ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 07, 2017
ಬಸ್ಸಿಗೆ ಕಲ್ಲೆಸೆತ-ನೌಕರರ ಮಿಂಚಿನ ಮುಷ್ಕರ
ಬದಿಯಡ್ಕ: ಮಾರ್ಪನಡ್ಕ ಸಮೀಪದ ಚಕ್ಕುಡಲ್ ಎಂಬಲ್ಲಿ ಬುಧವಾರ ರಾತ್ರಿ ಬೆಳಿಂಜಕ್ಕೆ ತೆರಳುತ್ತಿದ್ದ ಖಾಸಗೀ ಬಸ್ಸಿಗೆ ಕಲ್ಲೆಸೆದಿರುವುದನ್ನು ಪ್ರತಿಭಟಿಸಿ ಗುರುವಾರ ಕುಂಬಳೆ ಮುಳ್ಳೇರಿಯಾ ರಸ್ತೆಯ ಗುರುವಾಯೂರಪ್ಪನ್ ಬಸ್ ಸಂಚಾರ ಮೊಟಕುಗೊಳಿಸಿ ಮಿಂಚಿನ ಮುಷ್ಕರ ನಡೆಸಿತು.
ಬುಧವಾರ ರಾತ್ರಿ ಬೆಳಿಂಜಕ್ಕೆ ತೆರಳುತ್ತಿದ್ದ ಖಾಸಗೀ ಬಸ್ ಗುರುವಾಯೂರಪ್ಪನ್ ನ ಮೇಲೆ ದುಷ್ಕಮರ್ಿಗಳು ಚಕ್ಕುಡಲ್ ನಲ್ಲಿ ವ್ಯಾಪಕ ಪ್ರಮಾಣದಲ್ಲಿ ಕಲ್ಲೆಸೆದು ಬೈಕ್ ಮೂಲಕ ಪರಾರಿಯಾಗಿದ್ದರು. ಬಸ್ ನ ಗಾಜುಗಳಿಗೆ ಹಾನಿಯಾಗಿದ್ದು, ಪ್ರಯಾಣಿಕರು, ಬಸ್ ಸಿಬ್ಬಂದಿಗಳು ಅದೃಷ್ಟವಶಾತ್ ಪಾರಾದರು.
ರಾ.ಹೆದ್ದಾರಿ ಎರಿಯಾಲ್ ನಲ್ಲೂ ಮಹಾಲಕ್ಷ್ಮೀ ಬಸ್ ಗೆ ಕಲ್ಲೆಸೆತ ನಡೆದಿತ್ತು. ಜೀವಹಾನಿ ಸಂಭವಿಸಿಲ್ಲ.
ಘಟನೆಯನ್ನು ಖಂಡಿಸಿ ಗುರುವಾಯೂರಪ್ಪನ್ ಬಸ್ ಗುರುವಾರ ಕುಂಬಳೆ-ಮುಳ್ಳೇರಿಯಾ ಸಂಚಾರವನ್ನು ಮೊಟಕುಗೊಳಿಸಿ ಪ್ರತಿಭಟನೆ ವ್ಯಕ್ತಪಡಿಸಿದರು.ಅನಿರೀಕ್ಷಿತ ಮುಷ್ಕರದಿಂದ ಪ್ರಯಾಣಿಕರು ತೊಂದರೆ ಅನುಭವಿಸಿದರು.
ಮಾಲಕರು ಸಮರಸದೊಂದಿಗೆ:
ಘಟನೆ-ಮುಷ್ಕರದ ಬಗ್ಗೆ ಸಮರಸ ಗುರುವಾಯೂರಪ್ಪನ್ ಬಸ್ ಮಾಲಕರಲ್ಲಿ ಮಾತನಾಡಿದಾಗ, ಘಟನೆ ಖಂಡನಾರ್ಹವಾಗಿದ್ದು, ಅನ್ಯಾಯದ ಪರಮಾವಧಿ ಎಂದಿರುವರು. ಘಟನೆಯ ಹಿಂದೆ ಬೆರಳೆಣಿಕೆಯ ದುಷ್ಕಮರ್ಿಗಳಿದ್ದು, ದೂರು ನೀಡಲು ಸಿಬ್ಬಂದಿಗಳಿಗೆ ಸೂಚಿಸಲಾಗಿದೆ. ತಾನು ಮುಷ್ಕರ ನಡೆಸದಂತೆ ನೌಕರರಿಗೆ ಸೂಚಿಸಿದ್ದರೂ, ನೌಕರರು ರಕ್ಷಣೆ ಕೋರಿ ಮುಷ್ಕರ ಹೂಡಿದ್ದಾರೆ. ಕಳೆದ 35 ವರ್ಷಗಳಿಂದ ಜನರಿಗೆ ಸೇವೆಯೊದಗಿಸುತ್ತಿರುವ ನಾವು ಜನಸಾಮಾನ್ಯರ ಸೌಕರ್ಯಗಳಿಗೆ ಸ್ಪಂದಿಸಿದ್ದು, ಇದೀಗ ನೌಕರರ ಮೇಲಾಗುತ್ತಿರುವ ಆಕ್ರಮಣಕ್ಕೆ ಪೋಲೀಸರು ಅಗತ್ಯ ಕ್ರಮ ಕೈಗೊಳ್ಳಬೇಕು. ಜೊತೆಗೆ ಭಗವಂತನ ವಿಚಾರಣೆ, ಅದರ ಫಲ ಇದ್ದೇ ಇದೆ.
ವಸಂತ ಪೈ ಬದಿಯಡ್ಕ
ಮಾಲಕರು ಗುರುವಾಯೂರಪ್ಪನ್ ಬಸ್ ಸವರ್ಿಸ್.ಬದಿಯಡ್ಕ





