ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 07, 2017
ಜಲದರಿವಿನಿಂದ ಬದುಕಿನ ಸಾರ್ಥಕತೆ-ವಾರಿಜಾ ನೇರೋಳು
ಬೆಳ್ಳೂರು ಶಾಲೆಯಲ್ಲಿ ಜಲಶ್ರೀ ಯೋಜನೆ ಅನುಷ್ಠಾನ
ಮುಳ್ಳೇರಿಯ: ವರ್ತಮಾನದ ಅಜ್ಞಾನ ಭವಿಷ್ಯವನ್ನು ಸಂಕಷ್ಟಕ್ಕೆ ತಳ್ಳುವ ಭೀತಿಯ ಬಗೆಗೆ ಜಾಗೃತರಾಗಬೇಕಿದೆ. ಮುಂದಿನ ತಲೆಮಾರು ಶುದ್ದಜಲ ಲಭಿಸದೆ ತೀವ್ರ ಸಮಸ್ಯೆಗಳಲ್ಲಿ ಸಿಲುಕುವುದನ್ನು ತಪ್ಪಿಸಲು ಕ್ರಿಯಾತ್ಮಕ ಕಾರ್ಯಯೋಜನೆಗಳ ಅನುಷ್ಠಾನಕ್ಕೆ ಮನಮಾಡಬೇಕು ಎಂದು ಬೆಳ್ಳೂರು ಸರಕಾರಿ ಹೈಯರ್ ಸೆಕೆಂಡರಿ ಶಾಲಾ ಮುಖ್ಯೋಪಾಧ್ಯಾಯಿನಿ ವಾರಿಜಾ ನೇರೋಳು ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಳ್ಳೂರು ಗ್ರಾಮ ಪಂಚಾಯತಿಯ ಜಲನಿಧಿ ಯೋಜನೆಯ ಭಾಗವಾಗಿ ಶಾಲಾ ವಿದ್ಯಾಥರ್ಿಗಳಲ್ಲಿ ಜಾಗೃತಿ ಮತ್ತು ಚಟುವಟಿಕೆಗಳ ಮೂಲಕ ಅಸ್ತಿತ್ವಕ್ಕೆ ತರಲಾಗುವ ಜಲಶ್ರೀ ಕಾರ್ಯಕ್ರಮವನ್ನು ಮಂಗಳವಾರ ಶಾಲೆಯಲ್ಲಿ ಚಾಲನೆಗೊಳಿಸಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸೌಕರ್ಯಗಳೊಂದಿಗೆ ಇಂದು ನೀರಿನ ಬಳಕೆ ವ್ಯಾಪಕ ಪ್ರಮಾಣದಲ್ಲಿ ಎಲ್ಲೆಮೀರಿದ್ದು, ಒಂದು ಹನಿ ನೀರಿನ ಮಹತ್ವದ ಬಗ್ಗೆ ಪ್ರತಿಯೊಬ್ಬರೂ ಗಂಭೀರ ಚಿಂತನೆ ನಡೆಸಬೇಕಾದ ಅನಿವಾರ್ಯತೆಯಿದೆ. ಎಳೆಯ ಹರೆಯದಲ್ಲೇ ಈ ಬಗೆಗಿನ ಅರಿವು-ಜಾಗೃತಿಗಳಿಗೆ ಲಭಿಸುವ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡಲ್ಲಿ ಭವಿಷ್ಯ ಸುಂದರವಾಗಿರುವುದು ಎಂದು ಅವರು ತಿಳಿಸಿದರು. ವಿದ್ಯಾಥರ್ಿಗಳ ಸಹಯೋಗದಲ್ಲಿ ಮುಂದಿನ ಒಂದು ವರ್ಷಗಳ ಕಾಲ ಅನುಷ್ಠಾನಗೊಳ್ಳಿರುವ ಈ ಯೋಜನೆ ಸಕಾರಾತ್ಮಕ ಪರಿಣಾಮವನ್ನು ಬೀರುವುದರ ಜೊತೆಗೆ ಮುಂದಿನ ತಲೆಮಾರಿಗೆ ಮಹತ್ವಪೂರ್ಣ ಕೊಡುಗೆಯ ಮೂಲಕ ಭೂಮಿಯ ಮೇಲೆ ಬದುಕುವ ಹಕ್ಕನ್ನು ಒದಗಿಸಿದ ಸಾರ್ಥಕತೆಗೆ ಭಾಜನರಾಗುವೆವು ಎಂದು ಅವರು ತಿಳಿಸಿದರು.
ಶಾಲಾ ನೌಕರ ಸಂಘದ ಕಾರ್ಯದಶರ್ಿ ಪದ್ಮನಾಭ ಮಾಸ್ತರ್, ಹಿರಿಯ ಶಿಕ್ಷಕ ಕುಂಞಿರಾಮ ಮಣಿಯಾಣಿ ಉಪಸ್ಥಿತರಿದ್ದು, ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ವಿದ್ಯಾಥರ್ಿಗಳಿಗೆ ನಿದರ್ೇಶನ ನೀಡಿ ಶುಭಹಾರ್ಯಸಿದರು. ಶಿಕ್ಷಕಿಯರಾದ ನೆಜುಮುನ್ನೀಸಾ ಟೀಚರ್ ಹಾಗೂ ಶೋಭಾ ಟೀಚರ್ ಯೋಜನೆಯ ಅನುಷ್ಠಾನದ ನೇತೃತ್ವ ವಹಿಸಿ ವಿದ್ಯಾಥರ್ಿಗಳಿಗೆ ಮಾಹಿತಿ ನೀಡಿದರು.
ಯೋಜನೆಯ ಬಗ್ಗೆ:
ಬೆಳ್ಳೂರು ಗ್ರಾಮ ಪಂಚಾಯತು ತನ್ನ ಮಹತ್ವಾಕಾಂಕ್ಷೆಯ ಯೋಜನೆಯಾದ ಜಲನಿಧಿಯನ್ನು ಕಳೆದೊಂದು ವರ್ಷದಿಂದ ಹಮ್ಮಿಕೊಂಡಿದ್ದು, ಶುದ್ದಜಲ ಲಭ್ಯವಿಲ್ಲದ ಗ್ರಾ.ಪಂ.ನ ವಿವಿಧ ಪ್ರದೇಶಗಳಿಗೆ ಪಯಸ್ವಿನಿ ನದಿಯಿಂದ ಬೃಹತ್ ಫೈಪ್ ಗಳ ಮೂಲಕ ಜಲ ಪೂರ್ಯಸುತ್ತಿದೆ.ಇದರ ಜೊತೆಗೆ ಜಲ ನಿರ್ವಹಣೆಯ ಜಾಗೃತಿಗಾಗಿ ಎರಡನೇ ಹಂತದ ಕಾರ್ಯಯೋಜನೆಯನ್ನು 2017-48ರ ಯೋಜನೆಯಲ್ಲಿ ಅನುಷ್ಠಾನಕ್ಕೆ ತರುತ್ತಿದ್ದು, ಈ ಮೂಲಕ ವಿದ್ಯಾಥರ್ಿಗಳನ್ನು ಬಳಸಿ ಜಲಜಾಗೃತಿ, ನಿರ್ವಹಣೆಯ ದೂರಗಾಮಿ ಯೋಜನೆಯೊಂದನ್ನು ಜಲಶ್ರೀ ಎಂಬ ಹೆಸರಲ್ಲಿ ಜಾರಿಗೊಳಿಸುತ್ತಿದೆ. ವಿದ್ಯಾಥರ್ಿಗಳಿಗೆ ಜಾಗೃತಿ ತರಗತಿ, ಜಲ ಸಂರಕ್ಷಣೆಯ ಬಗೆಗೆ ಸ್ಥಳ ಸಂದರ್ಶನ, ತರಬೇತಿ, ಸಾರ್ವಜನಿಕರಿಗೆ ಅರಿವು ಮೂಡಿಸಲು ವಿವಿಧ ಹಂತಗಳ ಕಾರ್ಯಕ್ರಮಗಳನ್ನು ಈ ಮೂಲಕ ಅನುಷ್ಠಾನಗೊಳಿಸುವ ಮಹತ್ವಾಕಾಂಕ್ಷೆ ಇರಿಸಲಾಗಿದೆ.






