ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 03, 2017
ಕೆ ಟಿ ಜಯಕೃಷ್ಣ ಮಾಸ್ಟರ್ ಪುಷ್ಪಾರ್ಚನ ಕಾರ್ಯಕ್ರಮ
ಮುಳ್ಳೇರಿಯ : ಕೇರಳದಲ್ಲಿ ರಾಜಕೀಯ ಕೊಲೆಯೊಂದಿಗೆ ಸಿಪಿಎಂ ಜಿಹಾದಿ ಶಕ್ತಿಗಳು ಕೈಜೊಡಿಸಿವೆ. ಸಿಪಿಎಂನ್ನು ಎದುರಿಸುತ್ತಿರುವವರಿಗೆ ರಾಜಕೀಯ ಕಾರ್ಯಚಟುವಟಿಕೆ ಅಸಾಧ್ಯವೆಂದು ಭಾವಿಸಿದ್ದರೆ ಅದು ಹಗಲು ಕನಸು. ಕೇರಳದಲ್ಲಿ ಕಮಲ ಪತಾಕೆ ಗಾಳಿಯಿಂದ ಹಾರಾಡುವುದಲ್ಲ, ಬದಲಾಗಿ ವೀರ ಬಲಿದಾನಿಗಳ ಉಸಿರಿನಿಂದ ಎಂದು ಯುವಮೋಚರ್ಾ ಮಂಜೇಶ್ವರ ಮಂಡಲ ಪ್ರಧಾನ ಕಾರ್ಯದಶರ್ಿ ಬಾಲಕೃಷ್ಣ ವಿ ಯನ್ ನುಡಿದರು.
ಅವರು ಕೆ ಟಿ ಜಯಕೃಷ್ಣ ಮಾಸ್ಟರ್ ಬಲಿದಾನ ದಿನದಂಗವಾಗಿ ಶುಕ್ರವಾರ ಮುಳ್ಳೇರಿಯದಲ್ಲಿ ಪುಷ್ಪಾರ್ಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಳ್ಳೇರಿಯ ಘಟಕ ಅಧ್ಯಕ್ಷ ರವೀಂದ್ರನ್ ಅಧ್ಯಕ್ಷತೆ ವಹಿಸಿದರು. ಬೂತ್ ಕಾರ್ಯದಶರ್ಿ ಸತ್ಯ, ಮಣಿ, ರತ್ನಾಕರ, ಚಂದ್ರ ಮೊದಲಾದವರು ಉಪಸ್ಥಿತರಿದ್ದರು. ಘಟಕದ ಕಾರ್ಯದಶರ್ಿ ಕಾತರ್ಿಕ್ ಸ್ವಾಗತಿಸಿ, ಪ್ರವೀಣ್ ವಂದಿಸಿದರು.





