"ಸುವರ್ಣ ಲಂಕಾಧೀಶ" ಪ್ರಸಂಗ ಕೃತಿ ಲೋಕಾರ್ಪಣೆ
ಮಂಜೇಶ್ವರ: ಗಡಿನಾಡ ಪ್ರಸಂಗಕರ್ತ ಯೋಗೀಶ ರಾವ್ ಚಿಗುರುಪಾದೆ ವಿರಚಿತ ಪೌರಾಣಿಕ ಯಕ್ಷಗಾನ "ಸುವರ್ಣ ಲಂಕಾಧೀಶ" ಪ್ರಸಂಗ ಪುಸ್ತಕವನ್ನು ಇತ್ತೀಚೆಗೆ ಬಾಳ್ಯೂರು ಅಯ್ಯಪ್ಪ ಭಜನಾ ಮಂದಿರದ ವಾಷರ್ಿಕೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿ ಕೊಂಡೆವೂರು ಮಠಾಧೀಶರಾದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಗಳು ಬಿಡುಗಡೆಗೊಳಿಸಿದರು.
ಈ ಸಂದರ್ಭ ಖ್ಯಾತ ಯಕ್ಷಗಾನ ಕಲಾವಿದ ಜಯಪ್ರಕಾಶ ಶೆಟ್ಟಿ ಪೆಮರ್ುದೆಯವರ ನಿದರ್ೇಶನ ಹಾಗೂ ಸಂಯೋಜನೆಯಲ್ಲಿ 'ಸುವರ್ಣ ಲಂಕಾಧೀಶ' ಪ್ರಸಂಗದ ಪ್ರದರ್ಶನ ಹಾಗೂ ತೆಂಕುತಿಟ್ಟಿನ ಖ್ಯಾತ ಕಲಾವಿದ ರಾಧಾಕೃಷ್ಣ ನಾವಡ ಮಧೂರು ಅವರಿಗೆ ಸನ್ಮಾನ ಕಾರ್ಯಕ್ರಮ ಜರಗಿತು.
ಕೃತಿ ಬಿಡುಗಡೆಗೊಳಿಸಿ ಆಶೀರ್ವದಿಸಿ ಮಾತನಾಡಿದ ಶ್ರೀಗಳು ಪುರಾಣ ಕತೆಗಳನ್ನು ಜನಸಾಮಾನ್ಯರಿಗೆ ತಿಳಿಸುವಲ್ಲಿ ಯಕ್ಷಗಾನದ ಪಾತ್ರ ಮಹತ್ತರವಾದದ್ದು. ಪಾತರ್ಿಸುಬ್ಬ ಹುಟ್ಟಿ ಬೆಳೆದ ನಮ್ಮ ನಾಡಿನಲ್ಲಿ ಅನೇಕ ಯಕ್ಷಗಾನ ಕವಿಗಳು ಕಲಾವಿದರು ಕಲಾಸೇವೆಗೈದು ಕೃತಾರ್ಥರಾಗಿದ್ದಾರೆ. ಅಂತಹ ಸಾಲಿನಲ್ಲಿ ಯೋಗೀಶ ರಾವ್ ಚಿಗುರುಪಾದೆ, ಹಿರಿಯ ಕಲಾವಿದ ರಾಧಾಕೃಷ್ಣ ನಾವಡರನ್ನೂ ಕಾಣಬಹುದು. ಸುವರ್ಣ ಲಂಕಾದೀಶ ಕೃತಿ ನಾಡಿನಲ್ಲಿ ಕಲಾವಿದರಿಂದ, ಪ್ರೇಕ್ಷಕರಿಂದ ಸ್ವೀಕರಿಸಲ್ಪಟ್ಟು ಯಕ್ಷಗಾನ ಲೋಕದಲ್ಲಿ ಬೆಳಗಲಿ ಹಾಗೂ ನಾವಡರಿಗೆ ಇನ್ನಷ್ಟು ಪ್ರಶಸ್ತಿ ಸನ್ಮಾನಗಳು ದೊರೆತು ಇನ್ನಷ್ಟು ಕೀತರ್ಿಲಭಿಸಲಿ ಎಂದು ಶುಭ ಹಾರೈಸಿದರು.
ಯಕ್ಷ ಧ್ರುವ ಪಟ್ಲ ಫೌಂಡೇಶನ್ ಉಪ್ಪಳ ಘಟಕದ ಗೌರವಾಧ್ಯಕ್ಷ ಪಿ.ಆರ್.ಶೆಟ್ಟಿ ಪೊಯ್ಯೆಲು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಹವ್ಯಾಸಿ ಕಲಾವಿದ ಗುರುರಾಜ ಹೊಳ್ಳ ಬಾಯಾರು ಕೃತಿ ಪರಿಚಯ ಹಾಗೂ ಸನ್ಮಾನಿತರಿಗೆ ಅಭಿನಂದನಾ ನುಡಿಗಳನ್ನಾಡಿದರು.
ಬಾಳ್ಯೂರು ಅಯ್ಯಪ್ಪ ಭಜನಾ ಮಂದಿರದ ಸಂಚಾಲಕ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಸ್ವಾಗತಿಸಿ, ಅರವಿಂದಾಕ್ಷ ಭಂಡಾರಿ ಕಾರ್ಯಕ್ರಮ ನಿರ್ವಹಿದರು. ಜಯಪ್ರಕಾಶ ಶೆಟ್ಟಿ ಅಂಗಡಿದಾರು ಸನ್ಮಾನ ಪತ್ರ ವಾಚಿಸಿದರು. ರಾಮಕೃಷ್ಣ ಸಂತಡ್ಕ ವಂದಿಸಿದರು.