ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 01, 2017
ಉದ್ಯಾವರ ಸಾವಿರ ಜಮಾಅತ್ನಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ
ಮಂಜೇಶ್ವರ: ಉದ್ಯಾವರದ ಸಾವಿರ ಜಮಾಅತ್ನ ಅಧೀನದಲ್ಲಿರುವ ಹದಿಮೂರು ಮೊಹಲ್ಲಗಳು ಸಂಭ್ರಮದಿಂದ ಈದ್ ಮಿಲಾದ್ನ್ನು ಶುಕ್ರವಾರ ಆಚರಿಸಿದರು.
ಉದ್ಯಾವರ ಸಾವಿರ ಜಮಾಅತು ಮುಂಭಾಗದಿಂದ ಆರಂಭಗೊಂಡ ನೆಬಿದಿನ ರ್ಯಾಲಿ ಗೆ ಮಸೀದಿ ಅಧ್ಯಕ್ಷ ಸೂಫಿ ಹಾಜಿ ಹಾಗೂ ಕಾರ್ಯದಶರ್ಿ ಮೊಯಿದೀನ್ ಕುಂಞಿ ಹಾಜಿ, ಉಪಾಧ್ಯಕ್ಷ ಕಾದರ್ ಫಾರೂಕ್ ಮೊದಲಾದವರು ನೇತೃತ್ವ ನೀಡಿದರು.
ಈ ಸಂದರ್ಭ ಜಮಾಅತ್ನ ಅಧೀನದಲ್ಲಿರುವ ತೂಮಿನಾಡು, ಕುಂಜತ್ತೂರು, ಇಷರ್ಾದ್ ಸೇರಿದಂತೆ ಹದಿಮೂರು ಮೊಹಲ್ಲಗಳ ಮದ್ರಸ ವಿದ್ಯಾಥರ್ಿಗಳು ಹಾಗೂ ಅಧ್ಯಾಪಕರು, ಪೋಷಕರು ಉದ್ಯಾವರ ಸಾವಿರ ಜಮಾಅತ್ನ ಅಂಗಣದಲ್ಲಿ ಜಮಾಯಿಸಿ ಬಳಿಕ ಮೆರವಣಿಗೆಯನ್ನು ನಡೆಸಲಾಯಿತು.
ಉದ್ಯಾವರ ಮಸೀದಿ ಮುಂಭಾಗದಿಂದ ಹೊರಟ ಮೆರವಣಿಗೆ ಮಂಜೇಶ್ವರ ರಾಷ್ಟ್ರೀಯ ಹೆದ್ದಾರಿಯಿಂದ ಸಾಗಿ ಬಳಿಕ ಕುಂಜತ್ತೂರಿನಿಂದ ಹಿಂತಿರುಗಿ ಜಮಾಅತ್ ಅಂಗಣವನ್ನು ಸೇರಿ ಜಮಾ ನಮಾಜಿನ ಬಳಿಕ ಮೌಲೂದ್ ಪಾರಾಯಣ ನಡೆಯಿತು. ಬಳಿಕ ಆಗಮಿಸಿದವರೆಲ್ಲರಿಗೂ ಉಟೋಪಚಾರ ನೀಡಲಾಯಿತು. ಶಾಂತಿಯುತವಾಗಿ ನಡೆದ ಈದ್ ಮಿಲಾದ್ ಮೆರವಣಿಗೆಯಲ್ಲಿ ಸಹಸ್ರಾರು ಮಂದಿ ಪಾಲ್ಗೊಂಡರು. ವಾಹನ ಸಂಚಾರಕ್ಕೆ ಯವುದೇ ತೊಡಕನ್ನು ಉಂಟುಮಾಡದೆ ಸಾಗಿದ ಮೆರವಣಿಗೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.





