ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 03, 2017
3ನೇ ಟೆಸ್ಟ್ ಪಂದ್ಯ: ಲಂಕಾ ವಿರುದ್ಧ ಮೊದಲ ದಿನದಾಟಕ್ಕೆ ಭಾರತ 371/4
ಮುರಳಿ ವಿಜಯ್ 155, ವಿರಾಟ್ ಕೊಹ್ಲಿ ಅಜೇಯ 156 ರನ್ ಸಿಡಿಸಿದ್ದಾರೆ
ನವದೆಹಲಿ: ಪ್ರವಾಸಿ ಶ್ರೀಲಂಕಾ ವಿರುದ್ಧದ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 4 ವಿಕೆಟ್ ನಷ್ಟಕ್ಕೆ 371 ರನ್ ಪೇರಿಸಿದೆ.
ಫಿರೋಜ್ ಶಾ ಕೊಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಮೊದಲ ದಿನದ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 371 ರನ್ ಪೇರಿಸಿದೆ. ಆರಂಭಿಕರಾಗಿ ಕಣಕ್ಕಿಳಿದ ಶಿಖರ್ ಧವನ್ 23 ಹಾಗೂ ಚೇತೇಶ್ವರ ಪೂಜಾರ ಸಹ 23 ರನ್ ಗಳಿಗೆ ಔಟ್ ಆದರು ನಂತರ ಒಂದಾದ ಮುರಳಿ ವಿಜಯ್ ಜೋಡಿ 283 ರನ್ ಜತೆಯಾಟ ನೀಡಿದ್ದು ಟೀಂ ಇಂಡಿಯಾ ಬೃಹತ್ ರನ್ ಕಲೆ ಹಾಕಲು ಸಾಧ್ಯವಾಯಿತು.
ಮುರಳಿ ವಿಜಯ್ ಭರ್ಜರಿ 155 ರನ್ ಸಿಡಿಸಿ ಔಟಾದರೆ ಅಂಜಿಕ್ಯ ರಹಾನೆ 1 ರನ್ ಗಳಿಸಿ ಪೆವಿಲಿಯನ್ ಸೇರಿದರು. ಸದ್ಯ 156 ರನ್ ಗಳಿಸಿರುವ ವಿರಾಟ್ ಕೊಹ್ಲಿ ಹಾಗೂ 6 ರನ್ ಗಳಿಸಿರುವ ರೋಹಿತ್ ಶಮರ್ಾ ಎರಡನೇ ದಿನದಾಟವನ್ನು ಪ್ರಾರಂಭಿಸಲಿದ್ದಾರೆ.
ಶ್ರೀಲಂಕಾ ಪರ ಸಂದಕನ್ 2, ಪೆರೇರಾ ಹಾಗೂ ಘಮಗೆ ತಲಾ 1 ವಿಕೆಟ್ ಪಡೆದಿದ್ದಾರೆ.ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಈ ಪಂದ್ಯ ಗೆದ್ದರೂ, ಡ್ರಾ ಆದರೂ ಟೀಂ ಇಂಡಿಯಾಗೆ ಸರಣಿ ಕೈವಶವಾಗಲಿದೆ.





