ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 07, 2017
ವಕೀಲರ ದುಬಾರಿ ಶುಲ್ಕಕ್ಕೆ ಲಗಾಮು ಹಾಕುವಂತೆ ಕೇಂದ್ರಕ್ಕೆ ಸುಪ್ರೀಂ ಸಲಹೆ
ನವದೆಹಲಿ:ವಕೀಲರು ತಮ್ಮ ಕಕ್ಷಿದಾರರಿಂದ ದುಬಾರಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಇದರಿಂದಾಗಿ ಬಡವರಿಗೆ ನ್ಯಾಯ ದೊರಕದ ಸ್ಥಿತಿ ನಿಮರ್ಾಣವಾಗಿದೆ. ಇನ್ನಾದರೂ ವಕೀಲರ ಶುಲ್ಕವನ್ನು ನಿಯಂತ್ರಣ ಮಾಡುವ ನಿಯಮಾವಳಿಗಳನ್ನು ಕೇಂದ್ರ ಸಕರ್ಾರ ರೂಪಿಸಬೇಕು ಎಂದು ಸುಪ್ರೀಂ ಕೋಟರ್್ ಸಲಹೆ ಮಾಡಿದೆ. ಕಾನೂನು ಸಲಹೆ ಪಡೆಯುವುದು ಇಂದು ದುಬಾರಿ ವ್ಯವಹಾರವಾಗಿದೆ ಎಂದು ಕೋಟರ್್ ಆತಂಕ ಹೊರಹಾಕಿದ್ದು , ವಕೀಲರ ಶುಲ್ಕಕ್ಕೆ ಕನಿಷ್ಠ ಹಾಗೂ ಗರಿಷ್ಠ ಮಿತಿಗಳನ್ನು ನಿಗದಿ ಪಡಿಸಬೇಕೆಂದು ನ್ಯಾಯಾಲಯ ಹೇಳಿದೆ.
ನ್ಯಾಯಮೂತರ್ಿ ಆದಶರ್್ ಕೆ. ಗೋಯಲ್ ಮತ್ತು ಯು.ಯು.ಲಲಿತ್ ಅವರನ್ನೊಳಗೊಂಡ ಪೀಠ ಈ ಸಲಹೆ ನೀಡಿದ್ದು, ಕಾನೂನು ವೃತ್ತಿಯಲ್ಲಿ ಇರುವವರಿಗೆ ನೀತಿ ಸಂಹಿತೆ ರೂಪಿಸಲು ಕೇಂದ್ರ ಸಕರ್ಾರ ಮುಂದಾಗಬೇಕು ಎಂದಿದೆ. ಕಾನೂನು ಆಯೋಗದ ವರದಿ, ಸುಪ್ರೀಂ ಕೋಟರ್್ನ ಹಳೆಯ ತೀಪರ್ುಗಳನ್ನು ಈ ವೇಳೆ ಪೀಠವು ಉಲ್ಲೇಖಿಸಿದೆ. ಆಥರ್ಿಕವಾಗಿ ಸದೃಢರಲ್ಲದವರು ಸಮರ್ಥ ವಕೀಲರ ಸಲಹೆ ಪಡೆಯುವುದು ಕಠಿಣವಾಗುತ್ತಿದೆ. ತೀಪರ್ಿನ ಫಲಾನುಭವಿಗಳ ಲಾಭದಲ್ಲಿ ಪಾಲು ಪಡೆಯುವ ವಕೀಲರ ಪ್ರವೃತ್ತಿ ಖಂಡನೀಯ ಎಂದಿರುವ ನ್ಯಾಯಾಲಯ ವಕೀಲರು ವೃತ್ತಿ ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕು ಎಂದಿದೆ.
ಇದೇ ವೇಳೆ ಹೆಚ್ಚಿನ ಶುಲ್ಕ ಪಡೆದು ಅನ್ಯಾಯವೆಸಗುವ ವಕೀಲರ ವಿರುದ್ಧ ಕ್ರಮ ಜರುಗಿಸಬೇಕೆಂದೂ ಕೂಡ ನ್ಯಾಯಾಲಯ ಸಲಹೆ ಮಾಡಿದೆ.





