ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 01, 2017
ಕಲ್ಲಕಟ್ಟದಲ್ಲಿ ಕನ್ನಡ ಸ್ವರ
ಬದಿಯಡ್ಕ: ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ನಾಡು ನುಡಿಯ ಬಗ್ಗೆ ಅರಿವು ಮೂಡಿಸುವ ಪಠ್ಯಗಳಿಲ್ಲದಿರುವುದು ದುರಂತ. ನಾಡಿನ ಹಿರಿಮೆ, ಪರಂಪರೆಯನ್ನು ಸಾರುವ ಸಾಹಿತ್ಯಗಳು, ಬರಹಗಳು ಯುವ ಸಮೂಹಕ್ಕೆ ಪರಿಚಯಿಸುವ ತುತರ್ು ಇಂದಿದೆ ಎಂದು ಕಲ್ಲಕಟ್ಟ ಮಜ್ದೂರರ ಹಿರಿಯ ಪ್ರಾಥಮಿಕ ಶಾಲೆಯ ಪ್ರಬಂಧಕ ಕೇಶವ ಪಿ.ಎನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಸರಗೋಡಿನ ಸಾಮಾಜಿಕ, ಸಾಹಿತ್ತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು, ಕನರ್ಾಟಕ ಸರಕಾರದ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಸಹಕಾರದೊಂದಿಗೆ ಕಾಸರಗೋಡಿನ ಇಪ್ಪತ್ತು ಕನ್ನಡ ಶಾಲೆಗಳ ಎರಡು ಸಾವಿರ ವಿದ್ಯಾಥರ್ಿಗಳಿಗೆ ಹಮ್ಮಿಕೊಂಡ ನಾಡಗೀತೆ ಹಾಗೂ ಭಾವಗೀತೆಗಳ ಕಾಯರ್ಾಗಾರ "ಕನ್ನಡ ಸ್ವರ"ವನ್ನು ಶುಕ್ರವಾರ ಕಲ್ಲಕಟ್ಟದ ಮಜ್ದೂರರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಕಾಸರಗೊಡಿನ ಕನ್ನಡತನವನ್ನು ಉಳಿಸಿ ಬೆಳೆಸುವಲ್ಲಿ ಸಾಹಿತ್ಯಿಕ ಕಾರ್ಯಕ್ರಮಗಳು ಪೋಷಣೆಯೊದಗಿಸುತ್ತಿದ್ದು, ಆಧುನಿಕ ಯುವ ಸಮೂಹಕ್ಕೆ ಕನ್ನಡ ಭಾಷೆ, ಸಂಸ್ಕೃತಿಯನ್ನು ಪರಿಚಯಿಸುವ ಚಟುವಟಿಕೆಗಳಿಂದ ಇಲ್ಲಿಯ ಸಂಸ್ಕೃತಿ ಉಳಿದು ಬೆಳೆಯುತ್ತಿದೆ ಎಂದು ಅವರು ತಿಳಿಸಿದರು. ತಂತ್ರಜ್ಞಾನ ಆಧಾರಿತ ಇಂದಿನ ಕಾಲಘಟ್ಟ ಪರಂಪರೆಯನ್ನು ಹೊಸಕಿ ಭೀತಿಯನ್ನು ವಿವಿಧ ಮುಖಗಳಲ್ಲಿ ಒಡ್ಡುತ್ತಿರುವುದು ಗಂಭೀರ ವಿಷಯವಾಗಿದ್ದು, ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ದಿಗ್ಗಜರ ಸಾಹಿತ್ಯದೊಂದಿಗೆ ಮಿಂದೇಳುವ ಪ್ರಯತ್ನ ಮಾಡಿದಾಗ ಗುಣಾತ್ಮಕ ಯಶಸ್ಸು ಮೂಡಿಬರುತ್ತದೆ ಎಂದು ಅವರು ತಿಳಿಸಿದರು.
ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ್ ಪ್ರಸಾದ್ ಕೆ. ಅಧ್ಯಕ್ಷತೆ ವಹಿಸಿ ಮಾತನಾಡಿ, ಗಡಿನಾಡು ಕಾಸರಗೋಡಿನಲ್ಲಿ ಸಂಕಷ್ಟದಲ್ಲಿರುವ ಕನ್ನಡ ಧ್ವನಿಯನ್ನು ಉಳಿಸಿ ಬೆಳೆಸುವಲ್ಲಿ ನಿರಂತರ ಕಾರ್ಯಚಟುವಟಿಕೆಗಳು ಪರಿಣಾಮಕಾರಿ. ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲಿಯ ಕನ್ನಡ ಧ್ವನಿಯನ್ನು ಬಾನಂಗಳದಲ್ಲಿ ಮತ್ತೆ ಚೇತೋಹಾರಿಗೊಳಿಸುವಲ್ಲಿ ಮಹತ್ವ ಹೊಂದಿದೆ ಎಂದು ತಿಳಿಸಿದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಜೋಸೆಫ್ ಲೋಬೋ, ಮಾತೃಮಂಡಳಿಯ ಅಧ್ಯಕ್ಷೆ ಲಿಲ್ಲಿ ಡಿಸೋಜಾ ಉಪಸ್ಥಿತರಿದ್ದು ಶುಭಹಾರೈಸಿದರು. ರಂಗಚಿನ್ನಾರಿಯ ನಿದರ್ೇಶಕ ವೈ ಸತ್ಯನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿ ಮಕ್ಕಳಲ್ಲಿ ಸಾಂಸ್ಕೃತಿಕ, ಸಾಹಿತ್ತಿಕ ಮನೋಭಾವವನ್ನು ಪ್ರಾತ್ಸಾಹಿಸಿ, ಸಮೃದ್ದ ಸಮಾಜ ನಿಮರ್ಾಣ ರಂಗಚಿನ್ನಾರಿಯ ವಿವಿಧ ಕಾರ್ಯಚಟುವಟಿಕೆಗಳ ಮೂಲ ಉದ್ದೇಶ ಎಂದು ತಿಳಿಸಿದರು.
ಶಾಲಾ ಹಿರಿಯ ಶಿಕ್ಷಕಿ ಜಯಲಕ್ಷ್ಮೀ ಸಿ.ಎಚ್ ಸ್ವಾಗತಿಸಿ, ಶಿಕ್ಷಕಿ ನಿರೀಕ್ಷಾ ವಂದಿಸಿದರು. ಬಳಿಕ ಖ್ಯಾತ ಗಾಯಕ ಕಿಶೋರ್ ಪೆರ್ಲ ರವರು ಕುವೆಂಪುರವರ ಭಾರತ ಜನನಿಯ ತನುಜಾತೆ ಹಾಗೂ ಮಂಜೇಶ್ವರ ಗೋವಿಂದ ಪೈಗಳ ತಾಯೆ ಬಾರ ಮೊಗವ ತೋರ ಹಾಡುಗಳನ್ನು ಶಿಬಿರಾಥರ್ಿ ವಿದ್ಯಾಥರ್ಿಗಳಿಗೆ ರಾಗ ಸಮಯೋಜಿಸಿ ತರಬೇತಿ ನೀಡಿದರು.



