ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 03, 2017
ಪೇರಾಲಿನಲ್ಲಿ ಆಡುಗೆ ನೌಕರೆಗೆ ಸನ್ಮಾನ - ಬೀಳ್ಕೊಡುಗೆ
ಕುಂಬಳೆ : ಶಾಲೆಯ ಅಡುಗೆ ಕೆಲಸವೆಂದರೆ ಬಹಳಷ್ಟು ಕಷ್ಟದಾಯಕವಾದುದು, ಆದರೆ ಅದನ್ನು ಪಾವನ ಕಾರ್ಯವೆಂದು ಭಾವಿಸಿದರೆ ನಿಜಕ್ಕೂ ಸಂತೋಷವನ್ನು ಕಾಣಲು ಸಾಧ್ಯ ಎಂದು ಪೇರಾಲು ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮುಹಮ್ಮದ್ ಬಿ ಎ ನುಡಿದರು.
ಅವರು ಪೇರಾಲು ಶಾಲೆಯಲ್ಲಿ ಇಪ್ಪತ್ತೈದು ವರ್ಷಗಳ ಕಾಲ ಮಕ್ಕಳಿಗೆ ಮಧ್ಯಾಹ್ನದ ಆಹಾರ ತಯಾರಿಸುತ್ತಿದ್ದ ಜಯಂತಿ ಪೇರಾಲು ಅವರ ಸನ್ಮಾನ ಮತ್ತು ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಬೀಳ್ಕೊಡುಗೆ ಸಂದರ್ಭದಲ್ಲಿ ಜಯಂತಿ ಅವರಿಗೆ ರಕ್ಷಕ ಶಿಕ್ಷಕ ಸಂಘದ ವತಿಯಿಂದ ಸೀರೆ, ಫಲ,ಪುಷ್ಪ ನೀಡಿ ಗೌರವಿಸಲಾಯಿತು. ಶಾಲಾ ಮುಖ್ಯ ಶಿಕ್ಷಕ ಗುರುಮೂತರ್ಿ ಅಧ್ಯಕ್ಷತೆ ವಹಿಸಿದರು. ಅಧ್ಯಾಪಕ ಮೊಹಮ್ಮದ್ ನೌಫಲ್, ಸುನೀತ, ಪ್ರಸೀನ, ದಿವ್ಯ ಮೊದಲಾದವರು ಶುಭಹಾರೈಸಿದರು. ಸಜಯನ್ ಮಾಸ್ಟರ್ ಸ್ವಾಗತಿಸಿ, ವಂದಿಸಿದರು.





