ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 03, 2017
ಕುಂಬಳೆ ಮೃಗಾಸ್ಪತ್ರೆ ಪರಿಸರದಲ್ಲಿ ಸಮಾಜದ್ರೋಹಿಗಳ ಅಟ್ಟಹಾಸ
ಕುಂಬಳೆ: ಕುಂಬಳೆಯಲ್ಲಿರವ ಸರಕಾರಿ ಮೃಗಾಸ್ಪತ್ರೆ (ಪಶು ಚಿಕಿತ್ಸಾಲಯ) ಪರಿಸರದಲ್ಲಿ ಸಮಾಜದ್ರೋಹಿಗಳ ಅಟ್ಟಹಾಸ ಮಿತಿಮೀರಿದೆ. ಸಂಜೆ ಮರೆಯಾಗುತ್ತಿದ್ದಂತೆ ಇಲ್ಲಿ ಮದ್ಯಪಾನಿಗಳದ್ದೇ ಕಾರುಬಾರು.
ಆಸ್ಪತ್ರೆಯ ಸುತ್ತುಮುತ್ತ ಕಾಡು ಪೊದೆ ತುಂಬಿಕೊಂಡಿರುವುದರಿಂದ ಇಲ್ಲಿ ಮದ್ಯಪಾನಿಗಳು, ಸಮಾಜದ್ರೋಹಿಗಳು ತಮ್ಮ ಕೃತ್ಯಗಳಲ್ಲಿ ಸುಲಭವಾಗಿ ತೊಡಗುತ್ತಾರೆ. ಈ ವಠಾರದಲ್ಲಿ ಬೀದಿದೀಪಗಳು ಉರಿಯದಿರುವುದರಿಂದ ಸಮಾಜಕಂಟಕರಿಗೆ ವರದಾನವಾಗಿ ಪರಿಣಮಿಸಿದೆ.
ಆಸ್ಪತ್ರೆಯ ಕಿಟಿಕಿ ಗಾಜುಗಳನ್ನು ಒಂದೊಂದಾಗಿ ಒಡೆದು ಪುಡಿಗೈಯ್ಯಲಾಗುತ್ತಿದೆ. ಇದೀಗ ಆಸ್ಪತ್ರೆಯ ಮುಂಭಾಗದ ಗೇಟ್ನ ಬೀಗ ಮುರಿದ ಸ್ಥಿತಿಯಲ್ಲಿ ಕಂಡುಬಂದಿದೆ. ಕಂಪ್ಯೂಟರ್ ಸಹಿತ ಅನೇಕ ಬೆಲೆಬಾಳುವ ಉಪಕರಣಗಳು ಈ ಆಸ್ಪತ್ರೆಯಲ್ಲಿವೆ. ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಆಸ್ಪತ್ರೆಯ ಒಳಗಿರುವ ಕಂಪ್ಯೂಟರ್ ಸಹಿತ ಎಲ್ಲಾ ಯಂತ್ರಗಳಿಗೂ ಸುರಕ್ಷತೆ ಇಲ್ಲ ಎಂದೇ ಹೇಳಬಹುದು.
ಈ ಮೃಗಾಸ್ಪತ್ರೆ ಪರಿಸರದಲ್ಲಿ ಪೊಲೀಸ್ ಠಾಣೆ, ಸಿಐ ಕಚೇರಿ, ಪಂಚಾಯತು ಕಚೇರಿ, ಗ್ರಾಮ ಕಚೇರಿ ಸಹಿತ ಹಲವು ಸರಕಾರಿ ಕಾಯರ್ಾಲಯಗಳು ಇದ್ದರೂ, ಸಮಾಜದ್ರೋಹಿಗಳ ಅಟ್ಟಹಾಸ ಮಾತ್ರ ಯಾರ ಗಮನಕ್ಕೂ ಬಾರದಿರುವುದು ಅಚ್ಚರಿಗೆ ಕಾರಣವಾಗಿದೆ. ಆಸ್ಪತ್ರೆ ಕಂಪೌಂಡ್ನ ಒಳಗೆ ಮದ್ಯ, ಮಾದಕವಸ್ತುಗಳ ಬಾಟಲಿಗಳು, ಪ್ಯಾಕೇಟ್ಗಳು, ಸಿರಿಂಜ್ಗಳು ಇತ್ಯಾದಿ ಪತ್ತೆಯಾಗಿವೆ.
ಶಾಲಾ ಕಾಲೇಜು ವಿದ್ಯಾಥರ್ಿಗಳು ಸಹಿತ ಹಲವರು ನಡೆದು ಹೋಗುವ ಶೇಡಿಕಾವಿಗೆ ತೆರಳುವ ರಸ್ತೆ ಬದಿಯಲ್ಲೇ ಈ ಆಸ್ಪತ್ರೆ ಕಾಯರ್ಾಚರಿಸುತ್ತಿದೆ. ಆದರೆ ಆಸ್ಪತ್ರೆ ವಠಾರದಲ್ಲಿ ತುಂಬಿಕೊಂಡಿರುವ ಸಮಾಜಕಂಟಕರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ಮೃಗಾಸ್ಪತ್ರೆ ಪರಿಸರದ ಕಾಡು ಪೊದೆಗಳನ್ನು ಕಡಿದು ತೆರವುಗೊಳಿಸಿ ಭದ್ರತೆ ಒದಗಿಸಿ ಸಮಾಜದ್ರೋಹಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.
ಏನಂತಾರೆ:
ಸಾರ್ವಜನಿಕ ವ್ಯವಸ್ಥೆಗಳನ್ನು ಹಾಳುಗೆಡಹುವುದು, ನಾಶನಷ್ಟಗಳಿಗೆ ಕಾರಣವಾಗುವುದು ಕಳವಳಕಾರಿಯಾಗಿದ್ದು, ಕಾನೂನು ಭಂಜನೆಯಾಗಿದೆ. ಈ ಬಗ್ಗೆ ಶೀಘ್ರ ಪೋಲೀಸರಿಗೆ ಗ್ರಾ.ಪಂ. ಕಡೆಯಿಂದ ದೂರು ನೀಡಿ ಅಗತ್ಯ ಕ್ರಮಕ್ಕೆ ಮನವಿ ನೀಡಲಾಗುವುದು.
ಪುಂಡರೀಕಾಕ್ಷ ಕೆ.ಎಲ್.
ಅಧ್ಯಕ್ಷರು ಕುಂಬಳೆ ಗ್ರಾಮ ಪಂಚಾಯತು.





