ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 07, 2017
25 ವರ್ಷಗಳ ಬಾಬ್ರಿ ಮಸೀದಿ ವಿವಾದ-ಏನಾಗುತ್ತಿದೆ.
ದೆಹಲಿ: ಬಾಬ್ರಿ ಮಸೀದಿ ಧ್ವಂಸ ನಡೆದು ಸುಮಾರು 25 ವರ್ಷಗಳು ಕಳೆದಿದೆ. ಉತ್ತರ ಪ್ರದೇಶದ ಅಯೋಧ್ಯಾ ನಗರದಲ್ಲಿ ಹಿಂದೂ ಪರ ಸಂಘಟನೆಗಳು ಅಂದು ನಡೆಸಿದ ಕೃತ್ಯ, ಕರಸೇವಕರ ಪಾಲಿಗೆ ಶೌರ್ಯ ದಿವಸವಾಗಿದ್ದರೆ, ಮುಸ್ಲಿಂ ಸಂಘಟನೆಗಳಿಗೆ ಕಪ್ಪು ದಿನವಾಗಿದೆ. 1885ರಿಂದ ಮೊದಲುಗೊಂಡು ಆರಂಭವಾದ ರಾಮಜನ್ಮಭೂಮಿ, ಬಾಬ್ರಿ ಮಸೀದಿ ವಿವಾದ ಇಂದಿನ ತನಕ ಪರಿಹಾರ ಕಾಣದಂತೆ ನಡೆದುಕೊಂಡು ಬಂದಿದೆ. ಪರಸ್ಪರ ಮಾತುಕತೆ ಮೂಲಕ ಸಮಸ್ಯೆಗೆ ಇತ್ಯರ್ಥ ಹಾಡಿ ಎಂದು ಸುಪ್ರೀಂಕೋಟರ್್ ಇತ್ತೀಚೆಗೆ ಸೂಚಿಸಿದೆ. ಆದರೆ, ಕೇಸ್ ಮತ್ತೆ ಮತ್ತೆ ಬೇರೆ ಬೇರೆ ರೂಪದಲ್ಲಿ ಹಲವರನ್ನು ಕಾಡುತ್ತಿದೆ. [ಬಾಬ್ರಿ ಮಸೀದಿ ಧ್ವಂಸ ಕೇಸ್: ಅಡ್ವಾಣಿ ವಿರುದ್ಧ ವಿಚಾರಣೆಗೆ ಅಸ್ತು] ಈ ಒಂದು ಘಟನೆ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಸೇರಿದಂತೆ 13 ಜನ ಬಿಜೆಪಿ ನಾಯಕರನ್ನು ಇಂದಿಗೂ ಕಾಡುತ್ತಿದೆ.
ರಾಮಾಯಣ ಕಾಲದ ಅಯೋಧ್ಯದಲ್ಲಿದ್ದ ಬಾಬ್ರಿ ಮಸೀದಿಯ ಹುಟ್ಟು ಹಾಗೂ ಅವನತಿಯ ತನಕ ಕಾಲಾನುಕ್ರಮ ಪಟ್ಟಿ, ಈ ಕೇಸಿಗೆ ಸಂಬಂಧಿಸಿದಂತೆ ಪ್ರಮುಖ ಘಟನಾವಳಿಗಳ ವಿವರ ಮುಂದಿದೆ. ಮೊದಲ ಬಾರಿಗೆ ಕೋಮು ಗಲಭೆ 1528: ಹಿಂದೂಗಳ ಆರಾಧ್ಯ ದೈವ ಶ್ರೀರಾಮಚಂದ್ರ ಹುಟ್ಟಿದ ಸ್ಥಳದಲ್ಲಿ ಮಸೀದಿ ನಿಮರ್ಾಣ. 1853: ಅಯೋಧ್ಯೆದಲ್ಲಿ ಮೊಟ್ಟ ಮೊದಲ ಬಾರಿಗೆ ಕೋಮು ಗಲಭೆ ಘಟನೆ ದಾಖಲಾಗಿದೆ. 1859: ವಿವಾದಿತ ಪ್ರದೇಶಕ್ಕೆ ಬೇಲಿ ಹಾಕಿದ ಬ್ರಿಟಿಷ್ ಆಡಳಿತ. ಒಳಾಂಗಣ ಭಾಗ ಮುಸ್ಲಿಮರಿಗೆ ಹಾಗೂ ಹೊರಾಂಗಣ ಭಾಗ ಹಿಂದೂಗಳಿಗೆ ಎಂದು ಹಂಚಿಕೆ. 1885: ಹಿಂದೂಗಳಿಗೆ ಹಂಚಿಕೆಯಾಗಿದ್ದ ಹೊರಾಂಗಣ ಭಾಗದಲ್ಲಿ ರಾಮ ಮಂದಿರ ನಿಮರ್ಿಸಲು ಮಹಂತ ರಘುವೀರ್ ದಾಸ್ ರಿಂದ ನಿರಾಕರಣೆ. 1949: ಮಸೀದಿಯೊಳಗೆ ಶ್ರೀರಾಮನ ಪ್ರತಿಮೆ ಕಾಣಿಸಿಕೊಂಡು ಎಲ್ಲರ ಹುಬ್ಬೇರಿಸಿತ್ತು. ಹಿಂದೂಗಳು ತಂದಿಟ್ಟಿದ್ದಾರೆ ಎಂದು ಮುಸ್ಲಿಮರಿಂದ ದೂರು. ಪ್ರಕರಣ ಕೋಟರ್್ ಮೆಟ್ಟಿಲೇರುತ್ತಿದ್ದಂತೆ ಎಚ್ಚೆತ್ತುಕೊಂಡ ಸಕರ್ಾರ ಗೇಟ್ ಬೀಗ ಹಾಕಿ ಜಡೆಯಿತು. ಶ್ರೀರಾಮ ಜನ್ಮಭೂಮಿ ವಿಮೋಚನೆ 1950-61 : ರಾಮ್ ಲಲ್ಲಾ ಪೂಜೆಗೆ ಅನುವು ಮಾಡಿಕೊಡುವಂತೆ ಕೋರಿ ನಾಲ್ಕು ಪ್ರತ್ಯೇಕ ಅಜರ್ಿ, ವಿವಾದಿತ ಸ್ಥಳದಲ್ಲಿ ಮಂದಿರ ನಿಮರ್ಾಣಕ್ಕೆ ಅನುವು ಕೋರಿ ಅಜರ್ಿ. 1984: ಶ್ರೀರಾಮ ಜನ್ಮಭೂಮಿ ವಿಮೋಚನೆಗಾಗಿ ಹಿಂದೂ ಸಮಿತಿ ಅಸ್ತಿತ್ವಕ್ಕೆ, ಮಂದಿರ ನಿಮರ್ಾಣದ ಗುರಿ. ವಿಶ್ವ ಹಿಂದೂ ಪರಿಷತ್ ಹಾಗೂ ಎಲ್ ಕೆ ಅಡ್ವಾಣಿ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷದಿಂದ ಅಭಿಯಾನ. 1986: ಮಸೀದಿ ಬಾಗಿಲು ತೆರೆವುಗೊಳಿಸಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ನ್ಯಾಯಾಲಯದ ತೀಪರ್ು. ಪ್ರತಿಭಟನೆಗಾಗಿ ಮುಸ್ಲಿಮರಿಂದ ಬಾಬ್ರಿ ಮಸೀದಿ ಕಾರ್ಯಕಾರಿ ಸಮಿತಿ ಸ್ಥಾಪನೆ. ಡಿಸೆಂಬರ್ 06, 1992 1989: ವಿಎಚ್ ಪಿ ಅಭಿಯಾನ ಶುರು, ವಿವಾದಿತ ಮಸೀದಿ ಜಾಗದ ಪಕ್ಕ ರಾಮ ಮಂದಿರಕ್ಕಾಗಿ ಶಂಕುಸ್ಥಾಪನೆ. ನಾಲ್ಕು ಅಜರ್ಿಗಳ ವಿಚಾರಣೆ ಅಲಹಾಬಾದ್ ಹೈಕೋಟರ್ಿಗೆ ವರ್ಗ 1990: ವಿಎಚ್ ಪಿ ಕಾರ್ಯಕರ್ತರಿಂದ ಮಸೀದಿಯ ಪಾಶ್ರ್ವ ಭಾಗ ಧ್ವಂಸ. ಸಮಸ್ಯೆ ಬಗೆಹರಿಸಲು ಪ್ರಧಾನಿ ಚಂದ್ರಶೇಖರ್ ರಿಂದ ವಿಫಲ ಯತ್ನ. 1991: ಆಯೋಧ್ಯೆ ಇರುವ ಉತ್ತರಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ. ಡಿಸೆಂಬರ್ 06, 1992: ವಿಎಚ್ ಪಿ, ಶಿವ ಸೇನೆ, ಬಿಜೆಪಿ ಕರಸೇವಕರಿಂದ ಮಸೀದಿ ಧ್ವಂಸ. ರಾಷ್ಟ್ರವ್ಯಾಪಿ ಹಿಂದೂ -ಮುಸ್ಲಿಂ ಕೋಮು ಗಲಭೆಗೆ ನಾಂದಿ. 2,000ಕ್ಕೂ ಅಧಿಕ ಮಂದಿ ಮರಣ. ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಲ್ಲೂ ಹಿಂಸಾಚಾರ ಹಬ್ಬಿತು. ಪಕ್ಕದ ದೇಶಗಳಲ್ಲಿ ಹಿಂದೂ ದೇಗುಲಗಳು ಧ್ವಂಸ. ಅಲ್ಲಿಂದ ಮುಂದಕ್ಕೆ ಆ ದೇಶಗಳಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳು ಭಯದಿಂದ, ಅನಾದಾರ ಧೋರಣೆಗೆ ಒಳಪಡಬೇಕಾಯಿತು. ಚಾಜರ್್ ಶೀಟ್ ಹಾಕಿದ ಸಿಬಿಐ 1993 : ಹಿಂದೂಗಳಿಗೆ ಮಂಜೂರಾಗಿದ್ದ ಹೊರಾಂಗಣ ಪ್ರದೇಶ (67 ಎಕರೆ) ವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಉತ್ತರಪ್ರದೇಶ ಸಕರ್ಾರ. ಬಾಬ್ರಿ ಮಸೀದಿ ನಿಮರ್ಾಣಕ್ಕೂ ಮುನ್ನ ಅಲ್ಲಿ ಹಿಂದೂ ಪೂಜಾ ಮಂದಿರವಿತ್ತೇ ಎಂಬುದರ ಬಗ್ಗೆ ಸುಪ್ರೀಂಕೋಟರ್್ ಅಭಿಪ್ರಾಯ ಕೇಳಿದ ಸಕರ್ಾರ. ಅಕ್ಟೋಬರ್ 1993: ಎಲ್ ಕೆ ಅಡ್ವಾಣಿ ಹಾಗೂ 13 ಮಂದಿಗಳ ಮೇಲೆ ಬಾಬ್ರಿ ಮಸೀದಿ ಕೆಡವಲು ಸಂಚು ರೂಪಿಸಿದ ಆರೋಪ ಹೊರೆಸಿ ಚಾಜರ್್ ಶೀಟ್ ಹಾಕಿದ ಸಿಬಿಐ. 1994: ಅಲಹಾಬಾದ್ ಹೈಕೋಟರ್ಿನ ಲಕ್ನೋ ವಿಭಾಗೀಯ ಪೀಠದಲ್ಲಿ ನಿರಂತರವಾಗಿ ಪ್ರಕರಣದ ವಿಚಾರಣೆ. 1998: ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೆ ಬಂದಿತು. ಚಾಜರ್್ ಶೀಟ್ ರದ್ದು 2001: ವಿಎಚ್ ಪಿ ಯಿಂದ ಮತ್ತೆ ರಾಮಜನ್ಮಭೂಮಿಯಲ್ಲಿ ಮಂದಿರ ಸ್ಥಾಪನೆ ಸಂಕಲ್ಪ. ಮಸೀದಿ ಧ್ವಂಸ ವಾಷರ್ಿಕ ದಿನ ಹಲವೆಡೆ ಗಲಭೆ, ಹಿಂಸಾಚಾರ. ಮೇ 4, 2001: ಎಲ್ ಕೆ ಅಡ್ವಾಣಿ, ಕಲ್ಯಾಣ್ ಸಿಂಗ್ ಸೇರಿದಂತೆ 13 ಮುಖಂಡರ ಮೇಲಿದ್ದ ಚಾಜರ್್ ಶೀಟ್ ರದ್ದುಗೊಳಿಸಿದ ವಿಶೇಷ ನ್ಯಾ. ಎಸ್ .ಕೆ ಶುಕ್ಲಾ. ಕ್ರೈಂ 197 (ಮಸೀದಿ ಧ್ವಂಸ) ಹಾಗೂ 198(ಕ್ರಿಮಿನಲ್ ಪಿತೂರಿ) ಎರಡನ್ನು ಪ್ರತ್ಯೇಕಿಸಿ ಆದೇಶ. ಜನವರಿ 2002 : ಹಿಂದೂ -ಮುಸ್ಲಿಂ ನಾಯಕರ ಜತೆ ಮಾತುಕತೆ ನಡೆಸಲು ವಾಜಪೇಯಿ ಅವರಿಂದ ತಮ್ಮ ಕಚೇರಿಯಲ್ಲಿ ಪ್ರತ್ಯೇಕ ಕೇಂದ್ರ ಸ್ಥಾಪನೆ. ಗೋಧ್ರದಲ್ಲಿ ಹಿಂಸಾಚಾರ ಫೆಬ್ರವರಿ 2002 : ಉತ್ತರಪ್ರದೇಶ ಅಸೆಂಬ್ಲಿ ಚುನಾವಣೆ ಪ್ರಣಾಳಿಕೆಯಲ್ಲಿ ರಾಮಮಂದಿರ ನಿಮರ್ಾಣ ಸೇರ್ಪಡೆ. ನಿಮರ್ಾಣಕ್ಕೆ ಮಾ.15 ಗಡುವು. ಅಯೋಧ್ಯೆಯಿಂದ ರೈಲಿನ ಮೂಲಕ ಹಿಂತಿರುಗುತ್ತಿದ್ದ ಹಿಂದೂ ಕಾರ್ಯಕರ್ತರ ಪೈಕಿ ಸುಮಾರು 58 ಜನರ ಹತ್ಯೆ. ಗೋಧ್ರದಲ್ಲಿನ ಘಟನೆಯಿಂದ ಹಿಂಸಾಚಾರಕ್ಕೆ ನಾಂದಿ. ಮಾಚರ್್ 2002 : 1000 ರಿಂದ 2000 ಜನ ಬಹುತೇಕ ಮುಸ್ಲಿಮರು ಗೋಧ್ರೋತ್ತರ ಹಿಂಸಾಚಾರದಲ್ಲಿ ರೈಲು ದಾಳಿಯಲ್ಲಿ ಹತ್ಯೆ. ಏಪ್ರಿಲ್ 2002: ಮೂವರು ಹೈಕೋಟರ್್ ಜಡ್ಜ್ ಗಳಿದ್ದ ಪೀಠದಿಂದ ವಿವಾದಿತ ಧಾಮರ್ಿಕ ತಾಣ ವಿಚಾರಣೆ. ಜನವರಿ 2003: ವಿವಾದಿತ ತಾಣ ಶ್ರೀರಾಮನ ಜನ್ಮಸ್ಥಳವೇ ಎಂಬುದನ್ನು ಪರಿಶೀಲಿಸಲು ಭೂ ಗರ್ಭ ಶಾಸ್ತ್ರಜ್ಞರಿಂದ ಸಮೀಕ್ಷೆ ಶುರು. ರಾಮಮಂದಿರ ನಿಮರ್ಾಣಕ್ಕೆ ಬಿಜೆಪಿ ಆಗಸ್ಟ್ 2003: ಶ್ರೀರಾಮನ ಜನ್ಮಸ್ಥಳ ಇದೇ ಎನ್ನುವುದಕ್ಕೆ ಮಸೀದಿ ಕೆಳಗೆ ಕುರುಹುಗಳಿವೆ ಎಂದು ಸಮೀಕ್ಷೆ ಹೇಳಿಕೆ. ಇದನ್ನು ಅಲ್ಲಗೆಳೆದ ಮುಸ್ಲಿಮರು. ಹಿಂದೂ ಕಾರ್ಯಕರ್ತ ರಾಮಚಂದ್ರ ದಾಸ್ ಪರಮಹಂಸ ಕೊನೆ ಆಸೆಯಂತೆ ಮಂದಿರ ನಿಮರ್ಾಣ ಎಂದು ವಾಜಪೇಯಿ ಹೇಳಿಕೆ. ಆದರೆ, ನ್ಯಾಯಾಲಯದ ತೀಪರ್ಿನಿಂದ ಸಮಸ್ಯೆ ಪರಿಹಾರದ ನಿರೀಕ್ಷೆ. ಸೆಪ್ಟೆಂಬರ್ 2003: ಏಳು ಹಿಂದೂ ನಾಯಕರ ವಿರುದ್ಧ ವಿಚಾರಣೆಗೆ ಕೋಟರ್್ ಆದೇಶ. ಆದರೆ, 1992ರಲ್ಲಿ ಘಟನಾ ಸ್ಥಳದಲ್ಲಿದ್ದ ಉಪ ಪ್ರಧಾನಿ ಎಲ್ ಕೆ ಅಡ್ವಾಣಿ ವಿರುದ್ಧ ಆರೋಪ ಕೇಳಿ ಬರಲಿಲ್ಲ. ಅಕ್ಟೋಬರ್ 2004: ಆಯೋಧ್ಯೆಯಲ್ಲಿ ರಾಮಮಂದಿರ ನಿಮರ್ಾಣಕ್ಕೆ ಬಿಜೆಪಿ ಬದ್ಧ ಎಂದು ಅಡ್ವಾಣಿ ಹೇಳಿಕೆ. ಲೆಬ್ರಹಾನ್ ಸಮಿತಿ ವರದಿ ನವೆಂಬರ್ 2004 : ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಅಡ್ವಾಣಿ ಕೈವಾಡ ಇಲ್ಲ ಎಂಬ ಈ ಹಿಂದಿನ ತೀಪರ್ು ಮರು ಪರಿಶೀಲನೆ ಅಜರ್ಿಯನ್ನು ಸ್ವೀಕರಿಸಿದ ಉತ್ತರ ಪ್ರದೇಶದ ಕೋಟರ್್. ಜುಲೈ 2005: ಶಂಕಿತ ಮುಸ್ಲಿಂ ಉಗ್ರರಿಂದ ವಿವಾದಿತ ತಾಣದ ಮೇಲೆ ದಾಳಿ. ಜೀಪ್ ಬಳಸಿದ್ದ ಉಗ್ರರು ಗೋಡೆಯಲ್ಲಿ ರಂಧ್ರ ಕೊರೆದಿದ್ದರು. ಭದ್ರತಾ ಪಡೆಯಿಂದ ಐವರ ಹತ್ಯೆ. ಆರನೇ ವ್ಯಕ್ತಿ ಗುರುತು ಪತ್ತೆಯಾಗಲಿಲ್ಲ. ಜೂನ್ 2009: ಸುಮಾರು 17 ವರ್ಷಗಳ ನಂತರ ಲೆಬ್ರಹಾನ್ ಸಮಿತಿಯಿಂದ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ತನಿಖಾ ವರದಿ ಸಲ್ಲಿಕೆ. ನವೆಂಬರ್ 2009: ಮಸೀದಿ ಧ್ವಂಸ ಪ್ರಕರಣದಲ್ಲಿ ಹಿಂದೂ ಧರ್ಮ ಪಾಲಕ ಬಿಜೆಪಿ ನಾಯಕರ ಕೈವಾಡವಿದೆ ಎಂದ ಲೆಬ್ರಹಾನ್ ಸಮಿತಿ ವರದಿ ಬಗ್ಗೆ ಸಂಸತ್ತಿನಲ್ಲಿ ಭಾರಿ ಗದ್ದಲ. ಮೊಹಮ್ಮದ್ ಫರೂಕ್ ನಿಧನ ಸೆಪ್ಟೆಂಬರ್ 2010 : ವಿವಾದಿತ ತಾಣ ಹಂಚಿಕೆ ಮಾಡಿಕೊಳ್ಳುವಂತೆ ಅಲಹಾಬಾದ್ ಹೈಕೋಟರ್್ ತೀಪರ್ು. ತಲಾ ಮೂರನೇ ಒಂದು ಭಾಗ ಮುಸ್ಲಿಂ ಸಮುದಾಯ, ಹಿಂದೂಗಳಿಗೆ ಹಂಚಿಕೆ. ನಿಮರ್ೋಹಿ ಅಖಾರಕ್ಕೆ ಮುಖ್ಯ ವಿವಾದಿತ ಭಾಗ ಎಂದು ತೀಪರ್ು. ಮೇ 2011: 2010ರ ಹೈಕೋಟರ್್ ತೀಪರ್ಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದ ಹಿಂದೂ ಹಾಗೂ ಮುಸ್ಲಿಂ ಸಮುದಾಯ. ಹೈಕೋಟರ್್ ತೀಪರ್ು ರದ್ದುಗೊಳಿಸಿದ ಸುಪ್ರೀಂಕೋಟರ್್. ಡಿಸೆಂಬರ್ 25, 2014: 1949ರಲ್ಲಿ ಕೇಸು ಹಾಕಿದ್ದ ಏಳು ಮಂದಿ ಅಯೋಧ್ಯಾ ನಿವಾಸಿಗಳ ಪೈಕಿ ಹಿರಿಯರಾದ ಅಜರ್ಿದಾರ ಮೊಹಮ್ಮದ್ ಫರೂಕ್ ನಿಧನ. ಅಡ್ವಾಣಿ ವಿರುದ್ಧ ವಿಚಾರಣೆ ಮಾಚರ್್ 6, 2017: ಕೈಂ 197 ಹಾಗೂ 198 ಜಂಟಿಯಾಗಿ ಪರಿಗಣಿಸಿ ಸಂಚು ರೂಪಿಸಿದ್ದರ ಬಗ್ಗೆ ಸಿಬಿಐ ಸಲ್ಲಿಸಿದ್ದ ಪುನರ್ ಪರಿಶೀಲನೆ ಅಜರ್ಿ ಕೈಗೆತ್ತಿಕೊಂಡ ಸುಪ್ರೀಂಕೋಟರ್್. ಮಾಚರ್್ 22, 2017: ಎರಡು ಪಾಟರ್ಿಗಳು ಮಾತುಕತೆ ಮೂಲಕ ಕೋಟರ್್ ಹೊರಗಡೆ ಸಮಸ್ಯೆ ಬಗೆಹರಿಸಿಕೊಳ್ಳುವುದಾದರೆ ಮಧ್ಯಸ್ಥರನ್ನು ನೇಮಿಸಲು ಸಿದ್ಧ ಎಂದ ಸುಪ್ರೀಂಕೋಟರ್್. ಏಪ್ರಿಲ್ 19, 2017: ಎಲ್ ಕೆ ಅಡ್ವಾಣಿ ಸೇರಿದಂತೆ 13 ಜನ ಆರೋಪಿಗಳ ಮೇಲಿನ ಆರೋಪ ಪಟ್ಟಿ ರದ್ದು ಮಾಡದಂತೆ ಸಿಬಿಐ ಕೋರಿದ್ದ ಅಜರ್ಿಗೆ ಪುರಸ್ಕಾರ. ಕಲ್ಯಾಣ್ ಸಿಂಗ್ ಹೊರತುಪಡಿಸಿ ಉಳಿದವರ ಮೇಲೆ ವಿಚಾರಣೆ ನಡೆಸಲು ಆದೇಶ. ಚಿತ್ರದಲ್ಲಿ: ಧರ್ಮದಾಸ್, ಸ್ವಾಮಿ ಹರ್ ದಯಾಳ್ ಶಾಸ್ತ್ರಿ, ಅಜರ್ಿದಾರ ಹಶೀಂ ಅನ್ಸಾರಿ ಅವರು 22ನೇ ವಾಷರ್ಿಕೋತ್ಸವದಲ್ಲಿ ಸಿಹಿ ಹಂಚಿಕೆ. ಮೇ 30, 2017: ಲಕ್ನೋದ ಸಿಬಿಐ ವಿಶೇಷ ನ್ಯಾಯಾಲಯ ಎಲ್.ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಉಮಾ ಭಾರತಿ ಸೇರಿ 12 ಜನರ ವಿರುದ್ಧ ಕ್ರಿಮಿನಲ್ ಸಂಚಿನ ಪ್ರಕರಣವನ್ನು ಸಿಬಿಐ ವಿಶೇಷ ನ್ಯಾಯಾಲಯ ದಾಖಲು ಮಾಡಿಕೊಂಡಿದೆ. ಇದೀಗ ಇವರ ವಿರುದ್ಧ ವಿಚಾರಣೆ ಆರಂಭವಾಗಲಿದೆ. ಡಿಸೆಂಬರ್ 05, 2017:2010ರಲ್ಲಿ ವಿವಾದದ ಸಂಬಂಧ ಅಲಹಾಬಾದ್ ಹೈಕೋಟರ್್ ನೀಡಿದ್ದ ತೀಪರ್ು ಪ್ರಶ್ನಿಸಿ ಸಲ್ಲಿಕೆಯಾಗಿರುವ 13 ಅಜರ್ಿಗಳ ವಿಚಾರಣೆಯನ್ನು ಕೈಗೆತ್ತಿಕೊಂಡ ಸುಪ್ರೀಂಕೋಟರ್ಿನ ತ್ರಿಸದಸ್ಯ ಪೀಠ. ಸುನ್ನಿ ಮುಸ್ಲಿಮರಿಂದ ಹೆಚ್ಚಿನ ಕಾಲಾವಕಾಶ ಕೋರಿಕೆ, ಮುಂದಿನ ವಿಚಾರಣೆ ಫೆಬ್ರವರಿ 08, 2018ಕ್ಕೆ ಮುಂದೂಡಿಕೆ.









