ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 04, 2017
ಗ್ರಾಮೀಣ ಕೃಷಿ ಸಂತೆಗೆ ಚಾಲನೆ: ಬ್ಲಾಕ್ ಪಂ. ಪರಿಸರದಲ್ಲಿ ಜಿಲ್ಲಾ ಮಟ್ಟದ ಉದ್ಘಾಟನೆ
ಮಂಜೇಶ್ವರ: ಕೇರಳ ಕೃಷಿ ಇಲಾಖೆ ಗ್ರಾಮ ಪಂಚಾಯತು, ಕುಟುಂಬಶ್ರೀ ಮಿಶನ್ ಹಾಗೂ ಹರಿತ ಮಿಶನ್ ಸಹಯೋಗದೊಂದಿಗೆ ನಡೆಸಲ್ಪಡುವ ಗ್ರಾಮೀಣ ಕೃಷಿ ವಾರದ ಸಂತೆಯನ್ನು ಕೇರಳ ಸರಕಾರ 400 ಪಂಚಾಯತುಗಳಲ್ಲಿ ಜಾರಿಗೊಳಿಸಲು ತೀಮರ್ಾನಿಸಿದೆ.
ಗ್ರಾಮೀಣ ಕೃಷಿ ಉತ್ಪನ್ನಗಳನ್ನು ನ್ಯಾಯ ಬೆಲೆಯಲ್ಲಿ ಸ್ಥಳೀಯರಿಂದ ಸಂಗ್ರಹಿಸಿ ಕೃಷಿಕರಿಗೆ ತಲುಪಿಸುವ ಯೋಜನೆಗೆ ಸರಕಾರ ಈ ಮೂಲಕ ಸಾಕಾರಗೊಳಿಸಲಿದೆ.
ಇದರ ಭಾಗವಾಗಿ ಕಾಸರಗೋಡು ಜಿಲ್ಲೆಯಲ್ಲಿ 20 ವಾರ ಸಂತೆಗಳಿಗೆ ಅನುಮತಿ ನೀಡಲಾಗಿದೆ. ಇದರ ಕಾಸರಗೋಡು ಜಿಲ್ಲಾ ಮಟ್ಟದ ಉದ್ಘಾಟನೆ ಮಂಜೇಶ್ವರ ಬ್ಲಾಕ್ ಪಂಚಾಯತು ಪರಿಸರದಲ್ಲಿ ಇತ್ತೀಚೆಗೆ ನಡೆಯಿತು.
ಮಂಜೇಶ್ವರ ಗ್ರಾ. ಪಂ. ಅಧ್ಯಕ್ಷ ಅಬ್ದುಲ್ ಅಝೀಝ್ ಹಾಜಿಯವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮವನ್ನು ಬ್ಲಾಕ್ ಪಂ. ಅಧ್ಯಕ್ಷ ಎ ಕೆ ಎಂ ಅಶ್ರಫ್ ಉದ್ಘಾಟಿಸಿದರು. ಕೃಷಿ ಇಲಾಖೆಯ ಕಾಸರಗೋಡು ಪ್ರಿನ್ಸಿಪಲ್ ಉಷಾ ದೇವಿ ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡಿದರು.
ಬ್ಲಾಕ್ ಪಂಚಾಯತು ಆರೋಗ್ಯ ಹಾಗೂ ವಿದ್ಯಾಭ್ಯಾಸ ಅಭಿವೃದ್ದಿ ಕ್ರಿಯಾ ಸಮಿತಿ ಅಧ್ಯಕ್ಷ ಮುಸ್ತಫ ಉದ್ಯಾವರ ಸಹಿತ ಅಧಿಕಾರಿಗಳು, ಕೃಷಿಕರು ಉಪಸ್ಥಿತರಿದ್ದರು. ತಾಜಾ ತರಕಾರಿ ಹಣ್ಣುಗಳು ಹಾಗೂ ಊರ ಕೋಳಿಗಳ ಮೊಟ್ಟೆ ಸಂತೆಯಲ್ಲಿ ಲಭ್ಯವಾಗುತ್ತಿದ್ದು, ಸಾರ್ವಜನಿಕರನ್ನು ಆಕಷರ್ಿಸುವ ನಿರೀಕ್ಷೆ ಇದೆ.




