HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಕನ್ನಡ ಉಳಿಸುವ ಮೂಲಕ ಸಮಾಜದಲ್ಲಿ ಹೊಸ ರೂಪು : ಐ.ವಿ.ಭಟ್ ಕಾಸರಗೋಡು: ನಿರಂತರವಾಗಿ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕನ್ನಡಿಗರಲ್ಲಿ ಕನ್ನಡದ ಬಗೆಗಿನ ಜಾಗೃತಿ ಮೂಡುವುದು. ಕನ್ನಡ ಉಳಿಸಿ ಬೆಳೆಸುವ ಕೈಂಕರ್ಯದಿಂದ ಸಮಾಜದಲ್ಲಿ ಹೊಸ ರೂಪು ನೀಡುವಂತಾಗುತ್ತದೆ ಎಂದು ಹಿರಿಯ ನ್ಯಾಯವಾದಿ, ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಮಾಜಿ ಅಧ್ಯಕ್ಷ ಐ.ವಿ.ಭಟ್ ಅವರು ಹೇಳಿದರು. ಕಾಸರಗೋಡು ಸರಕಾರಿ ಕಾಲೇಜು ಸಭಾಂಗಣದಲ್ಲಿ ಸಮನ್ವಯ ಕಾಸರಗೋಡು ಶನಿವಾರ ಆಯೋಜಿಸಿದ `ಕಾಸರಗೋಡು ಕನ್ನಡ ಸಮ್ಮೇಳನ'ವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಸರಕಾರಿ ಉದ್ಯೋಗ, ಸಾರ್ವಜನಿಕ ಜೀವನ, ಸಾಮಾಜಿಕ ಚಿಂತನೆ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಿ ಹೊಸ ಹುರುಪು ತರುವ ಕಾರ್ಯಕ್ರಮ ಸಮನ್ವಯ ಕಾಸರಗೋಡು. ಸಮಾಜಕ್ಕೆ ಮತ್ತು ಸದಸ್ಯರಿಗೂ ಹಾಗೂ ಕನ್ನಡದ ಜನರ ಸಮಸ್ಯೆಗಳ ಚಿಂತನೆ ಮನದಟ್ಟು ಮಾಡುವುದು ಸಮನ್ವಯದ ಮುಖ್ಯ ಉದ್ದೇಶ ಎಂದರು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿದ ಕೇರಳ ತುಳು ಅಕಾಡೆಮಿ ಅಧ್ಯಕ್ಷ. ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರಕಲಾವಿದ ಪಿ.ಎಸ್.ಪುಣಿಂಚಿತ್ತಾಯ ಅವರು ಮಾತನಾಡಿ ಕಾಸರಗೋಡು ಸಪ್ತ ಭಾಷಾ ನೆಲ ಹಾಗೂ ಪುಣ್ಯ ಭೂಮಿ. ಕಾಸರಗೋಡಿನ ಸರಕಾರಿ ಶಿಕ್ಷಕರು ಹಾಗೂ ನಿವೃತ್ತ ಶಿಕ್ಷಕರು ಕನ್ನಡಕ್ಕೆ ಅಪಾರವಾದ ಸೇವೆಯನ್ನು ನೀಡುತ್ತಿದ್ದಾರೆ. ಸರಕಾರಿ ಕೆಲಸವನ್ನು ಏಕಾಗ್ರತೆಯಿಂದ ಮಾಡಿ ಕನ್ನಡ ಭಾಷೆಗೆ ಪ್ರಾಮುಖ್ಯತೆಯನ್ನು ನೀಡುತ್ತಿದ್ದಾರೆ. ಕಾಸಗೋಡು ಕನ್ನಡ ಸಮ್ಮೇಳನದಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ರಾಷ್ಟ್ರಮಟ್ಟದ ಕನ್ನಡದ ಕಾರ್ಯಕ್ರಮಕ್ಕೆ ಹೆಚ್ಚಿನ ಸವಲತ್ತು ನೀಡಬೇಕು. ಕನ್ನಡ ಮತ್ತು ತುಳು ಭಾಷೆಗೆ ಒತ್ತು ನೀಡಿ ದ.ಕ. ಮತ್ತು ಕಾಸರಗೋಡಿನ ಭಾಗವನ್ನು ಸೇರಿಸಿಕೊಂಡು ತುಳುನಾಡು ಎಂಬ ಆಶಯವನ್ನು ಸಾಕಾರಗೊಳಿಸುವಂತಾಗಬೇಕೆಂದರು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಹಿರಿಯ ಕನ್ನಡ ಹೋರಾಟಗಾರ ನ್ಯಾಯವಾದಿ ಅಡೂರು ಉಮೇಶ್ ನಾಕ್ ಅವರು ಮಾತನಾಡಿ ಕನ್ನಡಕ್ಕೆ ಕಾಸರಗೋಡಿನಲ್ಲಿ ಹೆಚ್ಚಿನ ಪ್ರಾಮುಖ್ಯತೆ ದೊರೆಯುತ್ತಿಲ್ಲ. ಕಾಸರಗೋಡು ಕನರ್ಾಟಕಕ್ಕೆ ಸೇರಲೇಬೇಕು. ಕಾಸರಗೋಡು ಅನ್ಯಾಯವಾಗಿ ಕೇರಳದಲ್ಲಿ ಸೇರ್ಪಡೆಗೊಂಡಿದೆ. ಪಣಿಕ್ಕರ್ ಅವರ ವಂಚನೆಯಿಂದ ಕಾಸರಗೋಡಿಗೆ ಅನ್ಯಾಯವಾಗಿದೆ. ಇದರ ವಿರುದ್ದ ನಿರಂತರವಾಗಿ ಹೋರಾಟ ನಡೆದಿದ್ದರೂ, ಕಾಸರಗೋಡು ಕೇರಳದಲ್ಲೇ ಉಳಿದುಕೊಂಡಿದೆ. ಆದರೆ `ಸತ್ಯಮೇವ ಜಯತೆ' ಎಂಬಂತೆ ಕಾಸರಗೋಡು ಕನರ್ಾಟಕಕ್ಕೆ ಸೇರ್ಪಡೆಗೊಳ್ಳುವುದು ಎಂದು ಭರವಸೆಯನ್ನು ವ್ಯಕ್ತಪಡಿಸಿದರು. ಈ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸುವುದಾಗಿಯೂ ಅವರು ಹೇಳಿದರು. ಕಾರ್ಯಕ್ರಮದಲ್ಲಿ ಮಧೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ದಿವಾಕರ ಆಚಾರ್ಯ, ನೀಚರ್ಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ಸಂಚಾಲಕ ಜಯದೇವ ಖಂಡಿಗೆ, ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಸುಜಾತ ಎಸ್, ಕಾಸರಗೋಡು ಸರಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ|ಎ.ಶ್ರೀನಾಥ್ ಕಾಸರಗೋಡು, ಅಧ್ಯಾಪಕಿ ಪ್ರಭಾವತಿ ಕೆದಿಲಾಯ, ಕೇರಳ ರಾಜ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಅಧ್ಯಕ್ಷ ರವೀಂದ್ರನಾಥ್ ಮೊದಲಾದವರು ಮಾತನಾಡಿದರು. ನ್ಯಾಯವಾದಿ ಸದಾನಂದ ರೈ, ನಿವೃತ್ತ ಉಪಜಿಲ್ಲಾಧಿಕಾರಿ ಬಿ.ಬಾಲಕೃಷ್ಣ ಅಗ್ಗಿತ್ತಾಯ, ಸುನೀತ್ ಕುಮಾರ್, ನ್ಯಾಯವಾದಿ ಕೆ.ಎಂ.ಹಸೈನಾರ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಚಾಲಕ ದಾಮೋದರ ಮೊಗ್ರಾಲ್ಪುತ್ತೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ದಿಲೀಪ್ ಕುಮಾರ್ ಪೆರ್ಲ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ನಡೆದ ಸಾಹಿತ್ಯ ಗೋಷ್ಠಿಯಲ್ಲಿ ಕಾಸರಗೋಡು ಕನ್ನಡಿಗರ ಸಮಸ್ಯೆಗಳು ಮತ್ತು ಕನ್ನಡ ಶಾಲೆಗಳು ಮತ್ತು ಸಮಸ್ಯೆಗಳು ಕುರಿತಾಗಿ ಚಚರ್ಿಸಲಾಯಿತು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries