ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 07, 2017
ಉಡುಪಿಗೆ ಶ್ರೀಶ್ರೀ ಭೇಟಿ; ಪೇಜಾವರಶ್ರೀಗಳ ಜತೆ 30ನಿಮಿಷ ಮಾತುಕತೆ
ಉಡುಪಿ: ಇತ್ತೀಚೆಗಷ್ಟೇ ಉಡುಪಿಯಲ್ಲಿ ನಡೆದಿದ್ದ ಧರ್ಮ ಸಂಸದ್ ನಿಂದ ದೂರ ಉಳಿದಿದ್ದ ಆಟರ್್ ಆಫ್ ಲಿವಿಂಗ್ ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಬುಧವಾರ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ಪೇಜಾವರಶ್ರೀಗಳ ಜತೆ ಸುಮಾರು ಅರ್ಧ ಗಂಟೆಗಳ ಕಾಲ ಮಾತುಕತೆ ನಡೆಸಿದರು.
ಶ್ರೀಕೃಷ್ಣ ಮಠದಲ್ಲಿ ರವಿಶಂಕರ್ ಗುರೂಜಿ ಅವರು ಪೇಜಾವರಶ್ರೀಗಳನ್ನು ಭೇಟಿಯಾಗಿ ರಾಮಮಂದಿರ ನಿಮರ್ಾಣದ ಬಗ್ಗೆ ಚಚರ್ೆ ನಡೆಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಆದರೆ ಚಚರ್ೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಪೇಜಾವರಶ್ರೀಗಳು, ಮಾತುಕತೆ ವಿವರ ಹೇಳಲ್ಲ ಎಂದರು. ರವಿಶಂಕರ ಗುರೂಜಿಗೆ ಧರ್ಮ ಸಂಸದ್ ವಿರೋಧಿಸಿಲ್ಲ. ಅಯೋಧ್ಯೆ ವಿವಾದ ನ್ಯಾಯಾಲಯಗಳ ಹೊರಗೆ ತೀಮರ್ಾನವಾಗಲಿ ಎಂಬುದೇ ಎಲ್ಲರ ಆಶಯ ಎಂದು ಹೇಳಿದರು.





