ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 07, 2017
ಡಿ.10 : `ಸುವರ್ಣ ಲಂಕಾಧೀಶ' ಯಕ್ಷಗಾನ ಪ್ರಸಂಗ ಬಿಡುಗಡೆ ಹಾಗೂ ಪ್ರದರ್ಶನ
ಮಂಜೇಶ್ವರ: ಗಡಿನಾಡ ಪ್ರಸಂಗಕರ್ತ ಯೋಗೀಶ ರಾವ್ ಚಿಗುರುಪಾದೆ ವಿರಚಿತ ಪೌರಾಣಿಕ ಯಕ್ಷಗಾನ ಪ್ರಸಂಗ `ಸುವರ್ಣ ಲಂಕಾಧೀಶ' ಪುಸ್ತಕ ಬಿಡುಗಡೆ ಹಾಗೂ ಪ್ರದರ್ಶನ ಕಾರ್ಯಕ್ರಮವು ಡಿ.10 ರಂದು ಸಂಜೆ ಗಂಟೆ 6.30ರಿಂದ ಬಾಳ್ಯೂರು ಅಯ್ಯಪ್ಪ ಭಜನಾ ಮಂದಿರದ ವಾಷರ್ಿಕೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿ ಜರಗಲಿದೆ.
ಕೊಂಡೆವೂರು ಮಠಾಧೀಶರಾದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಕೃತಿ ಬಿಡುಗಡೆಗೊಳಿಸಲಿದ್ದು ಪಟ್ಲ ಫೌಂಡೇಶನ್ ಉಪ್ಪಳ ಘಟಕದ ಗೌರವಾಧ್ಯಕ್ಷ ಪಿ.ಆರ್.ಶೆಟ್ಟಿ ಪೊಯ್ಯೇಲು ಅಧ್ಯಕ್ಷತೆ ವಹಿಸಲಿದ್ದಾರೆ. ಯಕ್ಷ ಧ್ರುವ ಪಟ್ಲ ಫೌಂಡೇಶನ್ ಮಂಗಳೂರಿನ ಕೇಂದ್ರ ಘಟಕದ ಅಧ್ಯಕ್ಷರಾದ ಸತೀಶ ಶೆಟ್ಟಿ ಪಟ್ಲ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಉಪ್ಪಳ ಘಟಕದ ಅಧ್ಯಕ್ಷ ಸುರೇಶ ಶೆಟ್ಟಿ ಬಳಕ, ಬಾಳ್ಯೂರು ಅಯ್ಯಪ್ಪ ಮಂದಿರದ ಅಧ್ಯಕ್ಷ ಮುತ್ತು ಶೆಟ್ಟಿ ಬಾಳ್ಯೂರು ಉಪಸ್ಥಿತರಿರುವರು. ಖ್ಯಾತ ಯಕ್ಷಗಾನ ಕಲಾವಿದ ರಾಧಾಕೃಷ್ಣ ನಾವಡ ಮಧೂರು ಅವರನ್ನು ಈ ಸಂದರ್ಭ ಗಣ್ಯರ ಸಮಕ್ಷಮ ಸಮ್ಮಾನಿಸಲಾಗುವುದು. ಗುರುರಾಜ ಹೊಳ್ಳ ಬಾಯಾರು ಕೃತಿ ಪರಿಚಯ ಹಾಗೂ ಅಭಿನಂದನಾ ಭಾಷಣ ಗೈಯ್ಯುವರು. ಡಾ. ಜಯಪ್ರಕಾಶ ನಾರಾಯಣ, ಅರವಿಂದಾಕ್ಷ ಭಂಡಾರಿ ಉಪಸ್ಥಿತರಿರುವರರು.
ಖ್ಯಾತ ಕಲಾವಿದ ಜಯಪ್ರಕಾಶ ಶೆಟ್ಟಿ ಪೆಮರ್ುದೆಯವರ ನಿದರ್ೇಶನ ಹಾಗೂ ಸಂಯೋಜನೆಯಲ್ಲಿ ನಡೆಯುವ ಯಕ್ಷಗಾನ ಪ್ರದರ್ಶನದಲ್ಲಿ ಹಿಮ್ಮೇಳದಲ್ಲಿ ಸತೀಶ ಶೆಟ್ಟಿ ಪಟ್ಲ, ಬಲಿಪ ಪ್ರಸಾದ ಭಾಗವತರು, ಗಿರೀಶ ರೈ ಕಕ್ಕೆಪದವು, ದೇಲಂತ ಮಜಲು ಸುಬ್ರಹ್ಮಣ್ಯ ಭಟ್, ಪ್ರಶಾಂತ್ ಶೆಟ್ಟಿ ವಗೆನಾಡು, ಲವಕುಮಾರ್ ಐಲ, ರೋಹಿತ್ ಉಚ್ಚಿಲ, ಓಂ ಪ್ರಕಾಶ ಹಾಗೂ ಮುಮ್ಮೇಳದಲ್ಲಿ ಜಬ್ಬಾರ್ ಸಮೊ ಸಂಪಾಜೆ, ರಾಧಾಕೃಷ್ಣ ನಾವಡ ಮಧೂರು, ಜಯಪ್ರಕಾಶ ಶೆಟ್ಟಿ ಪೆಮರ್ುದೆ, ಅಕ್ಷಯಕುಮಾರ್ ಮಾನರ್ಾಡ್, ಸಂತೋಷ್, ಬಾಲಕೃಷ್ಣ ಸೀತಂಗೋಳಿ, ಅಭಿಷೇಕ್ ಬೆಳ್ಳಾರೆ, ರಕ್ಷಿತ್ ರೈ ದೇಲಂಪಾಡಿ, ಮವ್ವಾರ್ ಬಾಲಕೃಷ್ಣ ಮಣಿಯಾಣಿ, ಮಾಧವ ಕೊಳತ್ತಮಜಲು, ಶಶಿಧರ್ ಕುಲಾಲ್ ಕನ್ಯಾನ, ಗಣೇಶ ಶೆಟ್ಟಿ ಕನ್ನಡಿ ಕಟ್ಟೆ, ಮನೀಶ ಪಾಠಾಳಿ ಎಡನೀರು, ಹರಿ ರಾಜ ಕಿನ್ನಿಗೋಳಿ, ವಿಜಯ ಶಂಕರ ಆಳ್ವ, ಪ್ರಶಾಂತ ಮುಂಡ್ಕೂರು, ಮನೋಜ್ ಎಡನೀರು, ಸಚಿನ್ ಪಂಜತೊಟ್ಟಿ, ವಿಧುರಾಜ್ ಎಡನೀರು ಭಾಗವಹಿಸಲಿದ್ದಾರೆ.





