ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 01, 2017
`ಒಖಿ' ಚಂಡಮಾರುತ : ಕಾಸರಗೋಡಿನಲ್ಲಿ ಮಳೆ
ಕಾಸರಗೋಡು: ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ `ಒಖಿ' ಚಂಡಮಾರುತ ಅಬ್ಬರ ಕಾಸರಗೋಡಿಗೆ ತಟ್ಟಿದ್ದು ಶುಕ್ರವಾರ ಸಂಜೆ ಮಳೆಯಾಗಿದೆ.
ಕೇರಳದ ದಕ್ಷಿಣ ಭಾಗಗಳಲ್ಲಿ ವರುಣನ ಅಬ್ಬರ ಹೆಚ್ಚಿರುವಂತೆ ಉತ್ತರದ ಕಾಸರಗೋಡಿನಲ್ಲಿ ಗುಡುಗು ಸಹಿತ ಮಳೆಯಾಯಿತು. ಕಾಂಞಂಗಾಡ್, ಚಿತ್ತಾರಿ, ಕೀಕಾನ, ಪಳ್ಳಿಕೆರೆ, ಬೇಕಲ, ಮಾಣಿಕೋತ್, ಕುಂಬಳೆ ಮೊದಲಾದ ಪ್ರದೇಶಗಳಲ್ಲಿ ಸಾಮಾನ್ಯ ಮಳೆಯಾಗಿದೆ.
ಮುಂದಿನ 24 ಗಂಟೆಗಳೊಳಗೆ ತೀವ್ರ ಗಾಳಿಬೀಸುವ ಹಾಗು ಮಳೆಯಾಗುವ ಸಾಧ್ಯತೆಯಿದ್ದು, ಮೀನು ಕಾಮರ್ಿಕರು ಯಾವುದೇ ಕಾರಣಕ್ಕೂ ಸಮುದ್ರಕ್ಕಿಳಿಯದಂತೆ ಜಿಲ್ಲಾಧಿಕಾರಿ ಜೀವನ್ಬಾಬು ಮುನ್ನೆಚ್ಚರಿಕೆ ನೀಡಿದ್ದಾರೆ.




