ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 03, 2017
ಭಕ್ತಿಕಾವ್ಯ ಚಾಮುಂಡಿಗುಡ್ಡೆ ಕಳಿಯಾಟ ಸಂಪನ್ನ
ಕಾಸರಗೋಡು: ಧಾಮರ್ಿಕತೆಗೆ ಕಲಾತ್ಮಕ ಸ್ಪರ್ಶವನ್ನಿತ್ತ ಚಿತ್ತಾರಿ ಚಾಮುಂಡಿಗುಡ್ಡೆ ಶ್ರೀ ವಿಷ್ಣುಚಾಮುಂಡೇಶ್ವರಿ ದೇವಸ್ಥಾನದ ಕಳಿಯಾಟ ಮಹೋತ್ಸವ ವಿವಿಧ ಧಾಮರ್ಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.
ಚಿತ್ತಾರಿ ಬಾರಿಕ್ಕಾಡು ಶ್ರೀ ಮಹಿಷಮದರ್ಿನಿ ಕ್ಷೇತ್ರ ತಂತ್ರಿವರ್ಯರು ಬೆಳಗಿದ ದಿವ್ಯ ದೀಪವನ್ನು ವಾದ್ಯಘೋಷಗಳೊಂದಿಗೆ ಕೊಂಡು ಹೋಗುವ ಮೂಲಕ ಪ್ರಾರಂಭಗೊಂಡ ಕಳಿಯಾಟ ಮಹೋತ್ಸವವು ಐದು ದಿನಗಳ ಪರ್ಯಂತ ವೈಭವದ ನಾಡಹಬ್ಬವೆಂಬಂತೆ ರಂಗುಪಡೆದುಕೊಂಡಿತು.
ಕನ್ನಡಿಗ ವೀರ ಶಾಂತ ನಾಯ್ಕ ಮೊಕ್ತೇಸರ ಪರಂಪರೆಯ ಉತ್ತರಾಧಿಕಾರಿಯ ಕೋರಿಕೆಯ ಮೇರೆಗೆ ಶ್ರೀ ಮಹಿಷಮದರ್ಿನಿ ಕ್ಷೇತ್ರ ತಂತ್ರಿವರ್ಯರು ದಿವ್ಯ ದೀಪ ಬೆಳಗುವುದು ಧಾಮರ್ಿಕತೆಗೆ ಸಲ್ಲುವ ಐತಿಹಾಸಿಕ ಸ್ಪರ್ಶವಾಗಿ ಇಂದಿಗೂ ಸಂಪ್ರದಾಯದಂತೆ ನಡೆದುಕೊಂಡು ಬರುತ್ತಿದೆ.
ಕಳಿಯಾಟ ಮಹೋತ್ಸವದ ಪ್ರಯುಕ್ತ ಪ್ರತಿದಿನ ಪೂಮಾರುತನ್, ರಕ್ತ ಚಾಮುಂಡಿ, ಭಗವತಿ, ವಿಷ್ಣುಮೂತರ್ಿ ದೈವಕೋಲ, ವೆಳ್ಳಾಟಂ, ಕುಳಿಚ್ಚೇಟಂ ಮೊದಲಾದ ದೈವಿಕ ಅನುಷ್ಠಾನ ಕಲೆಗಳು ಸಂಸ್ಕೃತಿಯ ಪ್ರತಿಬಿಂಬವಾಗಿ ಮೂಡಿಬಂತು.
ಮಡಿಯನ್ ತಾನತ್ತಿಂಗಲ್ ಶ್ರೀ ವಯನಾಟ್ಟು ಕುಲವನ್ ತರವಾಡಿನಿಂದ ಹೊರಟ ಭವ್ಯ ಶೋಭಾಯಾತ್ರೆಯಲ್ಲಿ ಸಹಸ್ರ ಸಂಖ್ಯೆಯ ಭಕ್ತಾದಿಗಳು ಪಾಲ್ಗೊಂಡರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಏಷ್ಯಾನೆಟ್ ಕಾಮಿಡಿ ಸ್ಟಾರ್ ತಂಡದ ಹಾಸ್ಯ ರಸ ದೌತಣ, ನೃತ್ಯ ವೈವಿಧ್ಯ ಸಹೃದಯರ ಮನರಂಜಿಸಿತು. ಕೊಪ್ಪಲ್ ಚಂದ್ರಶೇಖರ್ ಅವರಿಂದ ಆಧ್ಯಾತ್ಮಿಕ ಬಾಷಣ, ಕೇರಳ ರಾಜ್ಯ ಪೂರಕ್ಕಳಿ ಅಕಾಡೆಮಿಯ ಅಧ್ಯಕ್ಷರಾಗಿ ಆಯ್ಕೆಗೊಂಡ ಕೆ.ನಾರಾಯಣ ಪಣಿಕ್ಕರ್ ಅವರಿಗೆ ಪುರಸ್ಕಾರ, ಚಾಮುಂಡಿಗುಡ್ಡೆ ಪರಿಸರದ ಕಲಾವಿದರಿಂದ ಕಲಾಪ್ರದರ್ಶನ, ಸ್ಥಳೀಯ ಪ್ರತಿಭಾನ್ವಿತ ವಿದ್ಯಾಥರ್ಿಗಳಿಗೆ ಪ್ರೋತ್ಸಾಹಕ ಬಹುಮಾನ ವಿತರಣೆ, ಧಾಮರ್ಿಕ ತಳಹದಿಯಲ್ಲಿ ಸಾಮಾಜಿಕ ಪ್ರಗತಿಗೆ ಪೂರಕವಾಗಿತ್ತು.
ಕಳಿಯಾಟದ ಕೊನೆಯ ದಿನದಂದು ಪೂಮಾರುತನ್, ರಕ್ತ ಚಾಮುಂಡಿ, ಭಗವತಿ, ಹುಲಿ ರೂಪದ ಮರದ ವಾಹನದ ಮೇಲೆ ಕುಳಿತು ಶ್ರೀ ವಿಷ್ಣುಮೂತರ್ಿ ದೈವದ ದೇವಳ ಪ್ರದಕ್ಷಿಣೆ, ಚಿತ್ತಾರಿ ಬಾರಿಕ್ಕಾಡು ಶ್ರೀ ಮಹಿಷಮದರ್ಿನಿ ಕ್ಷೇತ್ರ ಹಾಗೂ ನಾಯ್ಕರ ಹಿತ್ತಿಲು ನಾಯ್ಕನ ಹಿತ್ತಿಲು ಶ್ರೀ ಮಲ್ಲಿಕಾಜರ್ುನ ದೇವಳಕ್ಕೆ ಶ್ರೀ ವಿಷ್ಣುಮೂತರ್ಿಯ ಕಾಲ್ನಡಿಗೆ ಸಂದರ್ಶನ, ತರುವಾಯ ತೆಂಗಿನಕಾಯಿ ಎಸೆತ, ಶ್ರೀವಿಷ್ಣುಮೂತರ್ಿಯ ತಿರುಮುಡಿ ಅವರೋಹಣದೊಂದಿಗೆ ಕಳಿಯಾಟ ಮಹೋತ್ಸವ ಸಮಾಪ್ತಿಗೊಂಡಿತು.






