವುದಿಲ್ಲ ಏಕೆಂದರೆ ಯಾವುದೇ ಅದು ಪುನರಾವರ್ತನೆಯಾಗಬಾರದು. ನಾವು ಅಚ್ಚರಿಯನ್ನು ನೀಡಬೇಕಾದಲ್ಲಿ, ಹೊಸದನ್ನು ನಾವು ಯೋಜಿಸಬೇಕಾಗಿದೆ" ಸೇನಾ ಮುಖ್ಯಸ್ಥರು ಹೇಳಿದ್ದಾರೆ
ಉಗ್ರರು 18 ಭಾರತೀಯ ಸೈನಿಕರನ್ನು ಕೊಂದ ನಂತರ ಗಡಿಯುದ್ದಕ್ಕೂ ಸ್ಪಷ್ಟ ಸಂದೇಶವನ್ನು ಸಾರಲು ಮಯನ್ಮಾರ್ ಕಾಯರ್ಾಚರಣೆ ಅಗತ್ಯವಾಗಿತ್ತು. ರಾವತ್ ನುಡಿದರು.
ನಿಯೋಜಿತ ಜೂನಿಯರ್ ಅಧಿಕಾರಿಗಳ ಕೇಡರ್ ಗಳ ಬಗೆಗೆ ಹೇಳಿದ ರಾವತ್ ಈಗ ಅವರಿಗೆ ಸೇನೆಯನ್ನು ಸೇರಲು ಅನುಮೋದಿಸಲಾಗಿದೆ ಮತ್ತು ಜನವರಿ 1, 2018 ಅವರು ಸೇನೆಯ ಭಾಗವಾಗಲಿದ್ದಾರೆ ಎಂದರು





