ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 01, 2017
ಅನಂತಪುರದಲ್ಲಿ ಶ್ರೀಮದ್ಭಾಗವತ ಸಪ್ತಾಹ ಆರಂಭ
ಕುಂಬಳೆ: ಪರಂಪರೆಯ ಪ್ರಜ್ಞೆ ಮನುಷ್ಯ ಜೀವನವನ್ನು ಉದಾತ್ತತೆಯತ್ತ ಕೊಂಡೊಯ್ಯುತ್ತದೆ. ಸಂಸ್ಕಾರ, ಭಗವಂತನ ಅರಿವು ಮತ್ತು ಸತ್ಕರ್ಮದ ಜೀವನ ಮೋಕ್ಷಕ್ಕೆ ಕಾರಣವಾಗಿ ಬದುಕನ್ನು ಸಾರ್ಥಕಗೊಳಿಸುತ್ತದೆ ಎಂದು ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಸರೋವರ ಕ್ಷೇತ್ರ ಅನಂತಪುರ ಶ್ರೀಅನಂತ ಪದ್ಮನಾಭ ಕ್ಷೇತ್ರದಲ್ಲಿ ಗುರುವಾರ ಸಂಜೆ ಆರಂಭಿಸಲಾದ ಶ್ರೀಮದ್ಭಾಗವತ ಸಪ್ತಾಹ ಯಜ್ಞವನ್ನು ದೀಪ ಪ್ರಜ್ವಲನೆಗೊಳಿಸಿ ಚಾಲನೆ ನೀಡಿ ಅವರು ಮಾತನಾಡಿದರು.
ಭಗವಾನ್ ಶ್ರೀಕೃಷ್ಣನ ತತ್ವಾದರ್ಶವನ್ನು ಅರಿಯುವ ಯತ್ನ ಇಂದಿನ ಜೀವನದ ಮಹತ್ವದ ಅಂಶವಾಗಿದ್ದು, ಗೊಂದಲದ ಬದುಕಿಗೆ ತಂಪೆರಚಲು ಸಾಧ್ಯವಿದೆ ಎಂದು ತಿಳಿಸಿದ ಅವರು, ಪ್ರತಿಯೊಬ್ಬನಲ್ಲೂ ಶ್ರೀಕೃಷ್ಣ ಪ್ರಜ್ಞೆ ಜಾಗೃತಗೊಳಿಸುವುದು ಭಾಗವತ ಯಜ್ಞದ ಲಕ್ಷ್ಯ ಎಂದು ತಿಳಿಸಿದರು.
ಉಪಸ್ಥಿತರಿದ್ದು ಮಾತನಾಡಿದ ಯಜ್ಞಾಚಾರ್ಯ ಪೆರಿಗಮನ ಶ್ರೀಧರನ್ ನಂಬೂದಿರಿ ಮಾತನಾಡಿ, ಕಲಿಯುಗದಲ್ಲಿ ಶ್ರೀಭಗವಂತನ ನಾಮೋಚ್ಚಾರಣೆ ಅತ್ಯಂತ ಪುಣ್ಯಕರ್ಮವಾಗಿದ್ದು, ಇಂದಿನ ತುತರ್ು ಜೀವನದಲ್ಲಿ ಅದಕ್ಕೊಂದಷ್ಟು ಸಮಯ ಮೀಸಲಿರಿಸುವ ಅರಿವು ನಮ್ಮಲ್ಲಿರಬೇಕು. ನೋವು, ಸಂಕಷ್ಟಗಳ ಸರಣಿಯನ್ನೇ ಉಂಡ ಭಗವಾನ್ ಶ್ರೀಕೃಷ್ಣ ಜಗತ್ತಿಗೆ ಯುಕ್ತಿ ಮತ್ತು ಭಕ್ತಿಯ ಮೂಲಕ ಸನ್ಮಂಗಳವನ್ನು ಮಾತ್ರ ಕರುಣಿಸಿದ ಮಹಾನುಭಾವಿ ಎಂದು ತಿಳಿಸಿದರು. ಅತ್ಯಂತ ಸರಳ ಭಕ್ತಿಯ ಮೂಲಕ ಸಂಪ್ರೀತಗೊಳ್ಳುವ ಶ್ರೀಕೃಷ್ಣನ ಪ್ರತಿಯೊಂದು ನಿದರ್ೇಶನಗಳೂ ವರ್ತಮಾನದ ಜಗತ್ತಿಗೂ ದಾರಿದೀಪವಾಗಿದ್ದು, ಅದನ್ನು ಮರೆತರೆ ವಿನಾಶ ಘಟಿಸುವುದು ಎಂದು ತಿಳಿಸಿದರು.
ಇನ್ನೋರ್ವ ಯಜ್ಞಾಚಾರ್ಯರಾದ ವೇದಮೂತರ್ಿ ಕೇಕಣಾಜೆ ಕೇಶವ ಭಟ್ ಮಾತನಾಡಿ, ಅಂತರಂಗದ ಬೆಳಕನ್ನು ಮರೆತು ಕ್ಷಣಿಕ ಸುಖಕ್ಕಾಗಿ ಧರ್ಮಮಾರ್ಗದಿಂದ ವಿಮುಖರಾಗುವುದು ನಿತ್ಯ ದುಃಖಕ್ಕೆ ಕಾರಣವಾಗುತ್ತದೆ. ಭಗವಾನ್ ಶ್ರೀಕೃಷ್ಣನೊಬ್ಬನೆ ಭವ ಬದುಕಿನ ಸಂಕಷ್ಟಗಳ ಸಂಕೋಲೆಗಳಿಂದ ನಮ್ಮನ್ನು ವಿಮುಕ್ತಗೊಳಿಸಿ ತನ್ನಲ್ಲಿ ವಿಲೀನಗೊಳಿಸುವ ಏಕ ಶಕ್ತಿಯಾಗಿದ್ದು, ಬದುಕು ಆ ದಿಶೆಯಲ್ಲಿ ಸಾಯುಜ್ಯದೆಡೆಗೆ ಸಾಗುವಲ್ಲಿ ಭಗವಂತನ ಪ್ರಜ್ಞೆ ಭಾಗವತ ಯಜ್ಞದ ಮೂಲಕ ಸಾಕಾರಗೊಳ್ಳಲಿ ಎಂದು ತಿಳಿಸಿದರು.
ಭಾಗವತ ಯಜ್ಞ ಸಪ್ತಾಹ ಸಮಿತಿಯ ಗೌರವಾಧ್ಯಕ್ಷ ವಸಂತ ಪೈ ಬದಿಯಡ್ಕ, ಅನಂತಪುರ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಮಾಧವ ಕಾರಂತ, ಭಾಗವತ ಯಜ್ಞ ಸಪ್ತಾಹ ಸಮಿತಿ ಅಧ್ಯಕ್ಷ ಶಂಕರ ಪ್ರಸಾದ್, ಕಾರ್ಯದಶರ್ಿ ಸುನಿಲ್ ಕುಮಾರ್, ಕ್ಷೇತ್ರದ ಆಡಳಿತ ಟ್ರಸ್ಟಿ ಎಂ.ವಿ.ಮಹಾಲಿಂಗೇಶ್ವರ ಭಟ್, ರವೀಂದ್ರ ಆಳ್ವ, ರಾಘವನ್ ನಾಯರ್, ಗೋಪಾಲ ಪೆಣರ್ೆ, ಸೇವಾ ಸಮಿತಿ ಕಾರ್ಯದಶರ್ಿ ರಾಮಚಂದ್ರ ಭಟ್ ಮದನಗುಳಿ ಹಾಗೂ ಸಮಿತಿಯ ಇತರ ಪದಾಧಿಕಾರಿಗಳು, ಭಕ್ತಜನರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಯಜ್ಞಾಚಾರ್ಯರನ್ನು ಸಕಲ ಮಯರ್ಾದೆಗಳೊಂದಿಗೆ ವೇದಘೋಷ ಸಹಿತ ಸ್ವಾಗತಿಸಲಾಯಿತು.
ಶ್ರೀಮದ್ಭಾಗವತ ಯಜ್ಞ ಪ್ರತಿನಿತ್ಯ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು, ಡಿ. 7 ರಂದು ಸಮಾರೋಪಗೊಳ್ಳಲಿದೆ.




